Home ಕ್ರೈಂ ನ್ಯೂಸ್ ಐಆರ್‌ಎಸ್ ಅಧಿಕಾರಿಯ ಪುತ್ರಿ ಮೇಲಿನ ಅತ್ಯಾಚಾರಕ್ಕೆ ಮುನ್ನ ರಾಜಸ್ತಾನದಲ್ಲಿ ಮಹಿಳೆ ಮೇಲೆ ಇದೇ ಕೃತ್ಯ ಎಸಗಿದ್ದ ರಾಹುಲ್ ಮೀನಾ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಐಆರ್‌ಎಸ್ ಅಧಿಕಾರಿಯ ಪುತ್ರಿ ಮೇಲಿನ ಅತ್ಯಾಚಾರಕ್ಕೆ ಮುನ್ನ ರಾಜಸ್ತಾನದಲ್ಲಿ ಮಹಿಳೆ ಮೇಲೆ ಇದೇ ಕೃತ್ಯ ಎಸಗಿದ್ದ ರಾಹುಲ್ ಮೀನಾ!

Share
ಅಧಿಕಾರಿ
Share

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಐಆರ್‌ಎಸ್ (IRS) ಅಧಿಕಾರಿಯೊಬ್ಬರ ಪುತ್ರಿಯನ್ನು ಅತ್ಯಾಚಾರ ಮಾಡಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಚ್ಚಿಬೀಳಿಸುವ ಮಾಹಿತಿ ಹೊರಬಂದಿದೆ. ಆರೋಪಿ ರಾಹುಲ್ ಮೀನಾ (23), ದೆಹಲಿಯಲ್ಲಿ ಕೃತ್ಯ ಎಸಗುವ ಕೇವಲ 12 ಗಂಟೆಗಳ ಮೊದಲು ರಾಜಸ್ಥಾನದ ಅಲ್ವಾರ್‌ನಲ್ಲಿ ಮತ್ತೊಬ್ಬ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ ಎಂಬ ಆಘಾತಕಾರಿ ವಿಷಯವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.

ಘಟನೆಯ ವಿವರ: ರಾಜಸ್ಥಾನ ಮೂಲದ ರಾಹುಲ್ ಮೀನಾ, ಮಂಗಳವಾರ ರಾತ್ರಿ 10:30ರ ಸುಮಾರಿಗೆ ಅಲ್ವಾರ್‌ನಲ್ಲಿರುವ ತನ್ನ ನೆರೆಯ ಮನೆಯ ಮಹಿಳೆಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರ ಎಸಗಿದ್ದಾನೆ. ಅಲ್ಲಿಂದ ಪರಾರಿಯಾದ ಈತ, ಬುಧವಾರ ಮುಂಜಾನೆ 6:30ಕ್ಕೆ ದೆಹಲಿಯ ಅಮರ್ ಕಾಲನಿಯಲ್ಲಿರುವ ತನ್ನ ಮಾಜಿ ಮಾಲೀಕರ (ಐಆರ್‌ಎಸ್ ಅಧಿಕಾರಿ) ಮನೆಗೆ ತಲುಪಿದ್ದಾನೆ.

ಮನೆಯಲ್ಲಿ 22 ವರ್ಷದ ಯುವತಿ ಒಬ್ಬಳೇ ಇರುವುದನ್ನು ಗಮನಿಸಿದ ರಾಹುಲ್, ಆಕೆ ಯುಪಿಎಸ್‌ಸಿ ಪರೀಕ್ಷೆಗೆ ಓದುತ್ತಿದ್ದ ರೂಮಿಗೆ ನುಗ್ಗಿದ್ದಾನೆ. ಯುವತಿಯನ್ನು ಉಸಿರುಗಟ್ಟಿಸಿ, ಭಾರವಾದ ವಸ್ತುವಿನಿಂದ ಹಲ್ಲೆ ನಡೆಸಿ ಆಕೆ ಪ್ರಜ್ಞೆ ತಪ್ಪಿದ ನಂತರ ಅತ್ಯಾಚಾರ ಎಸಗಿದ್ದಾನೆ. ಬಳಿಕ ಮನೆಯಲ್ಲಿದ್ದ ನಗದು ಮತ್ತು ಆಭರಣಗಳನ್ನು ದೋಚಿದ್ದಾನೆ.

ಬಂಧನಕ್ಕೆ ಸಹಕಾರಿಯಾದ ಸಿಸಿಟಿವಿ:

ಮಾಲೀಕರು ಜಿಮ್‌ನಿಂದ ವಾಪಸ್ ಬಂದಾಗ ಮಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ದೆಹಲಿ ಪೊಲೀಸರು 15 ತಂಡಗಳನ್ನು ರಚಿಸಿ ತನಿಖೆ ನಡೆಸಿದ್ದರು. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆರೋಪಿಯು ಹಳದಿ ಶರ್ಟ್ ಧರಿಸಿ ಒಳಗೆ ಹೋಗಿ, ನಂತರ ಕೊಲೆಯಾದ ಯುವತಿಯ ಸಹೋದರನ ಬಟ್ಟೆಯನ್ನು ಧರಿಸಿ ಹೊರಬರುವುದು ಸೆರೆಯಾಗಿತ್ತು. ಈ ಸುಳಿವಿನ ಆಧಾರದ ಮೇಲೆ ಪೊಲೀಸರು ಹೋಟೆಲ್‌ ಒಂದರಲ್ಲಿ ಅವಿತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

ಕೆಲಸದಿಂದ ತೆಗೆದುಹಾಕಿದ್ದೇ ಸೇಡು?

ಹಣಕಾಸಿನ ಅವ್ಯವಹಾರ ಮತ್ತು ಜೂಜಿನ ಚಟದ ಹಿನ್ನೆಲೆಯಲ್ಲಿ ಕೆಲವು ತಿಂಗಳ ಹಿಂದಷ್ಟೇ ಐಆರ್‌ಎಸ್ ಅಧಿಕಾರಿ ರಾಹುಲ್‌ನನ್ನು ಕೆಲಸದಿಂದ ತೆಗೆದುಹಾಕಿದ್ದರು. ಇದೇ ದ್ವೇಷದಿಂದ ಈ ಭೀಕರ ಕೃತ್ಯ ಎಸಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

Share

Leave a comment

Leave a Reply

Your email address will not be published. Required fields are marked *