Home ದಾವಣಗೆರೆ ವಿಟಿಯು ಘಟಿಕೋತ್ಸವ: ಜಿಎಂಐಟಿ ಕಾಲೇಜಿಗೆ 7 ರ‍್ಯಾಂಕ್‌ಗಳ ಅಭೂತಪೂರ್ವ ಸಾಧನೆ
ದಾವಣಗೆರೆಬೆಂಗಳೂರು

ವಿಟಿಯು ಘಟಿಕೋತ್ಸವ: ಜಿಎಂಐಟಿ ಕಾಲೇಜಿಗೆ 7 ರ‍್ಯಾಂಕ್‌ಗಳ ಅಭೂತಪೂರ್ವ ಸಾಧನೆ

Share
ರ‍್ಯಾಂಕ್‌
Share

ದಾವಣಗೆರೆ: ಇಲ್ಲಿನ ಪ್ರತಿಷ್ಠಿತ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯ (GMIT) ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) 26ನೇ ಘಟಿಕೋತ್ಸವದಲ್ಲಿ ಒಟ್ಟು 7 ರ‍್ಯಾಂಕ್‌ಗಳನ್ನು ಪಡೆದುಕೊಳ್ಳುವ ಮೂಲಕ ಜಿಲ್ಲೆಗೆ ಹಾಗೂ ಕಾಲೇಜಿಗೆ ಅಭೂತಪೂರ್ವ ಕೀರ್ತಿ ತಂದಿದೆ.

ವಿಶ್ವವಿದ್ಯಾಲಯ ಮಟ್ಟದ ಶೈಕ್ಷಣಿಕ ವಿಭಾಗದಲ್ಲಿ ಜಿಎಂಐಟಿ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ತೋರಿದ್ದು, ರೋಬೋಟಿಕ್ಸ್ ಮತ್ತು ಆಟೋಮೇಷನ್ ವಿಭಾಗದಲ್ಲೇ ಗರಿಷ್ಠ 5 ರ‍್ಯಾಂಕ್‌ಗಳು ಜೊತೆಗೆ ಇನ್ಫಾರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್, ಬಯೋಟೆಕ್ನಾಲಜಿ ವಿಭಾಗ ತಲಾ ಒಂದು ರ‍್ಯಾಂಕ್‌ಗಳು ಲಭಿಸಿವೆ.

ರೋಬೋಟಿಕ್ಸ್ ಮತ್ತು ಆಟೋಮೇಷನ್ ವಿಭಾಗದ ಮೀನಾಕ್ಷಿ ವಿ.ಬಿ ಮೊದಲ ರ‍್ಯಾಂಕ್ (ಚಿನ್ನದ ಪದಕ) ಪಡೆದಿದ್ದು, ಕಿರಣ್ ಜೆ 2ನೇ ರ‍್ಯಾಂಕ್, ಪುಣ್ಯ ಟಿ.ಎಮ್ 4ನೇ ರ‍್ಯಾಂಕ್, ಎಸ್. ದೀಪ್ತಿ 5ನೇ ರ‍್ಯಾಂಕ್, ಸುಕೃತಿ ಎಸ್. ಜಂಪಣ್ಣನವರ್ 6ನೇ ರ‍್ಯಾಂಕ್ ಪಡೆದಿದ್ದಾರೆ.

ಜೊತೆಗೆ ಇನ್ಫಾರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ (ISE) ವಿಭಾಗದ ರೇವತಿ ಜಿ 4ನೇ ರ‍್ಯಾಂಕ್ ತಮ್ಮದಾಗಿಸಿಕೊಂಡಿದ್ದಾರೆ. ಬಯೋಟೆಕ್ನಾಲಜಿ ವಿಭಾಗದ ಮಮತಾ ಹೆಚ್.ಜಿ 9ನೇ ರ‍್ಯಾಂಕ್ ಪಡೆದಿದ್ದಾರೆ.

ವಿದ್ಯಾರ್ಥಿಗಳ ಈ ಮಹತ್ತರ ಸಾಧನೆಗೆ ಹರ್ಷ ವ್ಯಕ್ತಪಡಿಸಿರುವ ಜಿಎಂಐಟಿ ಅಧ್ಯಕ್ಷ ಜಿ.ಎಂ. ಲಿಂಗರಾಜು, ಮ್ಯಾನ್ಯೇಜ್ಮೆಂಟ್ ಪ್ರತಿನಿಧಿಯಾದ ವೈ.ಯು. ಸುಭಾಷ್‌ ಚಂದ್ರ, ಪ್ರಾಂಶುಪಾಲರಾದ ಡಾ. ಕೆ.ಎಸ್.‌ ಓಂಕಾರಪ್ಪ ಅವರು, ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ನಿರಂತರ ಶ್ರಮವೇ ಈ ಅಭೂತಪೂರ್ವ ಯಶಸ್ಸಿಗೆ ಸಿಕ್ಕ ಫಲವಾಗಿದೆ ಎಂದು ಅಭಿನಂದಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles