Home ಕ್ರೈಂ ನ್ಯೂಸ್ ದೆಹಲಿ ಮಾಡೆಲ್ ಭೀಕರ ಹತ್ಯೆ: ಜಿಮ್ ಟ್ರೇನರ್ ಇಮ್ರಾನ್ ಎನ್‌ಕೌಂಟರ್‌ನಲ್ಲಿ ಬಂಧನ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ದೆಹಲಿ ಮಾಡೆಲ್ ಭೀಕರ ಹತ್ಯೆ: ಜಿಮ್ ಟ್ರೇನರ್ ಇಮ್ರಾನ್ ಎನ್‌ಕೌಂಟರ್‌ನಲ್ಲಿ ಬಂಧನ!

Share
ಜಿಮ್
Share

ನವದೆಹಲಿ: ದೆಹಲಿಯ ತಿಲಕ್ ನಗರದಲ್ಲಿ 21 ವರ್ಷದ ಮಾಡೆಲ್ ಮುಸ್ಕಾನ್ ಎಂಬಾಕೆಯನ್ನು ಮನೆಯಲ್ಲಿಯೇ ಭೀಕರವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಆರೋಪಿ ಜಿಮ್ ಟ್ರೇನರ್ ಇಮ್ರಾನ್‌ನನ್ನು ದೆಹಲಿ ಪೊಲೀಸರು ಎನ್‌ಕೌಂಟರ್ ನಡೆಸಿ ಬಂಧಿಸಿದ್ದಾರೆ.

ಗುರುವಾರ ರಾತ್ರಿ ರಾಜೌರಿ ಗಾರ್ಡನ್ ಪ್ರದೇಶದಲ್ಲಿ ಆರೋಪಿ ಅಡಗಿರುವ ಮಾಹಿತಿ ಪಡೆದ ಪೊಲೀಸರು ಸುತ್ತುವರಿದಾಗ, ಆರೋಪಿ ಗುಂಡಿನ ದಾಳಿ ನಡೆಸಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಇಮ್ರಾನ್‌ನ ಎರಡೂ ಕಾಲುಗಳಿಗೆ ಗುಂಡು ತಗಲಿದ್ದು, ಆತನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮುಸ್ಕಾನ್ ಹಾಗೂ ಇಮ್ರಾನ್ ಕಳೆದ ಒಂದೂವರೆ ವರ್ಷದಿಂದ ಪರಿಚಿತರಾಗಿದ್ದರು. ಮುಸ್ಕಾನ್ ಬೇರೊಬ್ಬರ ಜೊತೆ ಮಾತನಾಡುತ್ತಿದ್ದಾಳೆ ಎಂಬ ಕಾರಣಕ್ಕೆ ಇಮ್ರಾನ್ ಕಳೆದ ಎರಡು ತಿಂಗಳಿನಿಂದ ಕೋಪಗೊಂಡಿದ್ದ. ಬುಧವಾರ ಸಂಜೆ ಮುಸ್ಕಾನ್ ಮನೆಯಲ್ಲಿ ಒಂಟಿಯಾಗಿದ್ದಾಗ ಬಂದ ಇಮ್ರಾನ್, ಆಕೆಯೊಂದಿಗೆ ಜಗಳವಾಡಿ ಚಾಕುವಿನಿಂದ ಸರಣಿ ದಾಳಿ ನಡೆಸಿ ಪರಾರಿಯಾಗಿದ್ದ. ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದ ಮುಸ್ಕಾನ್‌ಗೆ ಇಮ್ರಾನ್ ಸುದೀರ್ಘ ಕಾಲದಿಂದ ಕಿರುಕುಳ ನೀಡುತ್ತಿದ್ದ ಎಂದು ಕುಟುಂಬಸ್ಥರು ಹಾಗೂ ಸ್ನೇಹಿತರು ಆರೋಪಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *