Home ಕ್ರೈಂ ನ್ಯೂಸ್ ವಶಪಡಿಸಿಕೊಂಡ ಮೊಬೈಲ್ ವಾಪಸ್ ನೀಡಲು ಲಂಚ ಪಡೆದ ಮಹಿಳಾ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಎಸಿಬಿ ಬಲೆಗೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ವಶಪಡಿಸಿಕೊಂಡ ಮೊಬೈಲ್ ವಾಪಸ್ ನೀಡಲು ಲಂಚ ಪಡೆದ ಮಹಿಳಾ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಎಸಿಬಿ ಬಲೆಗೆ!

Share
ಪೊಲೀಸ್
Share

ವಡೋದರಾ (ಗುಜರಾತ್): ಗುಜರಾತ್‌ನ ವಡೋದರಾ ಜಿಲ್ಲೆಯ ದಭೋಯ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಸಬ್‌ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಏಕ್ತಾ ಪಾಂಡ್ಯ, ದೂರುದಾರರಿಂದ 20,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.

ನಿಷೇಧಿತ ಪ್ರಕರಣದ ತನಿಖೆಯ ವೇಳೆ ವಶಪಡಿಸಿಕೊಂಡಿದ್ದ ಮೊಬೈಲ್ ಫೋನ್ ಅನ್ನು ವಾಪಸ್ ನೀಡಲು ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ದೂರುದಾರರ ವಿರುದ್ಧ ದಭೋಯ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರೊಹಿಬಿಷನ್ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಏಕ್ತಾ ಪಾಂಡ್ಯ ತನಿಖೆ ನಡೆಸುತ್ತಿದ್ದರು. ಗುಜರಾತ್ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದು ಠಾಣೆಗೆ ಆಗಮಿಸಿದ ದೂರುದಾರರಿಗೆ ಮೊಬೈಲ್ ಮರಳಿಸಲು ಪಿಎಸ್‌ಐ 20,000 ರೂ.ಗೆ ಬೇಡಿಕೆ ಇಟ್ಟಿದ್ದರು. ಲಂಚ ನೀಡಲು ಇಷ್ಟವಿಲ್ಲದ ದೂರುದಾರರು ಎಸಿಬಿಗೆ ದೂರು ನೀಡಿದ್ದು, ನವೆಂಬರ್ 17ರಂದು ಎಸಿಬಿ ತಂಡವು ಬೊಂಬಾಟ್ ಕಾರ್ಯಾಚರಣೆ ನಡೆಸಿ ಎಸ್‌ಐ ಏಕ್ತಾ ಪಾಂಡ್ಯ ಅವರನ್ನು ರೆಡ್‌ಹ್ಯಾಂಡ್‌ ಆಗಿ ಬಂಧಿಸಿದೆ.

ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಪಿಎಸ್‌ಐ: ದೂರುದಾರರಿಂದ 20,000 ರೂ. ಲಂಚ ಪಡೆಯುತ್ತಿದ್ದ ವೇಳೆ ಛೋಟಾ ಉದೈಪುರ್ ಎಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ ಎಸ್.ಕೆ. ಚಾರೆಲ್ ನೇತೃತ್ವದ ತಂಡವು ದಾಳಿ ನಡೆಸಿ ಹಣವನ್ನು ವಶಕ್ಕೆ ಪಡೆದಿದೆ.

ಮೊಬೈಲ್ ವಾಪಸ್ ನೀಡಲು ಹಣದ ಬೇಡಿಕೆ: ವಶಪಡಿಸಿಕೊಂಡ ಮೊಬೈಲ್ ಫೋನ್ ಅನ್ನು ಮರಳಿಸಲು ಮಹಿಳಾ ಪೊಲೀಸ್ ಅಧಿಕಾರಿಯು ಲಂಚಕ್ಕೆ ಪಟ್ಟು ಹಿಡಿದಿದ್ದು ತನಿಖೆಯಿಂದ ಬಹಿರಂಗವಾಗಿದೆ.

ಆರೋಪಿ ಪೊಲೀಸ್ ಹಿನ್ನೆಲೆ: 37 ವರ್ಷ ವಯಸ್ಸಿನ ಏಕ್ತಾ ಪಾಂಡ್ಯ ಅವರು ಮೂಲತಃ ಅಮ್ರೇಲಿ ಜಿಲ್ಲೆಯವರಾಗಿದ್ದು, ದಭೋಯ್ ರೈಲ್ವೆ ಕಾಲೋರಿಯಲ್ಲಿ ವಾಸಿಸುತ್ತಿದ್ದರು. ಪ್ರಸ್ತುತ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.

Share

Recent Posts

Recent Comments

No comments to show.
Related Articles