Home ಕ್ರೈಂ ನ್ಯೂಸ್ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಪ್ರತಿದಿನ ಕುಡಿದು ಬಂದು ಕಾಟ ಕೊಡ್ತಿದ್ದ ಗಂಡನನ್ನೇ ಕಲ್ಲಿನಿಂದ ಜಜ್ಜಿ ಕೊಂದಿದ್ದ ಪತ್ನಿ, ಮಗ ಬಂಧನ
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಪ್ರತಿದಿನ ಕುಡಿದು ಬಂದು ಕಾಟ ಕೊಡ್ತಿದ್ದ ಗಂಡನನ್ನೇ ಕಲ್ಲಿನಿಂದ ಜಜ್ಜಿ ಕೊಂದಿದ್ದ ಪತ್ನಿ, ಮಗ ಬಂಧನ

Share
ದಾವಣಗೆರೆ
Share

ದಾವಣಗೆರೆ: ಕೌಟುಂಬಿಕ ದೌರ್ಜನ್ಯ ಹಾಗೂ ನಿರಂತರ ಕಿರುಕುಳ ತಾಳಲಾರದೆ ಪತ್ನಿ ಮತ್ತು ಮಗನೇ ಸೇರಿ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಹರಿಹರ ತಾಲ್ಲೂಕಿನ ಚಿಕ್ಕಬಿದರಿ ಗ್ರಾಮದಲ್ಲಿ ನಡೆದಿದೆ. ಪ್ರಕರಣ ದಾಖಲಾದ ಕೆಲವೇ ದಿನಗಳಲ್ಲಿ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಲೆಯಾದ ವ್ಯಕ್ತಿಯ ಗುರುತು:

ಚಿಕ್ಕಬಿದರಿ ಗ್ರಾಮದ ನಿವಾಸಿ ಶಿವಪ್ಪ ತಂದೆ ಕೆಂಚಪ್ಪ (44 ವರ್ಷ) ಕೊಲೆಯಾದ ದುರ್ದೈವಿ. ಜೂನ್ 22ರ ತಡರಾತ್ರಿಯಿಂದ ಜೂನ್ 23ರ ಮುಂಜಾನೆ 04:30ರ ಅವಧಿಯಲ್ಲಿ ಮನೆಯ ಹಿಂಭಾಗದಲ್ಲಿ ಯಾರೋ ದುಷ್ಕರ್ಮಿಗಳು ಕಲ್ಲಿನಿಂದ ತಲೆಗೆ ಹೊಡೆದು ಶಿವಪ್ಪನನ್ನು ಕೊಂದಿದ್ದರು. ಈ ಬಗ್ಗೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 119/2026, ಬಿಎನ್‌ಎಸ್ ಕಲಂ 103(1) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆಯಲ್ಲಿ ಬಯಲಾಯ್ತು ಕೊಲೆಯ ಅಸಲಿ ರಹಸ್ಯ!

ಘಟನಾ ಸ್ಥಳಕ್ಕೆ ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ (SP) ಶ್ರೀ ಶೇಖರ್ ಹೆಚ್ ಟಿ ಐಪಿಎಸ್ ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆಗೆ ದಿಕ್ಕು ತೋರಿಸಿದ್ದರು. ಗ್ರಾಮಾಂತರ ಡಿವೈಎಸ್ಪಿ ಶ್ರೀ ಬಸವರಾಜ್ ಬಿ.ಎಸ್ ಮಾರ್ಗದರ್ಶನದಲ್ಲಿ ಹರಿಹರ ವೃತ್ತ ನಿರೀಕ್ಷಕರಾದ ಶ್ರೀ ಸುರೇಶ ಸಗರಿ ಅವರು ಖಚಿತ ಮಾಹಿತಿ ಮೇರೆಗೆ ಮೃತನ ಪತ್ನಿ ಹಾಗೂ ಮಗನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಿದ್ದಿದೆ.

ಕೊಲೆಗೆ ಕಾರಣವೇನು?

ಮೃತ ಶಿವಪ್ಪ ಪ್ರತಿದಿನ ಮದ್ಯಪಾನ ಮಾಡಿ ಮನೆಗೆ ಬಂದು ಪತ್ನಿ ಮತ್ತು ಮಗನೊಂದಿಗೆ ಜಗಳವಾಡುತ್ತಿದ್ದ. ಅಲ್ಲದೆ ಅವರಿಬ್ಬರ ಮೇಲೆ ನಿರಂತರವಾಗಿ ದೈಹಿಕ ಹಾಗೂ ಮಾನಸಿಕ ದೌರ್ಜನ್ಯ ಎಸಗುತ್ತಿದ್ದ. ಈ ಕಿರುಕುಳದಿಂದ ಬೇಸತ್ತಿದ್ದ ಇಬ್ಬರೂ, ಪೂರ್ವನಿಯೋಜಿತವಾಗಿ ಸಂಚು ರೂಪಿಸಿ ಕಲ್ಲಿನಿಂದ ತಲೆಗೆ ಹಲ್ಲೆ ನಡೆಸಿ ಶಿವಪ್ಪನನ್ನು ಕೊಲೆ ಮಾಡಿರುವುದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ.

ಆರೋಪಿಗಳು ಈಗ ನ್ಯಾಯಾಂಗ ಬಂಧನದಲ್ಲಿ:

ಕೊಲೆ ಕೃತ್ಯದ ಆರೋಪಿಗಳಾದ ಎ-1 ಸಾವಿತ್ರಮ್ಮ (39 ವರ್ಷ) ಮತ್ತು ಎ-2 ಹನುಮನಗೌಡ (22 ವರ್ಷ) ಅವರನ್ನು ಪೊಲೀಸರು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸದ್ಯ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಪೊಲೀಸ್ ತಂಡಕ್ಕೆ ಹಿರಿಯ ಅಧಿಕಾರಿಗಳ ಶ್ಲಾಘನೆ:

ಅತಿ ಕಡಿಮೆ ಅವಧಿಯಲ್ಲಿ ಕೊಲೆ ಪ್ರಕರಣದ ರಹಸ್ಯ ಭೇದಿಸಿ ಆರೋಪಿಗಳನ್ನು ಬಂಧಿಸಿದ ಹರಿಹರ ವೃತ್ತದ ಪೊಲೀಸ್ ಅಧಿಕಾರಿಗಳಾದ ಸುರೇಶ ಸಗರಿ (ಸಿಪಿಐ), ಯುವರಾಜ ಕಂಬಳಿ (ಪಿಎಸ್ಐ, ಗ್ರಾಮಾಂತರ) ಹಾಗೂ ಸಿಬ್ಬಂದಿಗಳಾದ ಮಹಮ್ಮದ್ ಇಲಿಯಾಜ್ (ಎಎಸ್ಐ), ಲಿಂಗರಾಜ್, ರಮೇಶ್, ನೀಲಮೂರ್ತಿ, ಗಿರೀಶ್ ಗೌಡ, ದೇವರಾಜ ಸುರ್ವೆ, ಸತೀಶ್, ಅರ್ಜುನ್ ರಾಯಲ್, ರಿಜ್ವಾನ್ ನಾಸೂರ್, ಷಣ್ಮುಖ, ಪ್ರಸನ್ನಕಾಂತ, ಕಡೆಮನಿ ನಾಗಪ್ಪ, ಮುರಳಿಧರ.ವಿ, ವಿ. ಸಿದ್ದಪ್ಪ ಮತ್ತು ಶ್ರೀಮತಿ ಸುನೀತಾ ಅವರ ಕಾರ್ಯಕ್ಷಮತೆಯನ್ನು ಎಸ್ಪಿ  ಶೇಖರ್ ಹೆಚ್.ಟಿ ಹಾಗೂ ಹೆಚ್ಚುವರಿ ಎಸ್ಪಿ ಪರಮೇಶ್ವರ ಹೆಗಡೆ ಶ್ಲಾಘಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles