Home ದಾವಣಗೆರೆ ಶಾಲೆ ಬಳಿ, ರಸ್ತೆ ಪಕ್ಕ ಇಸ್ಫೀಟ್ ಜೂಜಾಟ: ದಾವಣಗೆರೆ ಜಿಲ್ಲೆಯ 4 ಕಡೆ ಪೊಲೀಸ್ ರೈಡ್, 27 ಸಾವಿರಕ್ಕೂ ಹೆಚ್ಚು ಹಣ ಸೀಜ್ ಜೊತೆಗೆ 28 ಜೂಜುಕೋರರು ವಶಕ್ಕೆ!
ದಾವಣಗೆರೆಕ್ರೈಂ ನ್ಯೂಸ್ಬೆಂಗಳೂರು

ಶಾಲೆ ಬಳಿ, ರಸ್ತೆ ಪಕ್ಕ ಇಸ್ಫೀಟ್ ಜೂಜಾಟ: ದಾವಣಗೆರೆ ಜಿಲ್ಲೆಯ 4 ಕಡೆ ಪೊಲೀಸ್ ರೈಡ್, 27 ಸಾವಿರಕ್ಕೂ ಹೆಚ್ಚು ಹಣ ಸೀಜ್ ಜೊತೆಗೆ 28 ಜೂಜುಕೋರರು ವಶಕ್ಕೆ!

Share
ದಾವಣಗೆರೆ
Share

ದಾವಣಗೆರೆ: ಜಿಲ್ಲೆಯ ವಿವಿಧೆಡೆ ಇಸ್ಫೀಟ್ ಜೂಜಾಟದ ಅಡ್ಡೆಗಳ ಮೇಲೆ ಪೊಲೀಸರು ಭರ್ಜರಿ ದಾಳಿ ನಡೆಸಿದ್ದಾರೆ. ಪ್ರತ್ಯೇಕ ಸ್ಥಳಗಳಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಒಟ್ಟು 28 ಜನರನ್ನು ವಶಕ್ಕೆ ಪಡೆಯಲಾಗಿದ್ದು, ಅವರಿಂದ 27,260 ರೂ. ನಗದು ಹಣವನ್ನು ಜಪ್ತಿ ಮಾಡಲಾಗಿದೆ.

ಡಿವೈಎಸ್ಪಿಗಳ ಮಾರ್ಗದರ್ಶನದಲ್ಲಿ ಆಯಾ ಠಾಣಾ ವ್ಯಾಪ್ತಿಯ ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಖಚಿತ ಮಾಹಿತಿ ಮೇರೆಗೆ ಈ ದಾಳಿಗಳನ್ನು ಸಂಘಟಿಸಿದ್ದರು.

ಸಂತೇಬೆನ್ನೂರು:

ಚಿಕ್ಕಬೆನ್ನೂರು ಗ್ರಾಮದ ಶಾಲೆಯ ಬಳಿ ಸಿಪಿಐ ಶ್ರೀಮತಿ ಮಲ್ಲಮ್ಮ ಚೌಬೆ ನೇತೃತ್ವದಲ್ಲಿ ದಾಳಿ ನಡೆಸಿ, 3 ಜನರನ್ನು ಬಂಧಿಸಿ 6,300 ರೂ. ವಶಪಡಿಸಿಕೊಳ್ಳಲಾಗಿದೆ.

ಬಿಳಿಚೋಡು:

ಅಸಗೋಡು ಹೊಸೂರು ಗ್ರಾಮದಲ್ಲಿ ಪೊಲೀಸ್ ನಿರೀಕ್ಷಕ ನೂರ್ ಅಹಮದ್ ನೇತೃತ್ವದಲ್ಲಿ ದಾಳಿ ನಡೆಸಿ, 5 ಜನರನ್ನು ಬಂಧಿಸಿ 3,210 ರೂ. ಜಪ್ತಿ ಮಾಡಲಾಗಿದೆ.

ಚನ್ನಗಿರಿ:

ಮಲಹಾಳ್ ಗೊಲ್ಲರಹಟ್ಟಿ ರಸ್ತೆ ಪಕ್ಕದಲ್ಲಿ ನಿರೀಕ್ಷಕ ರವೀಶ್ ಕೆ.ಎನ್ ನೇತೃತ್ವದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ, ಬರೋಬ್ಬರಿ 14 ಜನರನ್ನು ವಶಕ್ಕೆ ಪಡೆದು 13,150 ರೂ. ಹಣ ವಶಪಡಿಸಿಕೊಳ್ಳಲಾಗಿದೆ.

ಹೊನ್ನಾಳಿ:

ಬೇಲಿ ಮಲ್ಲೂರು-ಅರಕೆರೆ ರಸ್ತೆಯ ಹೊರವಲಯದಲ್ಲಿ ನಿರೀಕ್ಷಕ ಸುನೀಲ್ ಕುಮಾರ ನೇತೃತ್ವದಲ್ಲಿ ದಾಳಿ ನಡೆಸಿ, 6 ಜನರನ್ನು ಬಂಧಿಸಿ 5,200 ರೂ. ವಶಪಡಿಸಿಕೊಳ್ಳಲಾಗಿದೆ.

ಎಲ್ಲಾ ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದಂತೆ ಆಯಾ ಪೊಲೀಸ್ ಠಾಣೆಗಳಲ್ಲಿ ಕಾನೂನು ಬಾಹಿರ ಜೂಜಾಟದ ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.

Share

Leave a comment

Leave a Reply

Your email address will not be published. Required fields are marked *