Home ಕ್ರೈಂ ನ್ಯೂಸ್ ರಾಮಮಂದಿರ ಬೆಳ್ಳಿ ಇಟ್ಟಿಗೆ ಎಲ್ಲಿ?: ದಾವಣಗೆರೆಯಲ್ಲಿ ಯುವ ಕಾಂಗ್ರೆಸ್‌ನಿಂದ ಬೃಹತ್ ಪಂಜಿನ ಮೆರವಣಿಗೆ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ರಾಮಮಂದಿರ ಬೆಳ್ಳಿ ಇಟ್ಟಿಗೆ ಎಲ್ಲಿ?: ದಾವಣಗೆರೆಯಲ್ಲಿ ಯುವ ಕಾಂಗ್ರೆಸ್‌ನಿಂದ ಬೃಹತ್ ಪಂಜಿನ ಮೆರವಣಿಗೆ!

Share
ರಾಮಮಂದಿರ
Share

ದಾವಣಗೆರೆ : ಅಯೋಧ್ಯೆಯ ಶ್ರೀ ರಾಮ ಮಂದಿರದ ಹುಂಡಿಯಲ್ಲಿ ಸಂಗ್ರಹಿಸಲಾದ ಭಕ್ತರ ಹಣವನ್ನು ಲೂಟಿ ಮಾಡಿದ ಹಾಗೂ ದಾವಣಗೆರೆಯಲ್ಲಿ ಬೆಳ್ಳಿ ಇಟ್ಟಿಗೆಯನ್ನು ಕಾಣೆ ಮಾಡಿದ ಭ್ರಷ್ಟರ ವಿರುದ್ಧ ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ನಗರದ ರಾಮ್ ಅಂಡ್ ಕೋ ಸರ್ಕಲ್ ನಿಂದ ಪಿಜಿ ಬಡಾವಣೆಯ ಶ್ರೀರಾಮಮಂದಿರದವರೆಗೆ ಬೃಹತ್ ಪಂಜಿನ ಮೆರವಣಿಗೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ಕೆ ಶೆಟ್ಟಿ ರಾಷ್ಟ್ರದಲ್ಲಿ ಶ್ರೀ ರಾಮನ ಹೆಸರನ್ನು ಹೇಳಿ ಕೋಟ್ಯಂತರ ಹಣವನ್ನು ವಸೂಲಿ ಮಾಡಿ ಹಾಗೂ ದೇವಸ್ಥಾನದ ಹುಂಡಿಯನ್ನು ಬಿಡದೆ ಭಕ್ತರ ಹಣವನ್ನು ಲೂಟಿ ಮಾಡಿದ ಭ್ರಷ್ಟರ ವಿರುದ್ಧ ಎಸ್ಐಟಿ ತನಿಖೆಯಾಗಬೇಕು. ದಾವಣಗೆರೆಯಲ್ಲಿ ಇರುವ ಯಶವಂತ್ ರಾವ್ ಎಂಬ ಚಂಪತ್ ರಾಯ್ ಬಿಜೆಪಿ ಭ್ರಷ್ಟ ನಾಯಕರು ಶ್ರೀ ರಾಮನ ಹೆಸರನ್ನು ಹೇಳಿ ಹಣವನ್ನು ವಸೂಲಿ ಮಾಡಿ ಮಂದಿರಕ್ಕೆ ನೀಡುತ್ತೇವೆ ಎಂದು ಬೆಳ್ಳಿ ಇಟ್ಟಿಗೆಯನ್ನು ನಗರದಲ್ಲಿ ಮೆರವಣಿಗೆ ಮಾಡಿ ಅದನ್ನು ದೇವಸ್ಥಾನಕ್ಕೆ ನೀಡದೆ ನುಂಗಿ ನೀರು ಕುಡಿದು ಭಕ್ತರ ಭಕ್ತಿಗೆ ಮೋಸ ಮಾಡಿ ಹಿಂದುತ್ವಕ್ಕೆ ದ್ರೋಹ ಬಗೆದಿದ್ದಾರೆ ಎಂದು ಕಿಡಿಕಾರಿದರು.

ದಾವಣಗೆರೆ ಜನತೆಗೆ ಮೋಸ ಮಾಡಿದ್ದಾರೆ. ಇಂಥವರ ವಿರುದ್ಧ ಎಸ್ಐಟಿ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳದೆ ಹೋದರೆ ಇನ್ನು ಮುಂದೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಯುವ ಕಾಂಗ್ರೆಸ್ ಅಧ್ಯಕ್ಷ ವರುಣ್ ಬೆಣ್ಣೆಹಳ್ಳಿ ಮಾತನಾಡಿ, ರಾಷ್ಟ್ರದಲ್ಲಿ ಬಿಜೆಪಿಯವರು ರಾಮನ ಹೆಸರಿನಲ್ಲಿ ಹೇಳಿ ಅಧಿಕಾರ ತೆಗೆದುಕೊಂಡು ರಾಮನಿಗೆ ಮೋಸ ಮಾಡಿ ಹಿಂದುತ್ವಕ್ಕೆ ಹಾಗೂ ಯುವಕರಿಗೆ ಅಂಧ ಭಕ್ತಿ ತೋರಿಸಿ ದಾರಿ ತಪ್ಪಿಸಿದ್ದಾರೆ. ಇಂತಹ ಭ್ರಷ್ಟ ರಾಜಕಾರಣಿಗಳು ತಕ್ಷಣ ರಾಜೀನಾಮೆ ನೀಡಬೇಕು. ಇಲ್ಲವಾದರೆ ರಾಷ್ಟ್ರದಲ್ಲಿ ಉಗ್ರವಾದ ಹೋರಾಟ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಆರ್. ಎಚ್. ನಾಗಭೂಷಣ್ ಅವರು ಮಾತನಾಡಿ ಭಕ್ತರ ಭಾವನೆಗಳೊಂದಿಗೆ ಆಟವಾಡಿ, ದೇವರ ಹೆಸರಿನಲ್ಲಿ ಸಂಗ್ರಹಿಸಿದ ಹಣವನ್ನು ದುರ್ಬಳಕೆ ಮಾಡಿರುವುದು ಖಂಡನೀಯ. ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದರು

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಸ್. ಮಲ್ಲಿಕಾರ್ಜುನ್, ಉಮೇಶ್, ಎಲ್ ಡಿ ಗೋಣೆಪ್ಪ, ವಾಣಿ ಬಕ್ಕೇಶ್, ಸುರೇಶ್ ಜಾಧವ್, ಪ್ರವೀಣ್ ಪವಾರ್, ರಾಜೇಶ್ವರಿ, ಕೆ. ಪಿ. ದ್ರಾಕ್ಷಾಯಮ್ಮ, ರಾಜೇಶ್ವರಿ ಟಿ. ಎಂ., ಕಾವೇರಿ ಜಮ್ನಳ್ಳಿ ನಾಗರಾಜ್, ಪ್ರವೀಣ್, ವೀರಭದ್ರ ಸ್ವಾಮಿ, ಶ್ರೀಕಾಂತ್ ಬಗೆರಾ ಮತ್ತಿತರರು ಪಾಲ್ಗೊಂಡಿದ್ದರು.

Share

Leave a comment

Leave a Reply

Your email address will not be published. Required fields are marked *