Home ದಾವಣಗೆರೆ ನಮ್ ಹುಡುಗ್ರು ಬಿಟ್ಟು ನನ್ನ ವಿರುದ್ಧ ತನಿಖೆ ಮಾಡಿ, ನನ್ನನ್ನು ಮುಟ್ಟಿದರೆ ರಾಜ್ಯದಲ್ಲಿ ಏನಾಗುತ್ತೆ ಎಂಬುದನ್ನು ನೋಡಿ: ಡಿಕೆಶಿ, ಪ್ರಿಯಾಂಕ್ ಖರ್ಗೆಗೆ ಹೆಚ್ ಡಿಕೆ ನೇರ ಸವಾಲ್!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ನಮ್ ಹುಡುಗ್ರು ಬಿಟ್ಟು ನನ್ನ ವಿರುದ್ಧ ತನಿಖೆ ಮಾಡಿ, ನನ್ನನ್ನು ಮುಟ್ಟಿದರೆ ರಾಜ್ಯದಲ್ಲಿ ಏನಾಗುತ್ತೆ ಎಂಬುದನ್ನು ನೋಡಿ: ಡಿಕೆಶಿ, ಪ್ರಿಯಾಂಕ್ ಖರ್ಗೆಗೆ ಹೆಚ್ ಡಿಕೆ ನೇರ ಸವಾಲ್!

Share
ರಾಜ್ಯ
Share

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ಸಿದ್ಧಪಡಿಸಲಾಗಿದೆ ಎನ್ನಲಾದ ‘ಸ್ಟಿಂಗ್ ಆಪರೇಷನ್’ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಂಟ್ರಲ್ ಕ್ರೈಮ್ ಬ್ರಾಂಚ್ (ಸಿಸಿಬಿ) ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಜೆಡಿಎಸ್ ಪಕ್ಷದ ಸಾಮಾಜಿಕ ಜಾಲತಾಣ ಕಾರ್ಯಕರ್ತರನ್ನು ಮಾತ್ರ ಗುರಿಯಾಗಿಸಿ ರಾಜಕೀಯ ದುರುದ್ದೇಶದಿಂದ ಕಿರುಕುಳ ನೀಡಲಾಗುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋ ಜಾಲದ ಕುರಿತು ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿದ್ದರಾಮಯ್ಯ ಪರವಾಗಿ ನ್ಯಾಯಾಲಯವು ಯಾವುದೇ ಅಪಪ್ರಚಾರದ ವಿಡಿಯೋಗಳನ್ನು ಪ್ರಕಟಿಸದಂತೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಆದರೆ ಯಾವುದೇ ಅಧಿಕೃತ ಎಫ್‌ಐಆರ್ ಅಥವಾ ಪ್ರಕರಣ ದಾಖಲಿಸದೆಯೇ ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗದ ಸದಸ್ಯ ಶಂಕರ್ ಅವರನ್ನು ಪೊಲೀಸರು ಬಲವಂತವಾಗಿ ವಶಕ್ಕೆ ಪಡೆದಿದ್ದಾರೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ಮತ್ತೊಬ್ಬ ಕಾರ್ಯಕರ್ತ ಮೋಹನ್ ಮನೆಗೆ ತೆರಳಿದ ಪೊಲೀಸರು ಕುಟುಂಬ ಸದಸ್ಯರಿಗೆ ಆತಂಕ ಸೃಷ್ಟಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ನನ್ನನ್ನು ಮುಟ್ಟಿದರೆ ರಾಜ್ಯದಲ್ಲಿ ಏನಾಗುತ್ತದೆ ಎಂಬುದನ್ನು ನೋಡಿ ಎಂದು ಸಿಎಂ ಡಿ. ಕೆ. ಶಿವಕುಮಾರ್ ಹಾಗೂ ಪ್ರಿಯಾಂಕ್ ಖರ್ಗೆಗೆ ನೇರ ಎಚ್ಚರಿಕೆ ನೀಡಿದ್ದಾರೆ.

ಸಿಬಿಐ ತನಿಖೆಗೆ ಒತ್ತಾಯ: ಸ್ಟಿಂಗ್ ಆಪರೇಷನ್ ಮತ್ತು ಅದರ ಹಿಂದೆ ಇರುವ ಪ್ರಮುಖ ಸೂತ್ರಧಾರರ ಬಗ್ಗೆ ನಿಷ್ಪಕ್ಷಪಾತ ತನಿಖೆಗಾಗಿ ಸಿಬಿಐ ತನಿಖೆಗೆ ಒತ್ತಾಯಿಸಲಾಗಿದೆ.

ಜೆಡಿಎಸ್ ಕಾರ್ಯಕರ್ತರ ಮೇಲೆ ದಬ್ಬಾಳಿಕೆ: ತಪ್ಪು ಮಾಡಿದವರನ್ನು ಬಿಟ್ಟು ಪಕ್ಷದ ಸೋಶಿಯಲ್ ಮೀಡಿಯಾ ಕಾರ್ಯಕರ್ತರನ್ನು ಮಾತ್ರ ಟಾರ್ಗೆಟ್ ಮಾಡಿ ಕಿರುಕುಳ ನೀಡಲಾಗುತ್ತಿದೆ.

ಕಾನೂನು ಮತ್ತು ರಾಜಕೀಯ ಹೋರಾಟ: ಪೊಲೀಸರ ಈ ದಬ್ಬಾಳಿಕೆಯನ್ನು ಜೆಡಿಎಸ್ ಪಕ್ಷವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಹಾಗೂ ಕಾನೂನು ಹಾಗೂ ರಾಜಕೀಯವಾಗಿ ಎದುರಿಸಲು ಸಿದ್ಧವಾಗಿದೆ.

ಅಸಲಿ ಸ್ಟಿಂಗ್ ಆಪರೇಷನ್ ಮಾಡಿದವರನ್ನು ಬಿಟ್ಟು ವಿರೋಧ ಪಕ್ಷದ ಕಾರ್ಯಕರ್ತರನ್ನು ದಮನ ಮಾಡಲು ಸರ್ಕಾರ ಮುಂದಾಗಿದೆ ಎಂದು ಕಿಡಿಕಾರಿರುವ ಎಚ್.ಡಿ. ಕುಮಾರಸ್ವಾಮಿ, ತಾಕತ್ತಿದ್ದರೆ ಪೊಲೀಸರು ನೇರವಾಗಿ ತಮ್ಮನ್ನೇ ಎದುರಿಸಲಿ ಎಂದು ಸವಾಲು ಹಾಕಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles