SUDDIKSHANA KANNADA NEWS/ DAVANAGERE/ DATE:26-03-2024
ದಾವಣಗೆರೆ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀಂತಿ ಸಂಹಿತೆ ಪಾಲನೆಗೆ ಮಾರ್ಚ್ 26ರಂದು ಹೋಟೆಲ್, ಪ್ಲೆಕ್ಸ್, ಕರಪತ್ರ ಮುದ್ರಣ, ವಿವಿಧ ವರ್ತಕರೊಂದಿಗೆ ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಸಭೆ ನಡೆಸಲಿದ್ದಾರೆ.
ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಜಿಲ್ಲೆಯಲ್ಲಿನ ಹೋಟೆಲ್ ಹಾಗೂ ರಸ್ಟೋರೆಂಟ್ ಮಾಲಿಕರು, ಪ್ಲೆಕ್ಸ್, ಕರಪತ್ರ ಮುದ್ರಣ ಮಾಲಿಕರು, ಕೇಬಲ್ ಆಪರೇಟರ್, ಪೆಟ್ರೋಲ್ ಬಂಕ್, ಕಲ್ಯಾಣ ಮಂಟಪ, ಹೆದ್ದಾರಿ ಫಲಕ ಮಾಲೀಕರು, ಟ್ರಾನ್ಸ್ ಪೋರ್ಟ್ ಮಾಲೀಕರು, ಚಿನ್ನಬೆಳ್ಳಿ ವ್ಯಾಪಾರಿಗಳ ಸಭೆಯನ್ನು ಮಾರ್ಚ್ 26 ರಂದು ಬೆಳಗ್ಗೆ 11.30 ಕ್ಕೆ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ ಎಂದು ತಿಳಿಸಲಾಗಿದೆ.
ದೂರು ಸಲ್ಲಿಸಲು ಸಹಾಯವಾಣಿ:
ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಸಂಬಂಧ ದಾವಣಗೆರೆ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಚುನಾವಣೆ ದೂರುಗಳಿದ್ದಲ್ಲಿ ಉತ್ತರ ಕ್ಷೇತ್ರಕ್ಕೆ 08192-213368, ದಕ್ಷಿಣ 08192-213369 ಮುಖಾಂತರ ದೂರುಗಳನ್ನು ಸಲ್ಲಿಸಬಹುದೆಂದು ಸಹಾಯಕ ಚುನಾವಣಾಧಿಕಾರಿ ತಿಳಿಸಿದ್ದಾರೆ.