Home ಕ್ರೈಂ ನ್ಯೂಸ್ ಮೆಟಾ ಬಿಗ್ ಆಕ್ಷನ್: 7 ಲಕ್ಷಕ್ಕೂ ಹೆಚ್ಚು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಖಾತೆಗಳು ಬ್ಲಾಕ್, ನಿಮ್ಮ ಖಾತೆ ಸೇಫ್ ಇದೆಯಾ?
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಮೆಟಾ ಬಿಗ್ ಆಕ್ಷನ್: 7 ಲಕ್ಷಕ್ಕೂ ಹೆಚ್ಚು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಖಾತೆಗಳು ಬ್ಲಾಕ್, ನಿಮ್ಮ ಖಾತೆ ಸೇಫ್ ಇದೆಯಾ?

Share
ಮೆಟಾ
Share

ನವದೆಹಲಿ: ಆಸ್ಟ್ರೇಲಿಯಾದಲ್ಲಿ ಜಾರಿಗೆ ಬಂದಿರುವ ಹೊಸ ಸಾಮಾಜಿಕ ಜಾಲತಾಣ ವಯಸ್ಸಿನ ಮಿತಿ ನಿಯಮಕ್ಕೆ ಅನುಗುಣವಾಗಿ ಮೆಟಾ (Meta) ಸಂಸ್ಥೆಯು ಬೃಹತ್ ಕ್ರಮ ಕೈಗೊಂಡಿದೆ.

16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರಿಗೆ ಸೇರಿದ ಶಂಕಿತ 7 ಲಕ್ಷಕ್ಕೂ ಹೆಚ್ಚು ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್ ಖಾತೆಗಳನ್ನು ಮೆಟಾ ಸಂಸ್ಥೆಯು ಡಿಲೀಟ್ (Deactivate) ಮಾಡಿದೆ.

ಡಿಸೆಂಬರ್‌ನಿಂದ ಜೂನ್ ಅವಧಿಯಲ್ಲಿ ಸಂಸ್ಥೆಯು 4,62,000 ಇನ್‌ಸ್ಟಾಗ್ರಾಮ್ ಹಾಗೂ 2,94,000 ಫೇಸ್‌ಬುಕ್ ಖಾತೆಗಳನ್ನು ತೆಗೆದುಹಾಕಿದೆ. ಆಸ್ಟ್ರೇಲಿಯಾ ಸರ್ಕಾರವು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಹಿತದೃಷ್ಟಿಯಿಂದ 16 ವರ್ಷದೊಳಗಿನ ಮಕ್ಕಳು ಸೋಶಿಯಲ್ ಮೀಡಿಯಾ ಬಳಕೆಯನ್ನೇ ನಿಷೇಧಿಸಿ ಡಿಸೆಂಬರ್ 10 ರಂದು ಕಟ್ಟುನಿಟ್ಟಿನ ಕಾಯ್ದೆ ಜಾರಿಗೆ ತಂದಿತ್ತು.

ವಯಸ್ಸನ್ನು ಗುರುತಿಸಲು ಮೆಟಾ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸುತ್ತಿದ್ದು, ಪ್ರೊಫೈಲ್‌ನಲ್ಲಿರುವ ಹುಟ್ಟುಹಬ್ಬದ ಆಚರಣೆ, ಶಾಲಾ ತರಗತಿಯ ಉಲ್ಲೇಖಗಳು ಹಾಗೂ ಇತರೆ ಚಟುವಟಿಕೆಗಳ ಆಧಾರದ ಮೇಲೆ ಖಾತೆಗಳನ್ನು ಪತ್ತೆಹಚ್ಚಿ ರದ್ದುಗೊಳಿಸುತ್ತಿದೆ. ನಿಯಮ ಪಾಲಿಸದ ಕಂಪನಿಗಳಿಗೆ ಆಸ್ಟ್ರೇಲಿಯಾ ಸರ್ಕಾರ ಸುಮಾರು 99 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ವರೆಗೆ ದಂಡ ವಿಧಿಸುವ ನಿರೀಕ್ಷೆಯಿದ್ದು, ಮೆಟಾ ತನ್ನ ಈ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles