Home ಕ್ರೈಂ ನ್ಯೂಸ್ ಗೆಸ್ಟ್ ಹೌಸ್‌ಗೆ ವ್ಯಕ್ತಿ ಜೊತೆ ಬಂದಿದ್ದ ಚಾಂದನಿ ಕುಮಾರಿ ಸಂಶಯಾಸ್ಪದ ಸಾವು: ಯುವತಿ ಜೊತೆಗೆ ಬಂದಿದ್ದವ ಎಸ್ಕೇಪ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಗೆಸ್ಟ್ ಹೌಸ್‌ಗೆ ವ್ಯಕ್ತಿ ಜೊತೆ ಬಂದಿದ್ದ ಚಾಂದನಿ ಕುಮಾರಿ ಸಂಶಯಾಸ್ಪದ ಸಾವು: ಯುವತಿ ಜೊತೆಗೆ ಬಂದಿದ್ದವ ಎಸ್ಕೇಪ್!

Share
ಯುವತಿ
Share

ಬಲ್ಲಬ್‌ಗಢ (ಹರಿಯಾಣ): ಹರಿಯಾಣದ ಫರಿದಾಬಾದ್ ಜಿಲ್ಲೆಯ ಬಲ್ಲಬ್‌ಗಢದಲ್ಲಿರುವ ಒನ್ ಸ್ಟಾರ್ ಗೆಸ್ಟ್ ಹೌಸ್‌ನ ಕೊಠಡಿಯೊಂದರಲ್ಲಿ ಬಿಹಾರ ಮೂಲದ ಚಾಂದನಿ ಕುಮಾರಿ ಎಂಬ ಯುವತಿ ಶನಿವಾರ ರಾತ್ರಿ ಶವವಾಗಿ ಪತ್ತೆಯಾಗಿದ್ದಾರೆ. ಶೇಖರ್ ರಾಮ್ ಎಂಬ ವ್ಯಕ್ತಿಯೊಂದಿಗೆ ಮುಂಜಾನೆ ಗೆಸ್ಟ್ ಹೌಸ್‌ಗೆ ಬಂದಿದ್ದ ಯುವತಿ, ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿರುವುದು ಸ್ಥಳೀಯವಾಗಿ ತೀವ್ರ ಸಂಚಲನ ಮೂಡಿಸಿದೆ.

ಮಧ್ಯಾಹ್ನ ಇಬ್ಬರೂ ಹೊರಗೆ ಹೋಗಿ ಆಹಾರ ತಂದಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ, ಆ ಬಳಿಕ ನಡೆದ ಘಟನೆಗಳ ಬಗ್ಗೆ ಸ್ಪಷ್ಟತೆ ಇಲ್ಲ. ರಾತ್ರಿ 8:30ರ ಸುಮಾರಿಗೆ ಸಿಬ್ಬಂದಿ ನೋಡಿದಾಗ ಯುವತಿ ಶವ ಪತ್ತೆಯಾಗಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಆಗಮಿಸಿದ ಅಪರಾಧ ಶಾಖೆ ಹಾಗೂ ವಿಧಿವಿಜ್ಞಾನ ತಜ್ಞರು ಪರಿಶೀಲನೆ ನಡೆಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸಿವಿಲ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಜತೆಗೆ ಬಂದಿದ್ದ ಶೇಖರ್ ರಾಮ್ ತಲೆಮರೆಸಿಕೊಂಡಿದ್ದು, ಪೊಲೀಸರು ಬಲೆ ಬೀಸಿದ್ದಾರೆ.

ಸಂಶಯಾಸ್ಪದ ಸಾವು: ಗೇಸ್ಟ್ ಹೌಸ್ ಕೋಣೆಯ ಹಾಸಿಗೆಯ ಮೇಲೆ ಯುವತಿಯ ಶವ ಪತ್ತೆಯಾಗಿದ್ದು, ಸಾವಿಗೆ ನಿಖರ ಕಾರಣ ಮರಣೋತ್ತರ ಪರೀಕ್ಷಾ ವರದಿಯ ಬಳಿಕವಷ್ಟೇ ತಿಳಿದುಬರಲಿದೆ.

ತಲೆಮರೆಸಿಕೊಂಡಿರುವ ಶೇಖರ್ ರಾಮ್: ಯುವತಿಯೊಂದಿಗೆ ರೂಮ್‌ಗೆ ಬಂದಿದ್ದ ಶೇಖರ್ ರಾಮ್ ನಾಪತ್ತೆಯಾಗಿದ್ದು, ಪೊಲೀಸರು ಆತನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಪೊಲೀಸ್ ಮತ್ತು ಎಫ್‌ಎಸ್‌ಎಲ್ ತನಿಖೆ: ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹಿಸಿರುವ ಪೊಲೀಸರು, ಅಪರಾಧ ಶಾಖೆ ಹಾಗೂ ವಿಧಿವಿಜ್ಞಾನ ತಜ್ಞರ (FSL) ಸಹಾಯದಿಂದ ತನಿಖೆ ಮುಂದುವರಿಸಿದ್ದಾರೆ.

ಮಹಿಳೆಯ ಸಾವು ಹಾಗೂ ಜೊತೆಗಿದ್ದ ವ್ಯಕ್ತಿ ನಾಪತ್ತೆಯಾಗಿರುವ ಪ್ರಕರಣದ ಸುತ್ತ ಗಂಭೀರ ಅನುಮಾನಗಳು ವ್ಯಕ್ತವಾಗಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ಕೈಗೊಂಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles