Home ದಾವಣಗೆರೆ Gruhalakshmi Big Update: ಗೃಹಲಕ್ಷ್ಮಿ ಹಣ ಬೇಕಾದ್ರೆ ವೋಟರ್ ಐಡಿ ಕಡ್ಡಾಯ! ಈ 4 ತಪ್ಪುಗಳಿದ್ರೆ ಇಂದೇ ಸರಿಪಡಿಸಿ
ದಾವಣಗೆರೆಬೆಂಗಳೂರುವಾಣಿಜ್ಯ

Gruhalakshmi Big Update: ಗೃಹಲಕ್ಷ್ಮಿ ಹಣ ಬೇಕಾದ್ರೆ ವೋಟರ್ ಐಡಿ ಕಡ್ಡಾಯ! ಈ 4 ತಪ್ಪುಗಳಿದ್ರೆ ಇಂದೇ ಸರಿಪಡಿಸಿ

Share
ಗೃಹಲಕ್ಷ್ಮಿ
Share

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ‘ ಯೋಜನೆಯ (Gruhalakshmi Scheme) ಫಲಾನುಭವಿಗಳಿಗೆ ಇದೀಗ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಯೋಜನೆಯಲ್ಲಿ ಪಾರದರ್ಶಕತೆ ತರಲು ಮತ್ತು ನೈಜ ಫಲಾನುಭವಿಗಳನ್ನು ಗುರುತಿಸಲು ಸರ್ಕಾರವು ಈಗ ‘ಪುನರ್ ಪರಿಶೀಲನೆ’ (Re-verification) ಪ್ರಕ್ರಿಯೆಯನ್ನು ಆರಂಭಿಸುತ್ತಿದೆ. ಇದರ ಭಾಗವಾಗಿ ಪ್ರತಿಯೊಬ್ಬ ಮಹಿಳೆಯರಿಗೂ ವೋಟರ್ ಐಡಿ ಕಾರ್ಡ್ ಇರುವುದು ಕಡ್ಡಾಯಗೊಳಿಸಲಾಗಿದೆ.

ನಿಮ್ಮ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿಯಲ್ಲಿರುವ ಪ್ರಮುಖ ಮಾಹಿತಿಗಳಲ್ಲಿ ಸಣ್ಣ ವ್ಯತ್ಯಾಸವಿದ್ದರೂ ಗೃಹಲಕ್ಷ್ಮಿ ಯೋಜನೆಯ ಮಾಸಿಕ 2,000 ರೂಪಾಯಿ ಹಣ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.

ಯಾವೆಲ್ಲಾ ಮಾಹಿತಿಗಳು ಒಂದೇ ರೀತಿ ಇರಬೇಕು?

ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ವಿವರಗಳು ವೋಟರ್ ಐಡಿಯಲ್ಲಿಯೂ (ಮತದಾರರ ಗುರುತಿನ ಚೀಟಿ) ನೂರಕ್ಕೆ ನೂರರಷ್ಟು ಒಂದೇ ರೀತಿಯಾಗಿ ಇರಬೇಕು. ಪ್ರಮುಖವಾಗಿ ಈ ಕೆಳಗಿನ 4 ವಿವರಗಳನ್ನು ಪರಿಶೀಲಿಸಲಾಗುತ್ತದೆ:

  1. ಫಲಾನುಭವಿಯ ಹೆಸರು (Name)

  2. ತಂದೆ ಅಥವಾ ಗಂಡನ ಹೆಸರು (Father / Husband Name)

  3. ಜನ್ಮ ದಿನಾಂಕ (Date of Birth)

  4. ವಿಳಾಸ (Address)

ವ್ಯತ್ಯಾಸವಿದ್ದಲ್ಲಿ ಇ-ಕೆವೈಸಿ (e-KYC) ಆಗಲ್ಲ!

ಒಂದು ವೇಳೆ ಈ ಎರಡು ದಾಖಲೆಗಳಲ್ಲಿ ಸ್ಪೆಲ್ಲಿಂಗ್ ತಪ್ಪಾಗಿದ್ದರೆ ಅಥವಾ ಮಾಹಿತಿಗಳಲ್ಲಿ ಹೊಂದಾಣಿಕೆ ಆಗದಿದ್ದರೆ ಇ-ಕೆವೈಸಿ ಪ್ರಕ್ರಿಯೆ ವಿಫಲಗೊಳ್ಳುತ್ತದೆ (KYC Reject). ಕೆವೈಸಿ ಪೂರ್ಣಗೊಳ್ಳದಿದ್ದರೆ ಬ್ಯಾಂಕ್ ಖಾತೆಗೆ ಜಮಾ ಆಗುವ ಗೃಹಲಕ್ಷ್ಮಿ ಹಣ ತಕ್ಷಣವೇ ನಿಲ್ಲಬಹುದು.

ತಕ್ಷಣವೇ ಈ ಕೆಲಸ ಮಾಡಿ:

ನಿಮ್ಮ ದಾಖಲೆಗಳಲ್ಲಿ ಯಾವುದೇ ವ್ಯತ್ಯಾಸವಿದ್ದಲ್ಲಿ ಆತಂಕಪಡಬೇಡಿ. ತಕ್ಷಣವೇ ನಿಮ್ಮ ಹತ್ತಿರದ ನಮ್ಮ ಸೇವಾ ಕೇಂದ್ರ, ಕರ್ನಾಟಕ ಒನ್ ಅಥವಾ ಸೈಬರ್ ಸೆಂಟರ್‌ಗಳಿಗೆ ಭೇಟಿ ನೀಡಿ, ಆಧಾರ್ ಮತ್ತು ವೋಟರ್ ಐಡಿ ಎರಡರಲ್ಲೂ ಮಾಹಿತಿ ಒಂದೇ ತರ ಇರುವಂತೆ ಅಪ್ಡೇಟ್ ಮಾಡಿಸಿಕೊಳ್ಳಿ. ಆ ಮೂಲಕ ಯಾವುದೇ ಅಡೆತಡೆಯಿಲ್ಲದೆ ಗೃಹಲಕ್ಷ್ಮಿ ಹಣವನ್ನು ಪಡೆಯಿರಿ.

Share

Leave a comment

Leave a Reply

Your email address will not be published. Required fields are marked *

Related Articles