Home ಕ್ರೈಂ ನ್ಯೂಸ್ ಐಆರ್‌ಎಸ್ ಅಧಿಕಾರಿಯ ಪುತ್ರಿಯ ಹತ್ಯೆಗೈದ ಆರೋಪಿಯ ಬಂಧನ; ಆಟೋ ಚಾಲಕ ನೀಡಿದ ಸುಳಿವಿನಿಂದ ಸಿಕ್ಕಿಬಿದ್ದ ಕಿರಾತಕ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಐಆರ್‌ಎಸ್ ಅಧಿಕಾರಿಯ ಪುತ್ರಿಯ ಹತ್ಯೆಗೈದ ಆರೋಪಿಯ ಬಂಧನ; ಆಟೋ ಚಾಲಕ ನೀಡಿದ ಸುಳಿವಿನಿಂದ ಸಿಕ್ಕಿಬಿದ್ದ ಕಿರಾತಕ!

Share
ಅಧಿಕಾರಿ
Share

ನವದೆಹಲಿ: ದೆಹಲಿಯಲ್ಲಿ ಐಆರ್‌ಎಸ್ (IRS) ಅಧಿಕಾರಿಯ ಪುತ್ರಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಪ್ರಕರಣದ ಆರೋಪಿ ರಾಹುಲ್ ಮೀನಾ ಎಂಬಾತನನ್ನು ದೆಹಲಿ ಪೊಲೀಸರು ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಕೇವಲ 12 ಗಂಟೆಗಳ ಅಂತರದಲ್ಲಿ ರಾಜಸ್ಥಾನ ಮತ್ತು ದೆಹಲಿಯಲ್ಲಿ ಎರಡು ಭೀಕರ ಕೃತ್ಯಗಳನ್ನು ಎಸಗಿದ್ದ ಈತನನ್ನು ಸೆರೆಹಿಡಿಯಲು ಪೊಲೀಸರು 15 ವಿಶೇಷ ತಂಡಗಳನ್ನು ರಚಿಸಿದ್ದರು.

ಕಾರ್ಯಾಚರಣೆ ನಡೆದದ್ದು ಹೇಗೆ?: ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಆರೋಪಿಯು ಕೃತ್ಯದ ಬಳಿಕ ಬಟ್ಟೆ ಬದಲಾಯಿಸಿ ಆಟೋ ರಿಕ್ಷಾ ಹತ್ತಿರುವುದು ಕಂಡುಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆಟೋ ಚಾಲಕನನ್ನು ಪತ್ತೆಹಚ್ಚಿದರು. ಆತ ನೀಡಿದ ಸುಳಿವಿನ ಮೇರೆಗೆ ದೆಹಲಿಯ ಹೋಟೆಲ್‌ವೊಂದರ ಮೇಲೆ ದಾಳಿ ನಡೆಸಿ ರಾಹುಲ್‌ನನ್ನು ಬಂಧಿಸಲಾಗಿದೆ.

ಹಿನ್ನೆಲೆ: ಆರೋಪಿಯು ಈ ಹಿಂದೆ ಅದೇ ಅಧಿಕಾರಿಯ ಮನೆಯಲ್ಲಿ ಕೆಲಸಕ್ಕಿದ್ದನು. ಬೆಟ್ಟಿಂಗ್ ಮತ್ತು ಹಣಕಾಸಿನ ವಂಚನೆಯ ಕಾರಣಕ್ಕಾಗಿ ಆತನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಇದೇ ದ್ವೇಷದಿಂದ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles