ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಅನರ್ಹರು ಮತ್ತು ಡಬಲ್ ಖಾತೆ ಹಾಗೂ ಸತ್ತವರ ಹೆಸರಿನಲ್ಲಿ ಹಣ ಸಂದಾಯವಾಗಿರುವುದು ಪತ್ತೆಯಾಗಿದೆ. 900ಕ್ಕೂ ಹೆಚ್ಚು ಫಲಾನುಭವಿಗಳು ಮೃತಪಟ್ಟಿದ್ದರೂ ಹಣ ಖಾತೆಗೆ ಜಮೆಯಾಗಿದೆ. ಹಾಗಾಗಿ, ಗಂಭೀರವಾಗಿ ಪರಿಗಣಿಸಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ದಿಟ್ಟ ಕ್ರಮಕ್ಕೆ ಮುಂದಾಗಿದೆ.
ಎಷ್ಟಿದ್ದಾರೆ ಫಲಾನುಭವಿಗಳು?
ದಾವಣಗೆರೆ ಜಿಲ್ಲೆಯು ಮಧ್ಯಕರ್ನಾಟಕದ ಕೇಂದ್ರ ಬಿಂದು. ಈ ಜಿಲ್ಲೆಯೊಂದರಲ್ಲಿ 3 ಲಕ್ಷದ 63 ಸಾವಿರ ಗೃಹಲಕ್ಷ್ಮೀ ಯೋಜನೆಯಡಿ ಪ್ರಯೋಜನ ಪಡೆಯುತ್ತಿದ್ದಾರೆ. ಈಗಾಗಲೇ ಇವರ ಖಾತೆಗೂ ಹಣ ಜಮಾವಣೆಯಾಗುತ್ತಿದೆ. ಆದರೆ 900 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಇವರ ಖಾತೆಗೂ ಹಣ ಸಂದಾಯವಾಗುತಿತ್ತು. ಇದನ್ನು ಪತ್ತೆ ಹಚ್ಚಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಸರ್ಕಾರದ ಸೂಚನೆ ಮೇರೆಗೆ ಮಾಹಿತಿ ಕಲೆ ಹಾಕಿ ಹಣ ತಡೆ ಹಿಡಿದಿದೆ.
36 ಲಕ್ಷ ರೂ. ಸರ್ಕಾರಕ್ಕೆ ವಾಪಸ್:
ಗೃಹಲಕ್ಷ್ಮಿ ಯೋಜನೆಯ ಅನರ್ಹ ಮತ್ತು ಒಬ್ಬರ ಎರಡೆರಡು ಬ್ಯಾಂಕ್ ಖಾತೆಗೆ ಜಮಾವಣೆಯಾಗುತ್ತಿದ್ದ ಹಣಕ್ಕೆ ಬ್ರೇಕ್ ಹಾಕಿದೆ. ಸುಮಾರು 36 ಲಕ್ಷ ರೂಪಾಯಿ ವಾಪಸ್ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ.
ಮುಖ್ಯ ಮುಖ್ಯಾಂಶಗಳು
ಒಟ್ಟು ಫಲಾನುಭವಿಗಳು: ದಾವಣಗೆರೆ ಜಿಲ್ಲೆಯೊಂದರಲ್ಲೇ 3,63,000 ಮಹಿಳೆಯರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ.
ಮೃತರ ಖಾತೆಗೆ ಹಣ: ಸುಮಾರು 900ಕ್ಕೂ ಹೆಚ್ಚು ಫಲಾನುಭವಿಗಳು ಮರಣ ಹೊಂದಿದ್ದರೂ ಅವರ ಖಾತೆಗಳಿಗೆ ಹಣ ಜಮೆಯಾಗುತ್ತಿರುವುದು ಪತ್ತೆಯಾಗಿದೆ.
ಅನರ್ಹರ ಪ್ರಮಾಣ: ಜಿಲ್ಲೆಯಲ್ಲಿ 1,500ಕ್ಕೂ ಹೆಚ್ಚು ಅನರ್ಹರು ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಪರಿಶೀಲನೆ ನಡೆಯುತ್ತಿದೆ.
ಹಣ ವಾಪಸ್: ಅಕ್ರಮವಾಗಿ ಜಮೆಯಾಗುತ್ತಿದ್ದ ಸುಮಾರು 36 ಲಕ್ಷ ರೂಪಾಯಿ ಹಣವನ್ನು ತಡೆ ಹಿಡಿದು, ಮತ್ತೆ ಸರ್ಕಾರಕ್ಕೆ ವಾಪಸ್ ಕಳುಹಿಸಲಾಗಿದೆ.
ಸರ್ಕಾರದಿಂದ ಬಂದಿದೆ ಲೀಸ್ಟ್!
ಇನ್ನು ರಾಜ್ಯಸರ್ಕಾರದಿಂದ ಎಲ್ಲಾ ಜಿಲ್ಲೆಗಳಿಗೂ ಅನರ್ಹರ ಪಟ್ಟಿ ಕಳುಹಿಸಿಕೊಡಲಾಗಿದೆ. ಇದನ್ನು ಪರಿಶೀಲಿಸುವಂತೆಯೂ ಸೂಚನೆ ನೀಡಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 1500ಕ್ಕೂ ಹೆಚ್ಚು ಅನರ್ಹರು ಪ್ರಯೋಜನ ಪಡೆಯುತ್ತಿದ್ದಾರೆ
ಎಂಬ ಆರೋಪ ಕೇಳಿ ಬಂದಿದೆ. ಹಾಗಾಗಿ, ಪರಿಶೀಲಿಸುವಂತೆ ಸೂಚನೆ ನೀಡಿದೆ. ಈ ಪಟ್ಟಿಯಲ್ಲಿರುವವರು ಅನರ್ಹರೋ ಅಥವಾ ಸರ್ಕಾರಕ್ಕೆ ವಂಚಿಸುತ್ತಿದ್ದಾರೆಯೋ ಎಂಬ ಕುರಿತಂತೆ ಪರಿಶೀಲನೆ ನಡೆಸಲಾಗುತ್ತಿದೆ. ಪರಿಶೀಲನೆ ನಡೆಸಿದ ಬಳಿಕವಷ್ಟೇ
ಎಷ್ಟು ಮಂದಿ ಅನರ್ಹರಿದ್ದಾರೆ ಎಂಬುದು ಗೊತ್ತಾಗಲಿದೆ.
ಹೇಗೆ ಯೋಜನೆ ದುರುಪಯೋಗ ಗೊತ್ತಾ?
ಗೃಹಲಕ್ಷ್ಮಿ ಯೋಜನೆಯ ಕೆಲ ಫಲಾನುಭವಿಗಳು ಡೂಪ್ಲಿಕೇಟ್ ಅಕೌಂಟ್ ಮಾಡಿಸಿರುವುದು ಪತ್ತೆಯಾಗಿದೆ. ಒಬ್ಬ ಫಲಾನುಭವಿಯ ಬೇರೆ ಬೇರೆ ಬ್ಯಾಂಕ್ ಖಾತೆಗೆ ಹಣ ಸಂದಾಯವಾಗಿದೆ. ಹಾಗಾಗಿ, ಇದನ್ನು ಪತ್ತೆ ಹಚ್ಚಲು ಕಾರ್ಯಾಚರಣೆ ಶುರು ಮಾಡಲಾಗಿದೆ.
ಹೇಗೆ ನಡೆಯುತ್ತೆ ಕಾರ್ಯಾಚರಣೆ?
ಗ್ರಾಮ ಮಟ್ಟದಿಂದ ಹಿಡಿದು ಹೋಬಳಿ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಇದ್ದಾರೆ. ಅವರಿಂದ ಮರಣ ಆದವರ ಮಾಹಿತಿ ಪಡೆಯಲಾಗುತ್ತದೆ. ಜನನ ಮತ್ತು ಮರಣ ನೋಂದಣಿ ಪರಿಶೀಲಿಸಲಾಗುತ್ತದೆ. ಅಂಗನವಾಡಿ ಕಾರ್ಯಕರ್ತೆಯರಿಗೆ
ಲಾಗಿನ್ ಕೊಟ್ಟಿರುವುದರಿಂದ ಮಾಹಿತಿಯೂ ಸಿಗುತ್ತಿದೆ.
ಬಯೋಮೆಟ್ರಿಕ್:
ಯೋಜನೆಯ ದುರುಪಯೋಗ ಪಡೆಯಲು ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ ಸ್ಪಷ್ಟ ನಿರ್ದೇಶನಗಳು, ಮಾರ್ಗಸೂಚಿಗಳು ಇದುವರೆಗೆ ಬಂದಿಲ್ಲ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು ಏನಂತಾರೆ?
ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯ ಅನರ್ಹರು. ದುರುಪಯೋಗ ತಡೆಗೆ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೊಳಿಸುತ್ತಿದೆ ಎಂಬ ವಿಚಾರದ ಮಾಹಿತಿ ಇದೆ. ಆದರೆ ಸರ್ಕಾರದಿಂದ ಇದುವರೆಗೆ ಮಾರ್ಗಸೂಚಿಗಳು, ನಿರ್ದೇಶನಗಳು ಬಂದಿಲ್ಲ. ಇದು ಬಂದ ಬಳಿಕ ಕಾರ್ಯಪ್ರವೃತ್ತರಾಗುತ್ತೇವೆ. ಗ್ಯಾರಂಟಿ ಯೋಜನೆಗಳ ಅಧ್ಯಕ್ಷರ ನಿರ್ದೇಶನದಂತೆ ಅನರ್ಹರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಸರ್ಕಾರದ ಯೋಜನೆ ಅರ್ಹರಿಗೆ ತಲುಪಿಸುವಲ್ಲಿ ಜಿಲ್ಲೆಯು ಮುಂಚೂಣಿಯಲ್ಲಿದೆ. 3 ಲಕ್ಷದ 63 ಸಾವಿರ ಫಲಾನುಭವಿಗಳ ಖಾತೆಗೆ ಹಣ ಜಮಾವಣೆಯಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕ ಕೆ. ಎಸ್. ರಾಜಾನಾಯ್ಕ ಅವರು ಸುದ್ದಿಕ್ಷಣ ಡಿಜಿಟಲ್ ನ್ಯೂಸ್ ಮೀಡಿಯಾಕ್ಕೆ ಮಾಹಿತಿ ನೀಡಿದ್ದಾರೆ.
- Anganwadi verification Gruhalakshmi
- Davanagere Gruhalakshmi scam check
- Gruhalakshmi biometric guidelines
- Gruhalakshmi biometric update
- Gruhalakshmi dead beneficiaries news
- Gruhalakshmi duplicate accounts
- Gruhalakshmi illegal accounts
- Gruhalakshmi ineligible list Karnataka
- Gruhalakshmi Scheme Davanagere
- Karnataka Guarantee schemes updates
- KS Rajanaik Davanagere
- ಕೆ ಎಸ್ ರಾಜಾನಾಯ್ಕ ದಾವಣಗೆರೆ
- ಗೃಹಲಕ್ಷ್ಮಿ ಡಬಲ್ ಅಕೌಂಟ್
- ಗೃಹಲಕ್ಷ್ಮಿ ಬಯೋಮೆಟ್ರಿಕ್ ವ್ಯವಸ್ಥೆ
- ಗೃಹಲಕ್ಷ್ಮಿ ಯೋಜನೆ ಅನರ್ಹರ ಪಟ್ಟಿ
- ದಾವಣಗೆರೆ ಗೃಹಲಕ್ಷ್ಮಿ ಅಕ್ರಮ
- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
- ಮೃತರ ಖಾತೆಗೆ ಗೃಹಲಕ್ಷ್ಮಿ ಹಣ
- ಹಲಕ್ಷ್ಮಿ ಯೋಜನೆ ದಾವಣಗೆರೆ





Leave a comment