ನವದೆಹಲಿ: 2027ರ ಸಾಲಿನ ಬೋರ್ಡ್ ಪರೀಕ್ಷೆಗಳಿಗೆ ನೋಂದಣಿ ಹಾಗೂ ಅಭ್ಯರ್ಥಿಗಳ ಪಟ್ಟಿ ಸಲ್ಲಿಕೆ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದ್ದು, ಸಂಯೋಜಿತ (Affiliated) ಎಲ್ಲಾ ಶಾಲೆಗಳು ವಿದ್ಯಾರ್ಥಿಗಳ ವಿವರಗಳನ್ನು ಸರಿಯಾಗಿ ಪರಿಶೀಲಿಸಬೇಕು ಎಂದು ಕೇಂದ್ರ ಪ್ರೌಢಶಿಕ್ಷಣ ಮಂಡಳಿ (CBSE) ಸೂಚನೆ ನೀಡಿದೆ.
ಪ್ರಮುಖ ಮುಖ್ಯಾಂಶಗಳು:
ಹಿನ್ನೆಲೆ: ಹಿಂದಿನ ಪರೀಕ್ಷೆಗಳ ಸಮಯದಲ್ಲಿ ಶಾಲೆಗಳು ನೀಡಿದ ತಪ್ಪು ಮಾಹಿತಿ, ವಿಷಯಗಳ ಕೋಡ್‌ಗಳ ಗೊಂದಲ ಹಾಗೂ ಕಾಲಮಿತಿಯಲ್ಲಿ LOC ಸಲ್ಲಿಸದಿರುವುದರಿಂದ ಮಂಡಳಿಯ ವೇಳಾಪಟ್ಟಿಗೆ ಅಡಚಣೆಯಾಗಿತ್ತು.
ಪರಿಶೀಲಿಸಬೇಕಾದ ವಿವರಗಳು: ವಿದ್ಯಾರ್ಥಿಯ ಹೆಸರು (ಅಡ್ಮಿಷನ್ ರಿಜಿಸ್ಟರ್ ಪ್ರಕಾರ), ಜನ್ಮ ದಿನಾಂಕ, ಲಿಂಗ, ವರ್ಗ, ಪೋಷಕರ ಹೆಸರು ಮತ್ತು ಕಾಗುಣಿತಗಳು, ಭಾವಚಿತ್ರ, ಸಹಿ ಹಾಗೂ ವಿಷಯಗಳ ವಿವರಗಳನ್ನು ನಿಖರವಾಗಿ ಸಲ್ಲಿಸಬೇಕು.
ವ್ಯಾಪ್ತಿ: 9 ಮತ್ತು 11ನೇ ತರಗತಿಗಳ ನೋಂದಣಿ ಹಾಗೂ 10 ಮತ್ತು 12ನೇ ತರಗತಿಗಳ LOC ಸಲ್ಲಿಕೆಗೆ ಈ ನಿಯಮ ಅನ್ವಯಿಸಲಿದ್ದು, ಕೆಂಡ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯ, ಸೈನಿಕ ಶಾಲೆಗಳು ಸೇರಿದಂತೆ ಎಲ್ಲಾ ಅನುದಾನಿತ ಹಾಗೂ ಖಾಸಗಿ ಶಾಲೆಗಳಿಗೆ ನಿಯಂತ್ರಕ ಡಾ. ಸಂಯಮ್ ಭಾರದ್ವಾಜ್ ಸುತ್ತೋಲೆ ರವಾನಿಸಿದ್ದಾರೆ.
ದಿನಾಂಕ: ಅರ್ಜಿ ಮತ್ತು LOC ಸಲ್ಲಿಕೆಯ ನಿಖರ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಸಿಬಿಎಸ್‌ಇ ತಿಳಿಸಿದೆ.





Leave a comment