SUDDIKSHANA KANNADA NEWS/ DAVANAGERE/ DATE:10-09-2023
ದಾವಣಗೆರೆ (Davanagere): ನೂರಾರು ರಾಧೆ-ಕೃಷ್ಣೆಯರು! ರಂಗು ರಂಗಿನ ಬಟ್ಟೆ ತೊಟ್ಟ ಪುಟಾಣಿಗಳು!! ನೂರಾರು ಕೊಳಲಿನ ನಿನಾದ ಆವರಣದಲ್ಲಿ ಅನುರಣಿಸಿತು.
ಈ ಸುದ್ದಿಯನ್ನೂ ಓದಿ:
Davanagere: ನಾನೊಂದು ತೀರ ನೀನೊಂದು ತೀರ ಅಂದ್ರು ಅಂದು…. ಒಂದಾಗೋಣ ಬಾ ಅಂದ್ರು ಇಂದು: ಕಠೋರ ನಿರ್ಧಾರ ಬದಲಿಸುವಂತೆ ಮಾಡಿದ್ರು ಮಕ್ಕಳು, ನ್ಯಾಯಾಧೀಶರು…!
3, 4, 5 ವರ್ಷದ ಪುಟ್ಟ-ಪುಟ್ಟ ಹೆಜ್ಜೆಯ ಬಾಲ ಕೃಷ್ಣರು ಎಲ್ಲರ ಮನ ಸೂರೆಗೊಂಡರು. ಕೃಷ್ಣನ ಜೊತೆಗೆ ಗಡಿಗೆ ತುಂಬಾ ಬೆಣ್ಣೆ ತುಂಬಿಸಿಕೊಂಡು ಬಂದ ಮಿಂಚುವ ಪೋಷಾಕಿನ ರಾಧೆಯರು. ಸಿದ್ಧಗಂಗಾ ನರ್ಸರಿ ಶಾಲೆಯ ಅಂಗಳದ ತುಂಬಾ ಓಡಾಡಿದರು.
ಪಾಲಕರು ಶ್ರದ್ಧೆಯಿಂದ ಈ ಮಕ್ಕಳಿಗೆ ವೇಷ-ಭೂಷಣ ತೊಡಿಸಿ ಕರೆ ತಂದಿದ್ದರು. ಪ್ರಿ ಕೆಜಿ, ಎಲ್ಕೆಜಿ, ಯುಕೆಜಿ ಮಕ್ಕಳ ಈ ಮಹಾ ಮೇಳಕ್ಕೆ ಪೂರಕವಾಗಿ ಹಿನ್ನೆಲೆಯಲ್ಲಿ ಕೃಷ್ಣನ ಕುರಿತು ಮಧುರವಾದ ಭಕ್ತಿಗೀತೆಗಳು ಪಾಲಕರನ್ನು ಪುಳಕಗೊಳಿಸಿತು. ಭಾಗವಹಿಸಿದ ಪ್ರತಿ ಮಗುವಿಗೂ ಪ್ರಶಸ್ತಿ ಪತ್ರ ಮತ್ತು ಬಹುಮಾನ ನೀಡಿ ಶಿಕ್ಷಕ ವೃಂದದವರು ಸಂಭ್ರಮಿಸಿದರು.