SUDDIKSHANA KANNADA NEWS/ DAVANAGERE/ DATE:01-02-2024
ದಾವಣಗೆರೆ: ಚುನಾವಣೆ ಸಮೀಪವಿದ್ದಾಗಲೂ ಯಾವುದೇ ಚೀಪ್ ಗಿಮಿಕ್ ಮಾಡದೇ ಭಾರತದ ಅಭಿವೃದ್ಧಿ ಪರವಾದ ಆಯವ್ಯಯವನ್ನು ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮಂಡಿಸಿದೆ ಎಂದು ದಾವಣಗೆರೆ ಬಿಜೆಪಿ ಲೋಕಸಭಾ ಕ್ಷೇತ್ರದ ಆಕಾಂಕ್ಷಿ ಡಾ. ರವಿಕುಮಾರ್ ಟಿ. ಜಿ. ಹೇಳಿದ್ದಾರೆ.
ಭಾರತವನ್ನು ಆಳಿದ ಬ್ರಿಟೀಷರನ್ನು ಹಿಂದಿಕ್ಕಿ ನಮ್ಮ ದೇಶವೀಗ ಜಗತ್ತಿನ ಐದನೇ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ಕಳೆದ 9 ವರ್ಷದಿಂದ ದೇಶದ 25ಕೋಟಿಗೂ ಹೆಚ್ಚು ಜನರು ಬಡತನ ರೇಖೆಯಿಂದ ಹೊರಬಂದು,
ಆರ್ಥಿಕವಾಗಿ ಸಬಲರಾಗಿದ್ದಾರೆ. ಇಂತಹ ನೂರೆಂಟು ಮೈಲಿಗಲ್ಲುಗಳು ಮೋದಿಯವರ ಸಾರಥ್ಯದ ಬಜೆಟ್ ಮತ್ತು ಜನಪರ ಕಾರ್ಯಕ್ರಮಗಳ ಮೂಲಕ ಸಾಧ್ಯವಾಗಿದೆ ಎಂದಿದ್ದಾರೆ.
ಮೂರನೇ ಬಾರಿ ಮೋದಿ ಸರಕಾರ ಆಯ್ಕೆ ಆಗಲಿದ್ದು, ಜೂನ್ ತಿಂಗಳಲ್ಲಿ ಪೂರ್ಣಾವಧಿ ಬಜೆಟ್ ಮಂಡಿಸಿ, ದೇಶದ ಪ್ರಗತಿಗೆ ಇನ್ನಷ್ಟು ಹೊಸ ವೇಗ ತರುವುದು ಖಚಿತ. ದೂರದೃಷ್ಟಿ ಮತ್ತು ಅಭಿವೃದ್ಧಿಯ ರೂಪುರೇಷಯ ಆಯವ್ಯಯ ನೀಡಿದ ಕೇಂದ್ರ ಸರಕಾರಕ್ಕೆ ದಾವಣಗೆರೆ ಜಿಲ್ಲೆಯ ಜನತೆಯ ಪರವಾಗಿ ಕೃತಜ್ಞತೆಗಳು ಎಂದು ಡಾ. ರವಿಕುಮಾರ್ ಹೇಳಿದ್ದಾರೆ.