SUDDIKSHANA KANNADA NEWS/ DAVANAGERE/ DATE:18-09-2024
ದಾವಣಗೆರೆ: ರಾಜ್ಯದ ನಾನಾ ಕಡೆಗಳಲ್ಲಿ ಗಣೇಶ ಮೆರವಣಿಗೆ ವೇಳೆ ಅಹಿತಕರ ಘಟನೆ ಹಾಗೂ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಶ್ರೀ ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ನಡೆದ ಕೋಮುಗಲಭೆ, ನಂತರದ ದಿನಗಳಲ್ಲಿ
ದಾವಣಗೆರೆಯನ್ನು ಸೇರಿದಂತೆ ನಡೆದ ಸಮಾಜಘಾತಕ ಶಕ್ತಿಗಳ ಪ್ರಚೋದನಕಾರಿ ಪ್ರದರ್ಶನದ ವಿರುದ್ಧ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪಿ. ಬಿ. ರಸ್ತೆಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಜಮಾವಣೆಗೊಂಡು ಪಾಲಿಕೆ ಎದುರು ಪ್ರತಿಭಟನೆ ನಡೆಸಲಾಯಿತು. ಈ ವೇಳ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಹ ಸಂಚಾಲಕ ಸತೀಶ್ ಪೂಜಾರಿ
ಅವರು. ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆಯ ಮೇಲೆ ಕಲ್ಲು ತೂರಿದ್ದರು. ಬೆಂಕಿ ಹಚ್ಚಿದ್ದರು. ಮಂಗಳೂರಿನ ಬಿಸಿ ರೋಡಿಗೆ ಹಿಂದೂಗಳು ಹೇಗೆ ಕಾಲಿಡುತ್ತಾರೆ ಎಂಬ ಎಚ್ಚರಿಕೆ ನೀಡಿದರು. ದಾವಣಗೆರೆಯ ಗಾಂಧಿನಗರದ ಹಿಂದೂಗಳ ಜಾಗದಲ್ಲಿ ಇರುವ ಧ್ವಜ ಇಳಿಸಿ ಇಸ್ಲಾಂ ಧ್ವಜವನ್ನ ಕಟ್ಟಿದರು. ಬ್ಯಾಲೆಸ್ಟ್ರಿನ್ ಧ್ವಜವನ್ನು ಈದ್ ಮಿಲಾದ್ ಮೆರವಣಿಗೆಯಲ್ಲಿ ನಗರದ ಗಾಂಧಿ ವೃತ್ತದಲ್ಲಿ ಮತ್ತು ಅರಳಿಮರ ವೃತ್ತದಲ್ಲಿ ಹಾರಿಸಿರುವುದು ಹಾಗೂ ಫ್ರಿ ಪ್ಯಾಲೆಸ್ಚನ್ ಬರಹದ ಟಿ-ಶರ್ಟುಗಳನ್ನು ಹೊಂದಿರುವುದನ್ನು ವಿರೋಧಿಸಬೇಕು. ರಾಷ್ಟ್ರಭಕ್ತ ಮುಸಲ್ಮಾನರು ಇಂತಹ ರಾಷ್ಟ್ರ ದ್ರೋಹಿಗಳನ್ನು ಪೊಲೀಸರಿಗೆ ಹಿಡಿದು ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ಹಿಂದೂ ಸಮಾಜ 1941 ರಲ್ಲಿ ಜಿನ್ನಾನ ಕನಸಿನಂತೆ ದೇಶ ತುಂಡರಿಸುವ ಸಮಯದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರು ಮುಸಲ್ಮಾನರಿಗಾಗಿ ಪಾಕಿಸ್ತಾನ ಕೊಡುವುದಾದರೆ ಭಾರತವನ್ನು ಹಿಂದೂ ರಾಷ್ಟ್ರವಾಗಿ ಘೋಷಿಸಬೇಕು ಎಂದಿದ್ದರು. ಅಂಬೇಡ್ಕರ್ ಅವರು ಕಂಡ ಕನಸನ್ನು ಇವತ್ತು ನಾವು ಮುಸಲ್ಮಾನ ಮುಕ್ತ ಭಾರತ ಎಂಬ ಘೋಷಣೆಯನ್ನು ಜನರಿಗೆ ಯಾಕೆ ಕೊಡಬಾರದು ಎಂದು ಪ್ರಶ್ನಿಸಿದರು.
ಗಣೇಶೋತ್ಸವದ ಮೆರವಣಿಗೆಗೆ ನೀವು ಕಲ್ಲು ಹೊಡೆಯುವುದಾದರೆ, ಪೆಟ್ರೋಲ್ ಬಾಂಬ್ ಎಸೆಯುವುದಾದರೆ ನಿಮಗೆ ಅಷ್ಟು ಹಿಂದುತ್ವದ ಮೇಲೆ ದ್ವೇಷ ಇದೆ ಎಂಬುದು ಗೊತ್ತಾಗುತ್ತದೆ. ಆದರೆ ಹಬ್ಬ ಹರಿದಿನಗಳಂದು ಅವರ ದೇವರ ಹೂವನ್ನು ಮಾರುವುದು. ಹಣ್ಣು ಮಾರುವುದು, ಅವರಲ್ಲಿಗೆ ವ್ಯಾಪಾರಕ್ಕೆ ಬರುವುದು ನಿಲ್ಲಿಸಿ ಬಿಡಿ. ಆಗ ನೀವು ನಿಜವಾದ ಮುಸಲ್ಮಾನರೆಂದು ಒಪ್ಪುತ್ತೇವೆ. ನೀವು ಈ ದೇಶದ ವಾಸಿಗಳೇ ಆಗಿದ್ದರೆ ಈ ದೇಶಭಕ್ತರೇ ಆಗಿರುವುದು ನಿಜವಾದರೆ
ನಿಮ್ಮ ಮೆರವಣಿಗೆಗಳು ಅಧಿಕ ಸಂಖ್ಯಾತ ಹಿಂದೂ ಬಡಾವಣೆಗಳಲ್ಲಿ ಬಂದಾಗ ಅವರು ಹೇಗೆ ಸ್ವಾಗತಿಸುತ್ತಾರೋ ಹಿಂದುಗಳ ಮೆರವಣಿಗೆ ಬಂದಾಗಲೂ ನೀವು ಅದೇ ರೀತಿ ಸ್ವಾಗತಿಸಬೇಕು ಎಂದು ಆಗ್ರಹಿಸಿದರು.
ಸಣ್ಣಮಕ್ಕಳ ಕೈಯಲ್ಲಿ ಕಲ್ಲು ಹೊಗೆಸುವುದು, ಹೆಣ್ಣು ಮಕ್ಕಳನ್ನು ಮುಂದೆ ಬಿಟ್ಟು ಗಲಾಟೆ ಮಾಡಿಸುವುದನ್ನು ಹಿಂದೂ ಸಮಾಜ ಸಹಿಸುವುದಿಲ್ಲ ಇದೇ ಪ್ರವೃತ್ತಿ ಮುಂದುವರಿದರೆ ನಮ್ಮ ಈ ಹೋರಾಟವು ಅಜಾದ್ ನಗರಕ್ಕೆ ನುಗ್ಗುವುದಿದೆ. ಹಿಂದೂಗಳಿಗೆ ಮಂತ್ರವು ಗೊತ್ತು, ತಂತ್ರವೂ ಗೊತ್ತು. ಮುಂದುವರಿದು ಶಾಸ್ತ್ರತೆಯೂ ಗೊತ್ತು. ಇದನ್ನು ನೀವು ಮನಗಾಣಬೇಕು. ನೀವು ಅಧಿಕ ಸಂಖ್ಯಾತರಾದಲ್ಲಿ ನಮಗೆ ತೊಂದರೆ ಕೊಡುವುದಾದರೆ ನಾವು ಬಹು ಸಂಖ್ಯಾತರಿರುವಲ್ಲಿಯೂ ಸಹ ನಿಮ್ಮವರು ಅಲ್ಪಸಂಖ್ಯಾತರಿದ್ದಾರೆ ಎನ್ನುವುದನ್ನು ಮರೆಯಬೇಡಿ. ಇದೇ ಪ್ರವೃತ್ತಿ ಮುಂದುವರಿದರೆ ಮುಂದಿನ ನಮ್ಮ ನಿಲುವನ್ನು ನಾವೇ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಂದಿನ ಗಣೇಶೋತ್ಸವ ಮೆರವಣಿಗೆಗಳು ಗಣೇಶೋತ್ಸವ ಸಮಿತಿ ಹೇಳಿರುವ ಮಾರ್ಗದಲ್ಲಿಯೇ ಹೋಗಬೇಕು ವಿನಹ ಮೌಲ್ವಿ ಹಾಜರತ್ ಪಾದ್ರಿ ರಾಜಕೀಯ ಮಾರ್ಗಗಳನ್ನು ಪೊಲೀಸರು ಕೊಡಬಾರದು. ಮುಂದಿನ ದಸರಾ ಮಹೋತ್ಸವದ ಮೆರವಣಿಗೆಯು ವೆಂಕಟೇಶ್ವರ ಸರ್ಕಲ್ ಬದಲಾಗಿ ಅರಳಿ ಮರದಿಂದ ಪ್ರಾರಂಭವಾಗುತ್ತದೆ. ಇದಕ್ಕೆ ಮುಸ್ಲಿಂ ಸಮಾಜವೂ, ಪೋಲಿಸ್ ಇಲಾಖೆಯೂ ಸಹಕಾರ ಕೊಡಬೇಕು. ಇಲ್ಲವಾದರೆ ಹಿಂದೂ ಸಮಾಜವೇ ರಕ್ಷಣೆಯನ್ನು ಮಾಡಿಕೊಂಡು ಮಾಡಬೇಕಾಗುತ್ತದೆ. ಮನೆಯನ್ನು ನುಗ್ಗಿರುವುದು ಕಾರ್ಲ್ ಮಾರ್ಕ್ಸ್ ನಗರದ ಹಿಂದೂ ಯುವಕರಿಗೆ ಹಲ್ಲೆ ಮಾಡಿರುವುದು ಸಮಿತಿಯು ಖಂಡಿಸುತ್ತದೆ ಎಂದು ತಿಳಿಸಿದರು.
ಪೋಲಿಸ್ ಇಲಾಖೆಯು ಕೂಡಲೇ ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಮುಂದಿನ ದಿನಗಳಲ್ಲಿ ನಮ್ಮ ಹೋರಾಟವು ಆ ಭಾಗದಲ್ಲಿ ಆಗುತ್ತದೆ. ಅದು ಆಗಬಾರದೆಂದರೆ ಪೊಲೀಸ್ ಇಲಾಖೆ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ವೇದಿಕೆಯ ಪ್ರಮುಖರಾದ ವೀರೇಶ್ ಎಂ, ಅನಿಲ್, ಮಲ್ಲಿಕಾರ್ಜುನ್, ಅಣ್ಣಪ್ಪ, ಶ್ರೀನಿವಾಸ್, ಶಿವಾಜಿ ರಾವ್, ವಿನಾಯಕ ರಾನಡೆ, ಶಂಭುಲಿಂಗಪ್ಪ, ವೀರೇಶ್ ಗೌಳಿ, ಪುನೀತ್, ರಾಜಶೇಖರ್ ಎನ್., ಲೋಕಿಕೆರೆ ನಾಗರಾಜ್, ರಾಜನಹಳ್ಳಿ ಶಿವಕುಮಾರ್, ಎಸ್. ಟಿ. ವೀರೇಶ್, ಶಿವಾನಂದ್, ವಿಶ್ವಾಸ್, ಯೋಗೇಶ್, ಜೊಲ್ಲಿ ಗುರು, ನಾಗರಾಜ್ ಸುರುವೇ, ಕೊಟ್ರೇಶ್, ನವೀನ್, ಕಲ್ಲೇಶ್ ಅರುಣ್ ಗುಡ್ಡದ ಕೆರೆ, ಬಸವರಾಜ್, ಸಿದ್ದೇಶ್, ಕಿರಣ್, ಕಡ್ಲೆಬಾಳು ಧನಂಜಯ, ಚೇತನ ಬಾಯ್, ಭಾಗ್ಯ ಪಿಸಾಳೆ, ಸಹನಾ ಮಂಜುನಾಥ್, ಗೌರಿ ಸತೀಶ್ ಮತ್ತಿತರರು ಪಾಲ್ಗೊಂಡಿದ್ದರು.