ದಾವಣಗೆರೆ: ಮಧ್ಯಕರ್ನಾಟಕದ ಪ್ರಸಿದ್ಧ ದಿನಪತ್ರಿಕೆ ‘ಜನತಾವಾಣಿ’ಯ ಹಿರಿಯ ವರದಿಗಾರ ಸಿದ್ಧಯ್ಯ ಒಡೆಯರ್ (60) ಅವರು ಬುಧವಾರ ನಿಧನರಾಗಿದ್ದಾರೆ.
ತರಳಬಾಳು ಬಡಾವಣೆಯ ನಿವಾಸಿಯಾಗಿದ್ದ ಸಿದ್ಧಯ್ಯ ಅವರು ಪತ್ನಿ, ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ‘ಸಂಯುಕ್ತ ಕರ್ನಾಟಕ’ ಪತ್ರಿಕೆಯಲ್ಲೂ ಸೇವೆ ಸಲ್ಲಿಸಿದ್ದ ಇವರು, ದೀರ್ಘಕಾಲದ ಪತ್ರಿಕೋದ್ಯಮ ಜೀವನದಲ್ಲಿ ತಮ್ಮ ಜನಪರ ಹಾಗೂ ನಿಷ್ಠಾವಂತ ವರದಿಗಳ ಮೂಲಕ ಗಮನಸೆಳೆದಿದ್ದರು.
ಅವರ ಮಾಧ್ಯಮ ಸೇವೆಯನ್ನು ಗುರುತಿಸಿ ‘ದಾವಣಗೆರೆ ಪತ್ರಕರ್ತ ರಾಜ್ಯ ಯುವಜನ ಪ್ರಶಸ್ತಿ’ ನೀಡಿ ಗೌರವಿಸಲಾಗಿತ್ತು. ಮೃತರ ಅಂತ್ಯಕ್ರಿಯೆಯು ದಾವಣಗೆರೆಯ ಗ್ಲಾಸ್ ಹೌಸ್ ಬಳಿಯ ರುದ್ರಭೂಮಿಯಲ್ಲಿ ಮಧ್ಯಾಹ್ನ 2 ಗಂಟೆಗೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.





Leave a comment