ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 5,431 ಪ್ರಥಮ ದರ್ಜೆ ಸಹಾಯಕರ (FDA), ದ್ವಿತೀಯ ದರ್ಜೆ ಸಹಾಯಕರ (SDA) ಹಾಗೂ ವಿವಿಧ ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು, ಒಟ್ಟು ಹುದ್ದೆಗಳಲ್ಲಿ ಆರ್.ಪಿ.ಸಿ (RPC) ಮತ್ತು ಕಲ್ಯಾಣ ಕರ್ನಾಟಕ (KK) ವೃಂದಗಳ ಅಡಿಯಲ್ಲಿ ಹುದ್ದೆಗಳನ್ನು ವರ್ಗೀಕರಿಸಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಅಕ್ಟೋಬರ್ 30, 2026 ರಂದು ಪ್ರಾರಂಭವಾಗಿದ್ದು, ನವೆಂಬರ್ 25, 2026 ರವರೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಮುಂದಿನ ವರ್ಷದ ಜನವರಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ.
ಹುದ್ದೆಗಳ ವಿವರ: ಒಟ್ಟು 5,431 ಹುದ್ದೆಗಳಲ್ಲಿ 2,726 ಎಫ್‌ಡಿಎ (FDA) ಮತ್ತು 2,705 ಎಸ್‌ಡಿಎ (SDA) ಹಾಗೂ ಗ್ರೂಪ್ ‘ಸಿ’ ಹುದ್ದೆಗಳು ಸೇರಿವೆ.
ವಿದ್ಯಾರ್ಹತೆ ಮತ್ತು ವಯೋಮಿತಿ: ಅಭ್ಯರ್ಥಿಗಳು 10ನೇ ತರಗತಿ, ಪಿಯುಸಿ (PUC), ಪದವಿ ಅಥವಾ ಡಿಪ್ಲೊಮಾ ಪೂರ್ಣಗೊಳಿಸಿರಬೇಕು. ಕನಿಷ್ಠ 18 ರಿಂದ ಗರಿಷ್ಠ 35 ವರ್ಷ ವಯೋಮಿತಿಯ ಮೀಸಲಾತಿ ನಿಯಮಗಳು ಅನ್ವಯಿಸುತ್ತವೆ.
ಪ್ರಮುಖ ದಿನಾಂಕಗಳು: ನವೆಂಬರ್ 25, 2026 ಅರ್ಜಿ ಸಲ್ಲಿಸಲು ಕಡೇ ದಿನವಾಗಿದ್ದು, ಜನವರಿ 8, 9, 10, 16 ಮತ್ತು 17 ರಂದು ಪರೀಕ್ಷೆಗಳು ಜರುಗಲಿವೆ.
ಉದ್ಯೋಗಾಕಾಂಕ್ಷಿಗಳು KEA ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಪ್ರಕಟಣೆಯನ್ನು ಪರಿಶೀಲಿಸಲು ಸೂಚಿಸಲಾಗಿದೆ.
Official Website: cetonline.karnataka.gov.in





Leave a comment