SUDDIKSHANA KANNADA NEWS/ DAVANAGERE/ DATE:29-09-2023
ದಾವಣಗೆರೆ (Davanagere): ಹರಿಹರ ತಾಲೂಕಿನ ದೇವರ ಬೆಳಕೆರೆ ಪಿಕಪ್ ಡ್ಯಾಂನಲ್ಲಿ ಬದುಕುಳಿದ ಬಾಲಕ ನಗರದ ಬಾಪೂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬಾಪೂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 13 ವರ್ಷದ ಅಥರ್ವ ಬಾಲಕನನ್ನು ಎಸ್ ಎಸ್ ಕೇರ್ ಟ್ರಸ್ಟ್ ನ ಟ್ರಸ್ಟಿ ಡಾ. ಪ್ರಭಾ ಮಲ್ಲಿಕಾರ್ಜುನ್ ರವರು ಇಂದು ಭೇಟಿಯಾಗಿ ಚಿಕಿತ್ಸೆ ಹಾಗೂ ಆರೋಗ್ಯದ ಮಾಹಿತಿ ಪಡೆದರು.
ಈ ಸುದ್ದಿಯನ್ನೂ ಓದಿ:
Davanagere: ಹೈಕಮಾಂಡ್ ಸೂಚನೆ ಮೇರೆಗೆ ದಾವಣಗೆರೆ ಜಿಲ್ಲಾ ಪ್ರವಾಸ: ಲೋಕಸಭೆಗೆ ನನಗೆ ಕಾಂಗ್ರೆಸ್ ಟಿಕೆಟ್ ಸಿಗುವ ವಿಶ್ವಾಸ: ಜಿ. ಬಿ. ವಿನಯ್ ಕುಮಾರ್
ಬಾಲಕನಿಗೆ ಆತನ ತಂದೆ ಹಾಗೂ ಸಹೋದರನ ಅಂತ್ಯ ಸಂಸ್ಕಾರಕ್ಕೆ ತೆರಳಲು ಸೂಕ್ತ ವೈದ್ಯಕೀಯ ವ್ಯವಸ್ಥೆಯೊಂದಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿಕೊಟ್ಟರು. ಈ ಮೂಲಕ ತಂದೆ ಹಾಗೂ ಸಹೋದರನ ಅಂತಿಮ ದರ್ಶನ ಪಡೆಯಲು ಬೇಕಾದ ಅನುಕೂಲ ಮಾಡಿಕೊಟ್ಟರು.
ಪಿಕ್ನಿಕ್ ಗೆ ತೆರಳಿದ್ದ ವೇಳೆ ಗುರುವಾರದಂದು ಹರಿಹರ ತಾಲೂಕಿನ ದೇವರಬೆಳಕೆರೆ ಪಿಕಪ್ ಡ್ಯಾಂನಲ್ಲಿ ಮಿಟ್ಲಕಟ್ಟೆ ಗ್ರಾಮದ ಚಂದ್ರಪ್ಪ(42), ಮಗ ಶೌರ್ಯ(9) ಸಾವನ್ನಪ್ಪಿದ್ದರು. ರಜೆ ಹಿನ್ನೆಲೆ ಡ್ಯಾಂ ನೋಡಲು ತೆರಳಿದ್ದ ಅಪ್ಪ ಮಗ ಸಾವು
ಕಂಡಿದ್ದರು. ಅಥರ್ವನನ್ನು ರಕ್ಷಿಸಿದ್ದ ಚಂದ್ರಪ್ಪ ಕೊನೆಯುಸಿರೆಳೆದಿದ್ದರು.
ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಅಥರ್ವನನ್ನು ದಡಕ್ಕೆ ಸೇರಿಸಿ ಮತ್ತೊಬ್ಬ ಪುತ್ರ ಶೌರ್ಯನನ್ನು ರಕ್ಷಿಸಲು ಹೋಗಿದ್ದ ಚಂದ್ರಪ್ಪರು ನೀರು ಪಾಲಾಗಿದ್ದರು. ಬಳಿಕ ಆಸ್ಪತ್ರೆಗೆ ಕರೆತಂದರೂ ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದರು. ಇನ್ನು
ನೀರಿನಲ್ಲಿ ಕೊಚ್ಚಿ ಹೋಗಿದ್ದ ಶೌರ್ಯನ ಮೃತದೇಹ ಸಿಕ್ಕಿದ್ದು, ಕುಟುಂಬಸ್ಥರು, ಸಂಬಂಧಿಕರ ಆಕ್ರಂದನದ ನಡುವೆ ಅಂತ್ಯಕ್ರಿಯೆ ನೆರವೇರಿತು.