Home ಕ್ರೈಂ ನ್ಯೂಸ್ ಹಣದಾಸೆಗೆ ರೂಮ್‌ಮೇಟ್ ಕೊಲೆ? ಅಮೆರಿಕದಲ್ಲಿ ಹೈದರಾಬಾದ್ ಟೆಕ್ಕಿ ಬರ್ಬರ ಹತ್ಯೆ: 8 ತಿಂಗಳ ಬಳಿಕ ಆಗ್ರಾದಲ್ಲಿ ಸಿಕ್ಕಿಬಿದ್ದ ಆರೋಪಿ ಅರ್ಜುನ್ ಶರ್ಮಾ
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಹಣದಾಸೆಗೆ ರೂಮ್‌ಮೇಟ್ ಕೊಲೆ? ಅಮೆರಿಕದಲ್ಲಿ ಹೈದರಾಬಾದ್ ಟೆಕ್ಕಿ ಬರ್ಬರ ಹತ್ಯೆ: 8 ತಿಂಗಳ ಬಳಿಕ ಆಗ್ರಾದಲ್ಲಿ ಸಿಕ್ಕಿಬಿದ್ದ ಆರೋಪಿ ಅರ್ಜುನ್ ಶರ್ಮಾ

Share
ಅಮೆರಿಕ
Share

ವಾಷಿಂಗ್ಟನ್: ಅಮೆರಿಕದಲ್ಲಿ ವಾಸವಿದ್ದ ಹೈದರಾಬಾದ್ ಮೂಲದ ಸಾಫ್ಟ್ ವೇರ್ ಉದ್ಯೋಗಿ ನಿಕಿತಾ ಗೋಡಿಶಾಲ (27) ಅವರನ್ನು ಹತ್ಯೆಗೈದು ಭಾರತಕ್ಕೆ ಪರಾರಿಯಾಗಿದ್ದ ಆರೋಪಿ ಅರ್ಜುನ್ ಶರ್ಮಾ (26) ಎಂಬಾತನನ್ನು 8 ತಿಂಗಳ ಬಳಿಕ ಉತ್ತರ ಪ್ರದೇಶದ ಆಗ್ರಾದಲ್ಲಿ ಬಂಧಿಸಲಾಗಿದೆ.

ಕಳೆದ ಡಿಸೆಂಬರ್ 31, 2025 ರಂದು ಅಮೆರಿಕದ ಮೇರಿಲ್ಯಾಂಡ್‌ ರಾಜ್ಯದ ಕೊಲಂಬಿಯಾದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ನಿಕಿತಾ ಅವರ ಹತ್ಯೆ ನಡೆದಿತ್ತು. ಯುಎಸ್ ಪೊಲೀಸರು ಆರೋಪಿ ಅರ್ಜುನ್ ಶರ್ಮಾನನ್ನು ಆಕೆಯ ಮಾಜಿ ಪ್ರಿಯಕರ ಎಂದು ಉಲ್ಲೇಖಿಸಿದ್ದಾರೆ. ಆದರೆ, ನಿಕಿತಾ ಅವರ ತಂದೆ ಆನಂದ್ ಗೋಡಿಶಾಲ ಅವರು ಈ ವಾದವನ್ನು ತಳ್ಳಿಹಾಕಿದ್ದು, “ಅವರಿಬ್ಬರೂ ಕೇವಲ ರೂಮ್ ಮೇಟ್ ಆಗಿದ್ದರು. ಶರ್ಮಾ ಕೆಲಸ ಕಳೆದುಕೊಂಡಿದ್ದರಿಂದ ನಮ್ಮಿಂದ ಹಣ ಸಾಲ ಪಡೆದಿದ್ದ, ಇದೇ ಹಣಕಾಸಿನ ವಿಚಾರವಾಗಿ ಆಕೆಯನ್ನು ಕೊಲೆ ಮಾಡಿದ್ದಾನೆ” ಎಂದು ಆರೋಪಿಸಿದ್ದಾರೆ.

ಹತ್ಯೆ ಬಳಿಕ ಅಮೆರಿಕದಲ್ಲಿ ನಿಕಿತಾ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿ ಆರೋಪಿ ಭಾರತಕ್ಕೆ ಪರಾರಿಯಾಗಿದ್ದ. ಇತ್ತ ಹೈದರಾಬಾದ್‌ನಲ್ಲಿ ನಿಕಿತಾ ತಂದೆ ನೀಡಿದ ವಂಚನೆ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ತೆಲಂಗಾಣ ಪೊಲೀಸರು, ಆಗ್ರಾದ ಫ್ಲಾಟ್ ಒಂದರಲ್ಲಿ ಅಡಗಿದ್ದ ಅರ್ಜುನ್ ಶರ್ಮಾನನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಮೆರಿಕ ಪೊಲೀಸರು ಆತನ ವಿರುದ್ಧ ‘ರೆಡ್ ಕಾರ್ನರ್ ನೋಟಿಸ್’ ಮತ್ತು ಬಂಧನ ವಾರಂಟ್ ಹೊರಡಿಸಿದ್ದರು. ಸದ್ಯ ದೆಹಲಿಯ ಪಟಿಯಾಲ ಹೌಸ್ ಕೋರ್ಟ್‌ನಲ್ಲಿ ಆತನನ್ನು ಹಾಜರುಪಡಿಸಲಾಗಿದ್ದು, ಅಮೆರಿಕಕ್ಕೆ ಗಡೀಪಾರು (Extradition) ಮಾಡುವ ಪ್ರಕ್ರಿಯೆಗಳು ನಡೆಯುತ್ತಿವೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles