Home ಕ್ರೈಂ ನ್ಯೂಸ್ ಐಆರ್‌ಎಸ್ ಅಧಿಕಾರಿಯ ಪುತ್ರಿ ಹತ್ಯೆ: ಬಯೋಮೆಟ್ರಿಕ್ ಲಾಕರ್ ತೆರೆಯಲು ಸಂತ್ರಸ್ತೆಯ ರಕ್ತಸಿಕ್ತ ಬೆರಳು ಬಳಸಿದ ಆರೋಪಿ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಐಆರ್‌ಎಸ್ ಅಧಿಕಾರಿಯ ಪುತ್ರಿ ಹತ್ಯೆ: ಬಯೋಮೆಟ್ರಿಕ್ ಲಾಕರ್ ತೆರೆಯಲು ಸಂತ್ರಸ್ತೆಯ ರಕ್ತಸಿಕ್ತ ಬೆರಳು ಬಳಸಿದ ಆರೋಪಿ!

Share
ಅಧಿಕಾರಿ
Share

ನವದೆಹಲಿ: ದಕ್ಷಿಣ ದೆಹಲಿಯಲ್ಲಿ ಹಿರಿಯ ಐಆರ್‌ಎಸ್ (IRS) ಅಧಿಕಾರಿಯ 22 ವರ್ಷದ ಪುತ್ರಿಯನ್ನು ಅತ್ಯಾಚಾರ ಮಾಡಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಭೀಕರ ಸತ್ಯಾಂಶಗಳು ಹೊರಬಂದಿವೆ.

ಮನೆಯ ಹಳೆಯ ಕೆಲಸಗಾರ ರಾಹುಲ್ ಮೀನಾ (23), ಮನೆಯಲ್ಲಿದ್ದ ಬಯೋಮೆಟ್ರಿಕ್ ಸೇಫ್ (Locker) ತೆರೆಯಲು ಅರೆಪ್ರಜ್ಞಾವಸ್ಥೆಯಲ್ಲಿದ್ದ ಯುವತಿಯ ರಕ್ತಸಿಕ್ತ ಬೆರಳನ್ನು ಬಳಸಲು ಪ್ರಯತ್ನಿಸಿ ವಿಫಲನಾಗಿದ್ದಾನೆ ಎಂದು ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿದೆ.

ಯುಪಿಎಸ್‌ಸಿ ಆಕಾಂಕ್ಷಿಯಾಗಿದ್ದ ಯುವತಿಯನ್ನು ಟೆರೇಸ್ ಮೇಲಿನ ಸ್ಟಡಿ ರೂಮ್‌ನಿಂದ ಎಳೆದೊಯ್ದು, ಲಾಕರ್ ತೆರೆಯಲು ಯತ್ನಿಸಿದ್ದಾನೆ. ಆದರೆ ಬೆರಳಚ್ಚು ಪತ್ತೆಯಾಗದಿದ್ದಾಗ ಸ್ಕ್ರೂಡ್ರೈವರ್‌ನಿಂದ ಲಾಕರ್ ಒಡೆದು ನಗದು ಮತ್ತು ಚಿನ್ನಾಭರಣ ದೋಚಿದ್ದಾನೆ. ಕೃತ್ಯದ ಬಳಿಕ ಯುವತಿಯ ಸಹೋದರನ ಬಟ್ಟೆ ಧರಿಸಿ ಪರಾರಿಯಾಗಿದ್ದ ಆರೋಪಿಯನ್ನು ದ್ವಾರಕಾದ ಹೋಟೆಲ್‌ನಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles