ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Harihara: ಮನೆ ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳು ಸೆರೆ: ವಶಪಡಿಸಿಕೊಂಡ ಸ್ವತ್ತು ಎಷ್ಟು ಗೊತ್ತಾ…? ಹರಿಹರ ಪೊಲೀಸರು ಕೊಟ್ಟ ಸೂಚನೆಯೇನು..?

On: September 29, 2023 1:50 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:29-09-2023

ದಾವಣಗೆರೆ: ಮನೆ ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಹರಿಹರ (Hariharaನಗರ ಪೊಲೀಸರು ಬಂಧಿಸಿದ್ದು, 8.16 ಲಕ್ಷ ರೂಪಾಯಿ ಮೌಲ್ಯ.ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

READ ALSO THIS STORY:

STOCK MARKET: ಷೇರುಪೇಟೆಯಲ್ಲಿ ಕರಡಿ ಕುಣಿತ ಜೋರು:ನಿಫ್ಟಿ-192 ಅಂಕ, ಸೆನ್ಸೆಕ್ಸ್ -610 ಅಂಕ ಕುಸಿತ

ಬೆಳಗಾವಿ ಜಿಲ್ಲೆಯ ಸುರೇಶ್‌ ಶಿಂಗ್ರೂರ್ (27), ಕುಂಚಿಕೊರವರ ಗ್ರಾಮದ ದುರುಗಪ್ಪ, ಧಾರವಾಡ ಜಿಲ್ಲೆಯ ನಾಗಪ್ಪ ಅಲಿಯಾಸ್ ನಾಗ (41), ಕೊಲ್ಲಾಪುರದ ಸಂತೋಷ್ ಪವಾರ (28) ಬಂಧಿತ ಆರೋಪಿಗಳು.

ಹರಿಹರ (Harihara) ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹರಿಹರ ನಗರದ ಕೇಶವ ನಗರ ಪಟೇಲ್ ಬಡಾವಣೆಯಲ್ಲಿ ಮನೆ ಕಳ್ಳತನವಾಗಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ನಾಲ್ವರು
ಆರೋಪಿಗಳನ್ನು ಬಂಧಿಸಿ, ಹರಿಹರ (Harihara) ನಗರ ಪೊಲೀಸ್‌ ಠಾಣೆಯ ಒಂದು ಪ್ರಕರಣ, ಗದಗದ ಶಹರ ಪೊಲೀಸ್ ಠಾಣೆಯ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ 7,80,000-ರೂ. ಬೆಲೆಯ 130 ಗ್ರಾಂ ಬಂಗಾರದ ಆಭರಣಗಳು
ಹಾಗೂ 31,500ರೂ ಬೆಲೆಯ ಒಟ್ಟು 435 ಗ್ರಾಂ ಬೆಳ್ಳಿ ಆಭರಣಗಳು ಹಾಗೂ 5000 ರೂ. ನಗದು ಸೇರಿದಂತೆ ಒಟ್ಟು 8,16,500 ರೂಪಾಯಿ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.

ಕಳ್ಳತನ ಮಾಡಿದ ಆರೋಪಿತರನ್ನು ಪತ್ತೆ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್. ಬಿ. ಬಸರಗಿ ಹಾಗೂ ದಾವಣಗೆರೆ ಗ್ರಾಮಾಂತರ ಉಪ-ವಿಭಾಗದ ಡಿವೈಎಸ್ಪಿ ಬಸವರಾಜ್, ಹರಿಹರ (Harihara) ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ದೇವಾನಂದ ಮಾರ್ಗದರ್ಶನದಲ್ಲಿ ಪಿಎಸ್ ಐಗಳಾದ ಪ್ರವೀಣ್ ಕುಮಾರ, ಚಿದಾನಂದಪ್ಪ.ಎಸ್‌.ಬಿ, ಮಂಜುನಾಥ ಕಲ್ಲೆದೇವರ, ಸಿಬ್ಬಂದಿ ಮಂಜುನಾಥ ಬಿ.ವಿ, ದೇವರಾಜ್ ಸೂರ್ವೆ, ಮಂಜುನಾಥ ಕಾತಮ್ಮನವರ, ಹನುಮಂತ ಗೋಪನಾಳ, ಮುರುಗೇಶ್, ಸಿದ್ಧರಾಜು, ರಾಘವೇಂದ್ರ, ಶಾಂತರಾಜ್, ನಾಗರಾಜ ಕುಂಬಾರ, ಅಕ್ತರ್, ವೀರೇಶ, ಅಡಿವೆಪ್ಪನವರ್‌ ಮಾರುತಿ ಇವರುಗಳನ್ನೊಳಗೊಂಡ ತಂಡವು ಆರೋಪಿತರನ್ನು ಪತ್ತೆ ಮಾಡಿ ಮಾಲು ಅಮಾನತುಪಡಿಸಿಕೊಂಡಿದೆ. ಈ ತಂಡಕ್ಕೆ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಸರಗಿ ರವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ:

ಸಾರ್ವಜನಿಕರು ತಮ್ಮ ಮನೆಗಳಿಗೆ ಬೀಗ ಹಾಕಿಕೊಂಡು ಬೇರೆ ಬೇರೆ ಊರುಗಳಿಗೆ ಹೋಗುವಾಗ ಮನೆಯಲ್ಲಿ, ಬೆಲೆಬಾಳುವ ವಸ್ತುಗಳನ್ನು ಬಿಟ್ಟು ಹೋಗಬಾರದು. ಬೀಗ ಹಾಕಿಕೊಂಡು ಹೋಗುವ ಬಗ್ಗೆ ಮುಂಚಿತವಾಗಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದಲ್ಲಿ ನಿಮ್ಮ ಮನೆಗಳ ಕಡೆಗೆ ಹೆಚ್ಚಿನ ಗಸ್ತು ಕರ್ತವ ನಿರ್ವಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment