Home ಕ್ರೈಂ ನ್ಯೂಸ್ ಮದುವೆ ಮುಗಿಸಿ ಹಿಂತಿರುಗುತ್ತಿದ್ದ ಮೂವರು ಯುವಕರು ಮಸಣಕ್ಕೆ, ಇಬ್ಬರ ಸ್ಥಿತಿ ಗಂಭೀರ: ಸಂಭ್ರಮದ ಮನೆಯಲ್ಲೀಗ ಸೂತಕ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಮದುವೆ ಮುಗಿಸಿ ಹಿಂತಿರುಗುತ್ತಿದ್ದ ಮೂವರು ಯುವಕರು ಮಸಣಕ್ಕೆ, ಇಬ್ಬರ ಸ್ಥಿತಿ ಗಂಭೀರ: ಸಂಭ್ರಮದ ಮನೆಯಲ್ಲೀಗ ಸೂತಕ!

Share
ಯುವಕರು
Share

ಕೋಟ್‌ಪುಟ್ಲಿ (ರಾಜಸ್ಥಾನ): ರಾಜಸ್ಥಾನದ ಜೈಪುರ-ದೆಹಲಿ ರಾಷ್ಟ್ರೀಯ ಹೆದ್ದಾರಿ-48 ರಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮದುವೆ ಸಮಾರಂಭ ಮುಗಿಸಿ ತಮ್ಮ ಗ್ರಾಮಕ್ಕೆ ವಾಪಸ್ಸಾಗುತ್ತಿದ್ದ ಕಾರಿನಲ್ಲಿದ್ದ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ  ನಡೆದಿದೆ.

ಹೆದ್ದಾರಿಯಲ್ಲಿ ಯಾವುದೇ ಸೂಚನೆ ನೀಡದೆ ಏಕಾಏಕಿ ಟ್ರಕ್ (ಡಂಪರ್) ನಿಲ್ಲಿಸಿದ್ದೇ ಈ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದು, ಘಟನೆಯಲ್ಲಿ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬುಧವಾರ ಬೆಳಗಿನ ಜಾವ 1:30 ರ ಸುಮಾರಿಗೆ ಭಗ್ವಾಡಿ ಗ್ರಾಮದಲ್ಲಿ ನಡೆದ ತಮ್ಮ ಸೋದರಸಂಬಂಧಿಗಳ ಮದುತೆಯಲ್ಲಿ ಪಾಲ್ಗೊಂಡು ಭುಂಡನ್‌ವಾಡ ಕಲಾನ್ ಗ್ರಾಮಕ್ಕೆ ಐವರು ಯುವಕರು ಕಾರಿನಲ್ಲಿ ವಾಪಸ್ಸಾಗುತ್ತಿದ್ದರು. ದಹ್ಮಿ ಕಲ್ವರ್ಟ್ ಬಳಿ ಇಳಿದುಕೊಳ್ಳುವಾಗ ಡಂಪರ್ ಚಾಲಕ ಯಾವುದೇ ಸೂಚನಾ ದೀಪಗಳನ್ನು (ಬ್ರೇಕ್ ಲೈಟ್ ಅಥವಾ ಇಂಡಿಕೇಟರ್) ಹಾಕದೆ ಹೆದ್ದಾರಿ ಮಧ್ಯೆ ಏಕಾಏಕಿ ವಾಹನ ನಿಲ್ಲಿಸಿದ್ದಾನೆ.

ಇದನ್ನು ಗಮನಿಸದ ಹಿಂದಿನಿಂದ ವೇಗವಾಗಿ ಬಂದ ಕಾರು ನೇರವಾಗಿ ಡಂಪರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಭೀಕರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಮೃತರ ವಿವರ: ಅಪಘಾತದ ತೀವ್ರತೆಗೆ ದೇವ್‌ಕುಂದರ್ ಕುಮಾರ್ ಮತ್ತು ಹೇಮಂತ್ ಕುಮಾರ್ ಅವರು ಬೆಹ್ರೋರ್‌ನ ಪಾರ್ಕ್ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಸಾವನ್ನಪ್ಪಿದ್ದಾರೆ. ಕಾರು ಚಾಲಾಯಿಸುತ್ತಿದ್ದ ಹರೀಶ್ ಕುಮಾರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಲ್ವಾರ್‌ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರೂ ಸಹ ಮೃತಪಟ್ಟಿದ್ದಾರೆ.

ಗಾಯಾಳುಗಳ ಸ್ಥಿತಿ ಗಂಭೀರ: ಅಪಘಾತದಲ್ಲಿ ಗಾಯಗೊಂಡಿರುವ ಹರ್ಷ್ ಕುಮಾರ್ ಮತ್ತು ಸಾಹಿಲ್ ಕುಮಾರ್ ಅವರನ್ನು ಕ್ರಮವಾಗಿ ನಿಮ್ಸ್ ಆಸ್ಪತ್ರೆ (NIMS Hospital) ಹಾಗೂ ಸತೀಶ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಡಂಪರ್ ಚಾಲಕನ ನಿರ್ಲಕ್ಷ್ಯ: ಯಾವುದೇ ಸೂಚನೆ ನೀಡದೆ ಹೆದ್ದಾರಿ ಮಧ್ಯೆ ವಾಹನ ನಿಲ್ಲಿಸಿದ ಡಂಪರ್ ಚಾಲಕನ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ಕಾರಣ ಎಂದು ಸಂತ್ರತರ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.

ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಹರಿಯಾಣ ನೊಂದಣಿಯ ಡಂಪರ್ (HR 30 AM 6716) ಹಾಗೂ ಜಖಂಗೊಂಡಿರುವ ಕಾರನ್ನು (HR 35Q 7012) ವಶಕ್ಕೆ ಪಡೆದುಕೊಂಡಿದ್ದಾರೆ. ಮೃತರ ಶವಗಳ ಮರಣೋತ್ತರ ಪರೀಕ್ಷೆ ಪೂರ್ಣಗೊಳಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

Share

Recent Posts

Recent Comments

No comments to show.
Related Articles