Home ದಾವಣಗೆರೆ “ಮುಂದಿನ ಚುನಾವಣೆಯಲ್ಲಿ ಎನ್ ಡಿಎಗೆ ಬಿಗ್ ಶಾಕ್, 150 ಸೀಟ್ ಗೆದ್ದು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ!”: ಡಿ. ಕೆ. ಶಿವಕುಮಾರ್
ದಾವಣಗೆರೆನವದೆಹಲಿಬೆಂಗಳೂರು

“ಮುಂದಿನ ಚುನಾವಣೆಯಲ್ಲಿ ಎನ್ ಡಿಎಗೆ ಬಿಗ್ ಶಾಕ್, 150 ಸೀಟ್ ಗೆದ್ದು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ!”: ಡಿ. ಕೆ. ಶಿವಕುಮಾರ್

Share
ಚುನಾವಣೆ
Share

ಬೆಂಗಳೂರು: ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟಕ್ಕೆ ಮುಂದಿನ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಸಿಎಂ ಡಿ. ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನ ಪರಿಷತ್ತಿನಲ್ಲಿ ಸೋಮವಾರ ಮಾತನಾಡಿದ ಅವರು ವಿರೋಧ ಪಕ್ಷಗಳಿಗೆ ರಾಜ್ಯ ಹಿತದ ಬಗ್ಗೆ ಚಿಂತನೆ ಇಲ್ಲ. ಜನರು ಅದಕ್ಕೋಸ್ಕರನೇ ನಿಮ್ಮನ್ನು ವಿರೋಧ ಪಕ್ಷದಲ್ಲಿ ಇಟ್ಟಿರೋದು ಎಂದು ಮುಖ್ಯಮಂತ್ರಿ ಅವರು ತರಾಟೆಗೆ ತೆಗೆದುಕೊಂಡರು.

ರಾಜ್ಯದ ಜನರ ಹಿತ, ರೈತರ ಬದುಕು, ಯುವಕರ ಭವಿಷ್ಯ ಮತ್ತು ಕರ್ನಾಟಕದ ನೆಲ–ಜಲ–ಭಾಷೆಯ ರಕ್ಷಣೆ ಸರ್ಕಾರದ ಮೊದಲ ಆದ್ಯತೆ ಎಂದು ಹೇಳಿದರು.

‘ರಾಜಕಾರಣಕ್ಕಿಂತ ಜನರ ಹಿತ ಮುಖ್ಯ’

“ರಾಜಕಾರಣ ಮುಖ್ಯವಲ್ಲ; ಜನರ ಕಲ್ಯಾಣ ಮುಖ್ಯ. ರೈತರ ಸಮಸ್ಯೆ ಮುಖ್ಯ. ಯುವಕರ ಭವಿಷ್ಯ ಮುಖ್ಯ. ರಾಜ್ಯದ ನೆಲ, ಜಲ ಮತ್ತು ಭಾಷೆ ಮುಖ್ಯ” ಎಂದು ಹೇಳಿದರು.

ವಿಧಾನಸಭೆಯ ಅಮೂಲ್ಯ ದಿನಗಳನ್ನು ಜನರ ಸಮಸ್ಯೆಗಳ ಚರ್ಚೆಗೆ ಬದಲಾಗಿ ರಾಜಕೀಯ ಗದ್ದಲಕ್ಕೆ ಬಳಸಲಾಗುತ್ತಿದೆ. ಇದಕ್ಕೆ ನಾಡಿನ ಜನತೆ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಬಿಜೆಪಿ ಮತ್ತು ಎನ್ ಡಿ ಎ ವಿರುದ್ಧ ವಾಗ್ದಾಳಿ ನಡೆಸಿದರು. ಸಭೆಯಲ್ಲಿ ರೈತರು, ಯುವಕರು ಮತ್ತು ರಾಜ್ಯದ ಅಭಿವೃದ್ಧಿ ಕುರಿತು ಸಮಗ್ರ ಚರ್ಚೆ ನಡೆಯಬೇಕಿತ್ತು ಎಂದು ಹೇಳಿದರು.

Share

Leave a comment

Leave a Reply

Your email address will not be published. Required fields are marked *

Related Articles