Home ಕ್ರೈಂ ನ್ಯೂಸ್ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಪಹಲ್ಗಾಮ್ ಹತ್ಯೆ ರೂವಾರಿ, ವಾಂಟೆಂಡ್ ಉಗ್ರರ ಭಾಗಿ: ವೈರಲ್ ವಿಡಿಯೋದಿಂದ ಪಾಕ್ ಅಸಲಿ ಮುಖ ಜಗತ್ತಿಗೆ ಬಹಿರಂಗ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಪಹಲ್ಗಾಮ್ ಹತ್ಯೆ ರೂವಾರಿ, ವಾಂಟೆಂಡ್ ಉಗ್ರರ ಭಾಗಿ: ವೈರಲ್ ವಿಡಿಯೋದಿಂದ ಪಾಕ್ ಅಸಲಿ ಮುಖ ಜಗತ್ತಿಗೆ ಬಹಿರಂಗ!

Share
ಶೋಯೆಬ್ ಅಖ್ತರ್
Share

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಅವರ ಹಿರಿಯ ಸಹೋದರ ಶಾಹಿದ್ ಅಖ್ತರ್ ಅವರ ಅಂತ್ಯಕ್ರಿಯೆಯಲ್ಲಿ ನಿಷೇಧಿತ ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ಉಗ್ರರು ಭಾಗವಹಿಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.

ಇಸ್ಲಾಮಾಬಾದ್‌ನ ಎಚ್-8 ಸ್ಮಶಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾರತದ ಪಹಲ್ಗಾಮ್ ದಾಳಿಯ ಮಾಸ್ಟರ್‌ಮೈಂಡ್ ಸೈಫುಲ್ಲಾ ಕಸೂರಿ ಮುಕ್ತವಾಗಿ ತಿರುಗಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಭಾರತಕ್ಕೆ ಕಂಟಕವಾಗಿದ್ದ ಉಗ್ರರ ಪ್ರತ್ಯಕ್ಷ:

2025 ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಉಗ್ರ ದಾಳಿಯಲ್ಲಿ 25 ಪ್ರವಾಸಿಗರು ಸಾವನ್ನಪ್ಪಿದ್ದರು. ಈ ದಾಳಿಯ ಮುಖ್ಯ ಸಂಚುಗಾರ ಹಾಗೂ ಲಷ್ಕರ್ ಉಪಮುಖ್ಯಸ್ಥನಾಗಿರುವ ಸೈಫುಲ್ಲಾ ಕಸೂರಿ ಈ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಾನೆ. ಇದರೊಂದಿಗೆ ಲಷ್ಕರ್ ಸಂಘಟನೆಯ ರಾಜಕೀಯ ಮುಖವಾಡ ಎನ್ನಲಾದ ಪಾಕಿಸ್ತಾನ್ ಮರ್ಕಜಿ ಮುಸ್ಲಿಂ ಲೀಗ್ (PMML) ಅಧ್ಯಕ್ಷ ಇನಾಮ್ ಉರ್ ರೆಹಮಾನ್ ಕೂಡ ಉಪಸ್ಥಿತನಿದ್ದನು.

ಪಾಕ್ ಸೇನೆಯ ಬೆಂಬಲದ ಒಪ್ಪಿಗೆ: ಸೈಫುಲ್ಲಾ ಕಸೂರಿ ಇತ್ತೀಚೆಗೆ ಬಿಡುಗಡೆ ಮಾಡಿದ್ದ ಮತ್ತೊಂದು ವಿಡಿಯೋದಲ್ಲಿ, ತನಗೆ ಪಾಕಿಸ್ತಾನ ಸೇನೆಯ ಸಂಪೂರ್ಣ ಬೆಂಬಲವಿದೆ ಎಂದು ಒಪ್ಪಿಕೊಂಡಿದ್ದಾನೆ.

“ಪಾಕ್ ಸೇನೆಯು ತನ್ನ ಸೈನಿಕರ ಅಂತ್ಯಕ್ರಿಯೆಯ ಪ್ರಾರ್ಥನೆಗೆ ನನ್ನನ್ನು ಆಹ್ವಾನಿಸುತ್ತದೆ, ನನ್ನನ್ನು ಕಂಡು ಭಾರತವೂ ಹೆದರುತ್ತದೆ” ಎಂದು ಆತ ಹೇಳಿಕೊಂಡಿರುವುದು ಪಾಕಿಸ್ತಾನದ ಭಯೋತ್ಪಾದನಾ ಪ್ರೇರಿತ ನಿಲುವನ್ನು ಮತ್ತೊಮ್ಮೆ ಜಗತ್ತಿನೆದುರು ಬೆತ್ತಲೆ ಮಾಡಿದೆ. ಭಾರತವು ಕಳೆದ ವರ್ಷ ನಡೆಸಿದ ‘ಆಪರೇಷನ್ ಸಿಂದೂರ್’ ದಾಳಿಯ ಬಳಿಕ ಉಗ್ರ ಸಂಘಟನೆಗಳು ಮತ್ತೆ ಸಕ್ರಿಯವಾಗುತ್ತಿರುವುದು ಭಾರತೀಯ ಗುಪ್ತಚರ ಇಲಾಖೆಯ ಆತಂಕಕ್ಕೆ ಕಾರಣವಾಗಿದೆ.

Share

Leave a comment

Leave a Reply

Your email address will not be published. Required fields are marked *