Home ಕ್ರೈಂ ನ್ಯೂಸ್ ಕೆನಡಾದಲ್ಲಿ ಸುಟ್ಟುಹೋದ ಕಾರಿನೊಳಗೆ ಭಾರತೀಯ ಯುವಕನ ಶವ ಪತ್ತೆ: ಪೂರ್ವಯೋಜಿತ ಕೊಲೆ ಶಂಕೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಕೆನಡಾದಲ್ಲಿ ಸುಟ್ಟುಹೋದ ಕಾರಿನೊಳಗೆ ಭಾರತೀಯ ಯುವಕನ ಶವ ಪತ್ತೆ: ಪೂರ್ವಯೋಜಿತ ಕೊಲೆ ಶಂಕೆ!

Share
ಕೆನಡಾ
Share

ವಾಂಕುವರ್ (ಕೆನಡಾ): ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಲ್ಯಾಂಗ್ಲಿ ಪ್ರದೇಶದಲ್ಲಿ ಸುಟ್ಟುಹೋದ ಕಾರಿನೊಳಗೆ 25 ವರ್ಷ ವಯಸ್ಸಿನ ಭಾರತೀಯ ಯುವಕ ತುಷಾರ್ ಶರ್ಮಾ ಅವರ ಶವ ಪತ್ತೆಯಾಗಿರುವುದು ಭಾರೀ ಆಘಾತ ತಂದಿದೆ.

ಇದು ಪೂರ್ವಯೋಜಿತ ಕೊಲೆ ಎಂದು ಕೆನಡಾ ಪೊಲೀಸರು ಶಂಕಿಸಿದ್ದು, ಈ ಕುರಿತು ಪ್ರತ್ಯೇಕ ನರಹತ್ಯೆ ತನಿಖಾ ತಂಡದಿಂದ ತೀವ್ರ ತನಿಖೆ ಆರಂಭಿಸಲಾಗಿದೆ.

ಸುರ್ರೇ ನಿವಾಸಿಯಾಗಿರುವ ತುಷಾರ್ ಶರ್ಮಾ ಯಾವುದೇ ಕ್ರಮಿನಲ್ ಹಿನ್ನೆಲೆ ಹೊಂದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಕ್ಟೋಬರ್ 29ರ ರಾತ್ರಿ 10:30ರ ಸುಮಾರಿಗೆ ರಾವಿನ್ಸನ್ ಕ್ರೆಸೆಂಟ್ ಪ್ರದೇಶದಲ್ಲಿ ಕಾರೊಂದು ಬೆಂಕಿ ಹತ್ತಿಕೊಂಡು ಉರಿಯುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನುಗ್ಗಿಸುವ ಪ್ರಯತ್ನ ನಡೆಸಿದಾಗ ಕಾರಿನೊಳಗೆ ಮಾನವನ ಅಸ್ಥಿಪಂಜರ/ಶವ ಪತ್ತೆಯಾಗಿದೆ.

ಉದ್ದೇಶಪೂರ್ವಕ ಹತ್ಯೆ ಶಂಕೆ: ಮೃತ ತುಷಾರ್ ಶರ್ಮಾ ಅವರಿಗೆ ಯಾವುದೇ ಅಪರಾಧ ಹಿನ್ನೆಲೆ ಇಲ್ಲದಿರುವುದರಿಂದ, ಇದು ನಿರ್ದಿಷ್ಟವಾಗಿ ಅವರನ್ನೇ ಗುರಿಯಾಗಿಸಿ ನಡೆಸಿದ ಕೃತ್ಯವಾಗಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ವಿಶೇಷ ತನಿಖಾ ತಂಡದ ತನಿಖೆ: ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕೆನಡಾದ ಇಂಟಿಗ್ರೇಟೆಡ್ ಹೋಮಿಸೈಡ್ ಇನ್ವೆಸ್ಟಿಗೇಷನ್ ಟೀಮ್  ತನಿಖೆಯ ಹೊಣೆ ಹೊತ್ತಿದ್ದು, ಮೃತರ ಕುಟುಂಬಸ್ಥರು ಹಾಗೂ ಸ್ನೇಹಿತರಿಂದ ಮಾಹಿತಿ ಕಲೆಹಾಕಲಾಗುತ್ತಿದೆ.

ಸಾರ್ವಜನಿಕರ ಸಹಾಯಕ್ಕಾಗಿ ಮನವಿ: ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳು ಅಥವಾ ಸಂಶಯಾಸ್ಪದ ಚಟುವಟಿಕೆಗಳ ಬಗ್ಗೆ ಮಾಹಿತಿ ಇದ್ದರೆ ಸಾರ್ವಜನಿಕರು ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಲಾಗಿದೆ.

Share

Recent Posts

Recent Comments

No comments to show.
Related Articles