Home ಉದ್ಯೋಗ ವಾರ್ತೆ ಬೃಹತ್ ಉದ್ಯೋಗಾವಕಾಶ: ಏರ್‌ಪೋರ್ಟ್ಸ್‌ ಅಥಾರಿಟಿಯಲ್ಲಿ 389 ಹುದ್ದೆಗಳಿಗೆ ಅರ್ಜಿ ಆಹ್ವಾನ – ತಿಂಗಳಿಗೆ ₹1.80 ಲಕ್ಷದವರೆಗೆ ಸಂಬಳ!
ಉದ್ಯೋಗ ವಾರ್ತೆದಾವಣಗೆರೆಬೆಂಗಳೂರು

ಬೃಹತ್ ಉದ್ಯೋಗಾವಕಾಶ: ಏರ್‌ಪೋರ್ಟ್ಸ್‌ ಅಥಾರಿಟಿಯಲ್ಲಿ 389 ಹುದ್ದೆಗಳಿಗೆ ಅರ್ಜಿ ಆಹ್ವಾನ – ತಿಂಗಳಿಗೆ ₹1.80 ಲಕ್ಷದವರೆಗೆ ಸಂಬಳ!

Share
ಅರ್ಜಿ
Share

ನವದೆಹಲಿ: ಕೇಂದ್ರ ಸರ್ಕಾರಿ ಉದ್ಯೋಗಾವಕಾಶಕ್ಕಾಗಿ ಕಾಯುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಸಿಹಿ ಸುದ್ದಿ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು (Airports Authority of India – AAI) 2026ನೇ ಸಾಲಿನ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಒಟ್ಟು 389 ಮ್ಯಾನೇಜರ್ (Manager) ಮತ್ತು ಜೂನಿಯರ್ ಎಕ್ಸಿಕ್ಯೂಟಿವ್ (Junior Executive) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆಗಸ್ಟ್ 08, 2026 ರಿಂದ ಸೆಪ್ಟೆಂಬರ್ 07, 2026 ರವರೆಗೆ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ ಹಾಗೂ ವಯೋಮಿತಿ

  • ಸಂಸ್ಥೆಯ ಹೆಸರು: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI)

  • ಒಟ್ಟು ಹುದ್ದೆಗಳು: 389

  • ಉದ್ಯೋಗ ಸ್ಥಳ: ಅಖಿಲ ಭಾರತ ಮಟ್ಟದಲ್ಲಿ

  • ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್

ಹುದ್ದೆಗಳ ಹಂಚಿಕೆ:

  1. ಮ್ಯಾನೇಜರ್ ಹುದ್ದೆಗಳು (260 ಹುದ್ದೆಗಳು): ಸಿವಿಲ್, ಎಲೆಕ್ಟ್ರಿಕಲ್, ಫೈನಾನ್ಸ್, ಐಟಿ, ಆರ್ಕಿಟೆಕ್ಚರ್, ಲಾ, ಫೈರ್ ಸರ್ವಿಸಸ್, ಆಪರೇಷನ್ಸ್ ಹಾಗೂ ಕಮರ್ಷಿಯಲ್ ಸೇರಿದಂತೆ ವಿವಿಧ ವಿಭಾಗಗಳು.

  2. ಜೂನಿಯರ್ ಎಕ್ಸಿಕ್ಯೂಟಿವ್ (129 ಹುದ್ದೆಗಳು): ಫೈನಾನ್ಸ್, ಲಾ, ಆಪರೇಷನ್ಸ್, ಸರ್ವೇ ಮತ್ತು ಕಾರ್ಟೋಗ್ರಫಿ ವಿಭಾಗಗಳು.

ವಯೋಮಿತಿ (07-09-2026 ರಂತೆ):

  • ಮ್ಯಾನೇಜರ್ ಹುದ್ದೆಗಳಿಗೆ: ಗರಿಷ್ಠ 32 ವರ್ಷ.

  • ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ: ಗರಿಷ್ಠ 27 ವರ್ಷ.

  • ವಯೋಸಹಜ ಸಡಲಿಿಕೆ: OBC ಅಭ್ಯರ್ಥಿಗಳಿಗೆ 3 ವರ್ಷ, SC/ST ಅಭ್ಯರ್ಥಿಗಳಿಗೆ 5 ವರ್ಷ ಹಾಗೂ PWD ಅಭ್ಯರ್ಥಿಗಳಿಗೆ 10 ವರ್ಷ ಸಡಲಿಿಕೆ ಇರಲಿದೆ.

ಶೈಕ್ಷಣಿಕ ಅರ್ಹತೆ & ವೇತನ ಶ್ರೇಣಿ

  • ಶೈಕ್ಷಣಿಕ ಅರ್ಹತೆ: ಹುದ್ದೆಗೆ ಅನುಗುಣವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ BE/B.Tech, BE/B.Tech ಜೊತೆಗೆ MBA, CA, LLB, MCA, B.Arch, ಅಥವಾ ಸ್ನಾತಕೋತ್ತರ (Post Graduation) ಪದವಿ ಪೂರ್ಣಗೊಳಿಸಿರಬೇಕು. (ಮ್ಯಾನೇಜರ್ ಹುದ್ದೆಗಳಿಗೆ 3 ವರ್ಷಗಳ ಅನುಭವ ಅಗತ್ಯವಿದೆ).

  • ವೇತನ:

    • ಮ್ಯಾನೇಜರ್: ₹60,000/- ರಿಂದ ₹1,80,000/- (ಪ್ರತಿ ತಿಂಗಳು)

    • ಜೂನಿಯರ್ ಎಕ್ಸಿಕ್ಯೂಟಿವ್: ₹40,000/- ರಿಂದ ₹1,40,000/- (ಪ್ರತಿ ತಿಂಗಳು)

ಅರ್ಜಿ ಶುಲ್ಕ & ಆಯ್ಕೆ ಪ್ರಕ್ರಿಯೆ

  • ಅರ್ಜಿ ಶುಲ್ಕ:

    • ಸಾಮಾನ್ಯ / OBC / EWS ಅಭ್ಯರ್ಥಿಗಳಿಗೆ: ₹1,000/-

    • SC / ST / ಮಹಿಳಾ / PWD ಅಭ್ಯರ್ಥಿಗಳಿಗೆ: ಶುಲ್ಕವಿಲ್ಲ (Nil)

    • ಪಾವತಿ ವಿಧಾನ: ಆನ್‌ಲೈನ್ ಮೂಲಕ

  • ಆಯ್ಕೆ ವಿಧಾನ: ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT), ದಾಖಲಾತಿ ಪರಿಶೀಲನೆ ಹಾಗೂ ಸಂದರ್ಶನದ (ಅನ್ವಯಿಸುವ ಹುದ್ದೆಗಳಿಗೆ) ಮೂಲಕ ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 08 ಆಗಸ್ಟ್ 2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07 ಸೆಪ್ಟೆಂಬರ್ 2026

ಅರ್ಜಿ ಸಲ್ಲಿಸುವುದು ಹೇಗೆ?

  1. ಮೊದಲಿಗೆ AAI ನ ಅಧಿಕೃತ ವೆಬ್‌ಸೈಟ್‌ aai.aero ಗೆ ಭೇಟಿ ನೀಡಿ.

  2. ಮುಖಪುಟದಲ್ಲಿ “Careers” ವಿಭಾಗಕ್ಕೆ ತೆರಳಿ.

  3. AAI Recruitment 2026 ಅಧಿಸೂಚನೆಯನ್ನು ಕೂಲಂಕುಷವಾಗಿ ಓದಿ ಅರ್ಹತೆಯನ್ನು ಖಚಿತಪಡಿಸಿಕೊಳ್ಳಿ.

  4. ಆನ್‌ಲೈನ್ ಅರ್ಜಿ ಫಾರ್ಮ್‌ನಲ್ಲಿ ಅಗತ್ಯವಿರುವ ವಿವರಗಳು, ಭಾವಚಿತ್ರ ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಿ.

  5. ನಿಗದಿತ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ ಅರ್ಜಿ ಸಲ್ಲಿಸಿ (Submit ಮಾಡಿ).

  6. ಭವಿಷ್ಯದ ಉಲ್ಲೇಖಕ್ಕಾಗಿ ಭರ್ತಿ ಮಾಡಿದ ಅರ್ಜಿಯ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಿ.

Share

Leave a comment

Leave a Reply

Your email address will not be published. Required fields are marked *