SUDDIKSHANA KANNADA NEWS/ DAVANAGERE/ DATE:30-12-2024
ದಾವಣಗೆರೆ: ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರು, ಹಿರಿಯ ರಾಜಕೀಯ ಮುತ್ಸದ್ದಿ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರನ್ನು ಶ್ರೀ ತರಳಬಾಳು ಜಗದ್ಗುರು ಶಾಖಾಮಠ ಅರಳಕಟ್ಟದ ಪೂಜ್ಯ ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮಿಗಳವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಶ್ರೀ ತರಳಬಾಳು ಜಗದ್ಗುರು ಶಾಖಾಮಠ ಅರಳಕಟ್ಟದ ಪೂಜ್ಯ ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮಿಗಳವರು ಒಂದಷ್ಟು ಸಮಯ ಶಾಮನೂರು ಶಿವಶಂಕರಪ್ಪರೊದಿಗೆ ಮಾತುಕತೆ ನಡೆಸಿದರು.
ಶಿವಶಂಕರಪ್ಪನವರು ನಾವು ಆರೋಗ್ಯವಾಗಿದ್ದೇವೆ. ಭಯಪಡುವ ಅಗತ್ಯ ಇಲ್ಲ ಎಂದು ಹೇಳಿದರು. ನಂತರ ಶ್ರೀಗಳು ಶಿವಶಂಕರಪ್ಪನವರಿಗೆ ಶತಾಯುಷಿಗಳಾಗುವಂತೆ ಆಶೀರ್ವಾದ ದಯಪಾಲಿಸಿದರು. ಈ ಸಂದರ್ಭದಲ್ಲಿ ದಾವಣಗೆರೆಯ ಖ್ಯಾತ ಕೈಗಾರಿಕೋದ್ಯಮಿಗಳು, ಎಸ್ ಎಸ್ ಅವರ ಪುತ್ರರೂ ಆಗಿರುವ ಎಸ್. ಎಸ್. ಗಣೇಶ್ ಅವರು ಈ ವೇಳೆ ಉಪಸಿತರಿದ್ದರು.