Home ಕ್ರೈಂ ನ್ಯೂಸ್ ಸಹೋದ್ಯೋಗಿಗಳೊಂದಿಗೆ ಮಾತನಾಡಿದ್ದಕ್ಕೆ ಪ್ರಿಯತಮೆಯನ್ನೇ ಮುಗಿಸಿದ ಪಾಪಿ: ಬಂಡೆಗಲ್ಲಿನಿಂದ ಜಜ್ಜಿ ಭಾಗ್ಯಶ್ರೀ ಕೊಂದಿದ್ದ ಹಂತಕ ಜಮೀಲ್ ಬಾಷಾ ಬಂಧನ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಸಹೋದ್ಯೋಗಿಗಳೊಂದಿಗೆ ಮಾತನಾಡಿದ್ದಕ್ಕೆ ಪ್ರಿಯತಮೆಯನ್ನೇ ಮುಗಿಸಿದ ಪಾಪಿ: ಬಂಡೆಗಲ್ಲಿನಿಂದ ಜಜ್ಜಿ ಭಾಗ್ಯಶ್ರೀ ಕೊಂದಿದ್ದ ಹಂತಕ ಜಮೀಲ್ ಬಾಷಾ ಬಂಧನ!

Share
ಪ್ರಿಯತಮೆ
Share

ತಿರುಪತಿ: ಅನೈತಿಕ ಸಂಬಂಧ ಹಾಗೂ ಅನುಮಾನದಿಂದ ತನ್ನ ಪ್ರಿಯತಮೆಯನ್ನೇ ಬಂಡೆಗಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿದ್ದ ಹಂತಕನನ್ನು ತಿರುಪತಿ ಗ್ರಾಮಾಂತರ ಪೊಲೀಸರು ಅತ್ಯಂತ ಚಾಣಾಕ್ಷತನದಿಂದ ಬಂಧಿಸಿದ್ದಾರೆ. ಯಾವುದೇ ಸುಳಿವಿಲ್ಲದ ಈ ಪ್ರಕರಣವನ್ನು ಕೇವಲ 17 ದಿನಗಳಲ್ಲಿ ಭೇದಿಸಿದ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ತಿರುಪತಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಸಿ. ಮಲ್ಲವರಂ ಗ್ರಾಮದ ಸಮೀಪವಿರುವ ರಿಯಲ್ ಎಸ್ಟೇಟ್ ಲೇಔಟ್‌ವೊಂದರಲ್ಲಿ ಅಕ್ಟೋಬರ್ 31 ರಂದು ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ಮುಖದ ಗುರುತು ಸಿಗದಂತೆ ಬಂಡೆಗಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದ್ದು, ಪೊಲೀಸರಿಗೆ ತನಿಖೆ ದೊಡ್ಡ ಸವಾಲಾಗಿತ್ತು. ಬಳಿಕ ಮೃತಳ ಬಟ್ಟೆ ಹಾಗೂ ಇತರ ಗುರುತುಗಳ ಆಧಾರದ ಮೇಲೆ ಆಕೆಯನ್ನು ಚಿತ್ತೂರು ಜಿಲ್ಲೆಯ ರೊಂಪಿಚೆರ್ಲ ಮೂಲದ, ತಿರುಪತಿಯ ಬ್ಯಾಂಕ್ ಒಂದರ ಕ್ರೆಡಿಟ್ ಕಾರ್ಡ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಭಾಗ್ಯಶ್ರೀ ಎಂದು ಗುರುತಿಸಲಾಯಿತು.

ಕಾಲ್ ಡೇಟಾ ಹಾಗೂ ಸಿಸಿಟಿವಿ ಜಾಡು: ತನಿಖೆ ಚುರುಕುಗೊಳಿಸಿದ ಪೊಲೀಸರು ಎಎನ್‌ಪಿಆರ್ (ANPR) ಕ್ಯಾಮೆರಾಗಳು, ಸಿಡಿಆರ್ (CDR) ಮತ್ತು ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಕಾರ್ಯಾಚರಣೆಗೆ ಇಳಿದರು. ಆಗ ಶೇಖ್ ಜಮಾಲಲ್ಲಾ ಬಾಷಾ ಅಲಿಯಾಸ್ ಜಮೀಲ್ ಬಾಷಾ (38) ಎಂಬಾತನೇ ಕೃತ್ಯ ಎಸಗಿರುವುದು ಗೊತ್ತಾಗಿದೆ.

ಅನುಮಾನವೇ ಪ್ರಾಣ ತೆಗೆಯಿತು: ಭಾಗ್ಯಶ್ರೀ ಹಾಗೂ ಜಮೀಲ್ ಬಾಷಾ ಅಕ್ಕಪಕ್ಕದ ಮನೆಯವರಾಗಿದ್ದು ಇವರ ನಡುವಿನ ಪರಿಚಯ ಪ್ರೇಮಕ್ಕೆ ತಿರುಗಿತ್ತು. ಆದರೆ ತಿರುಪತಿಯಲ್ಲಿ ಕೆಲಸ ಮಾಡುತ್ತಿದ್ದ ಭಾಗ್ಯಶ್ರೀ ಸಹೋದ್ಯೋಗಿಗಳೊಂದಿಗೆ ಆತ್ಮೀಯವಾಗಿರುವುದನ್ನು ಸಹಿಸದ ಜಮೀಲ್, ಆಕೆಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ.

ಆಟೋದಲ್ಲಿ ಕರೆದೊಯ್ದು ಕೃತ್ಯ: ಅಕ್ಟೋಬರ್ 31 ರಂದು ಆಕೆಯನ್ನು ತನ್ನ ಆಟೋದಲ್ಲಿ ಸಿ. ಮಲ್ಲವರಂ ಜಂಕ್ಷನ್ ಬಳಿಯ ಲೇಔಟ್‌ಗೆ ಕರೆದೊಯ್ದು, ಮಾತಿನ ಚಕಮಕಿ ನಡೆಸಿ ಬಂಡೆಗಲ್ಲಿನಿಂದ ತಲೆಗೆ ಜಜ್ಜಿ ಹತ್ಯೆ ಮಾಡಿದ್ದಾನೆ.

ಆರೋಪಿ ಬಂಧನ ಹಾಗೂ ಶ್ಲಾಘನೆ: ನವೆಂಬರ್ 16 ರ ರಾತ್ರಿ ರೊಂಪಿಚೆರ್ಲ ಕ್ರಾಸ್ ಬಳಿ ಆರೋಪಿಯನ್ನು ಬಂಧಿಸಲಾಗಿದ್ದು, ಆಟೋ, ಎರಡು ಮೊಬೈಲ್ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ. 17 ದಿನಗಳಲ್ಲಿ ಪ್ರಕರಣ ಭೇದಿಸಿದ ಪೊಲೀಸರ ಕಾರ್ಯವೈಖರಿಯನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.

Share

Recent Posts

Recent Comments

No comments to show.
Related Articles