ನವದೆಹಲಿ: ವಿಯೆಟ್ನಾಂ ವಿಮಾನ ನಿಲ್ದಾಣವೊಂದರಲ್ಲಿ ಭಾರತೀಯ ಪ್ರವಾಸಿಗರು ಸಾರ್ವಜನಿಕ ಸ್ಥಳದ ನೆಲದ ಮೇಲೆಯೇ ಕುಳಿತು ಊಟ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಟೀಕೆಗೊಳಗಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ರವಾಸಿಗರು ಪಾಲಿಸಬೇಕಾದ ಕನಿಷ್ಠ ನಾಗರಿಕ ಪ್ರಜ್ಞೆ ಹಾಗೂ ನಡವಳಿಕೆಯ ಬಗ್ಗೆ ಪ್ರಸಿದ್ಧ ಉದ್ಯಮಿ ಹರ್ಷ್ ಗೋಯೆಂಕಾ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ವಿದೇಶಗಳಲ್ಲಿ ಭಾರತೀಯರ ಇಂತಹ ನಡವಳಿಕೆಯು ದೇಶದ ವರ್ಚಸ್ಸಿಗೆ ಧಕ್ಕೆ ತರಲಿದೆ ಎಂದು ಆತಂಕ ವ್ಯಕ್ತಪಡಿಸಿರುವ ಅವರು, ವಿಮಾನ ನಿಲ್ದಾಣವನ್ನು ಪಿಂಕ್ನಿಕ್ ಸ್ಪಾಟ್ನಂತೆ ಬಳಸುವುದರ ವಿರುದ್ಧ ಕಿಡಿಕಾರಿದ್ದಾರೆ.
ವೈರಲ್ ವಿಡಿಯೋ: ವಿಯೆಟ್ನಾಂ ವಿಮಾನ ನಿಲ್ದಾಣದಲ್ಲಿ ಭಾರತೀಯ ಪ್ರವಾಸಿಗರ ಗುಂಪೊಂದು ನೆಲದ ಮೇಲೆ ಆಹಾರವನ್ನು ಹರಡಿಕೊಂಡು ಊಟ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ:
Vietnam has become a favourite new destination for Indian travellers. But if we turn their airports into picnic spots, spreading food and litter, we risk becoming very unpopular tourists. When will we learn to travel with civic sense? 😮 pic.twitter.com/pCSC63GHRH
— Harsh Goenka (@hvgoenka) November 7, 2026
ಉದ್ಯಮಿ ಹರ್ಷ್ ಗೋಯೆಂಕಾ ಆಕ್ರೋಶ: ವಿದೇಶಗಳಲ್ಲಿ ಪ್ರವಾಸಿಗರು ಹೇಗೆ ವರ್ತಿಸಬೇಕು ಎಂಬ ಕನಿಷ್ಠ ನಾಗರಿಕ ಪ್ರಜ್ಞೆ ಹಾಗೂ ಸ್ವಚ್ಛತೆಯ ನಿಯಮಗಳನ್ನು ಮರೆಯುತ್ತಿರುವುದರ ಬಗ್ಗೆ ಗೋಯೆಂಕಾ ಪ್ರಶ್ನಿಸಿದ್ದಾರೆ.
ನೆಟ್ಟಿಗರ ಆಕ್ರೋಶ: ಸಿಂಗಾಪುರದಂತಹ ಕಠಿಣ ನಿಯಮಗಳಿರುವ ದೇಶಗಳಲ್ಲಿ ಇಂತಹ ತಪ್ಪು ಮಾಡಲು ಹೆದರುವ ಪ್ರವಾಸಿಗರು, ಇತರ ದೇಶಗಳಲ್ಲಿ ಕನಿಷ್ಠ ಮರ್ಯಾದೆ ಕಾಪಾಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಆಗ್ರಹಿಸಿದ್ದಾರೆ.
ವಿದೇಶಗಳಿಗೆ ತೆರಳುವ ಪ್ರವಾಸಿಗರು ಕೇವಲ ಪ್ರವಾಸವನ್ನು ಆನಂದಿಸುವುದಷ್ಟೇ ಅಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ನಿಯಮಗಳನ್ನು ಪಾಲಿಸುವ ಮತ್ತು ದೇಶದ ಗೌರವವನ್ನು ಕಾಪಾಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.





Leave a comment