ದಾವಣಗೆರೆ: 66/11 ಕೆ.ವಿ. ಕುಕ್ಕವಾಡ ಮತ್ತು 66/11 ಕೆ.ವಿ. ಶ್ಯಾಗಲೆ ವಿದ್ಯುತ್ ವಿತರಣ ಕೇಂದ್ರದಲ್ಲಿ ತುರ್ತಾಗಿ ನಿರ್ವಾಹಣ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಆಗಸ್ಟ್ 20 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಕುಕ್ಕವಾಡ, ಕೊಲಕುಂಟೆ, ಗಿರಿಯಾಪುರ, ಕೈದಾಳೆ, ಹದಡಿ, ಕಲಬಂಡೆ, ಲೋಕಿಕೆರೆ, ಬಲ್ಲೂರು, ಕನಗೊಂಡನಹಳ್ಳಿ, ಮತ್ತಿ, ನಾಗರಸನಹಳ್ಳಿ, ಹೂವಿನಮಡು ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು, ಶ್ಯಾಗಲೆ, ಕಂದ್ಗಲ್ಲು, ಕೋಡಿಹಳ್ಳಿ, ಗೋಣಿವಾಡ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ವಿದ್ಯುತ್ ವ್ಯತ್ಯಯ:
66/11ಕೆವಿ ಹಿರೇಮಲ್ಲನಹೊಳೆ ವಿ.ವಿ ಕೇಂದ್ರದಲ್ಲಿ ತ್ರೈಮಾಸಿಕ ಕಾಮಗಾರಿ ನಿರ್ವಹಣೆ ಹಮ್ಮಿಕೊಂಡಿರುವುದರಿಂದ ಈ ಕಾಮಗಾರಿಗೆ ಸಂಬಂಧಿಸಿದಂತೆ, 66/11 ಕೆವಿ ಹಿರೇಮಲ್ಲನಹೊಳೆ ವಿ.ವಿ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳ ಎನ್‍ಜೆವೈ ಮತ್ತು ಐ.ಪ ಮಾರ್ಗಗಳಿಗೆ ಆಗಸ್ಟ್ 20 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಪವರ್ ಕಟ್:
66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಬೆವಿಕಂ ವತಿಯಿಂದ ತುರ್ತುಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಆಗಸ್ಟ್ 20 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಿಜಲಿಂಗಪ್ಪ ಲೇಔಟ್, ದೇವರಾಜ್‍ಅರಸ್ ಲೇಔಟ್ ಎ ಬ್ಲಾಕ್, ವಿನಾಯಕರಸ್ತೆ, ಯಲ್ಲಮ್ಮ ನಗರ, ಶಾಂತಿ ನಗರ, ವಿನೋಬ ನಗರ 4ನೇ ಮೇನ್‍ರಸ್ತೆಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
- August 20 Power Outage
- BESCOM Davanagere Update
- BESCOM maintenance Davanagere
- Davanagere Electricity Outage News
- Davanagere Power Cut
- Nijalingappa Layout Power Cut
- ಆಗಸ್ಟ್ 20 ಪವರ್ ಕಟ್
- ಕುಕ್ಕವಾಡ ವಿದ್ಯುತ್ ವ್ಯತ್ಯಯ
- ದಾವಣಗೆರೆ ವಿದ್ಯುತ್ ವ್ಯತ್ಯಯ
- ನಿಜಲಿಂಗಪ್ಪ ಲೇಔಟ್ ಕರೆಂಟ್ ಕಟ್
- ಬೆಸ್ಕಾಂ ಪ್ರಕಟಣೆ ದಾವಣಗೆರೆ
- ಹಿರೇಮಲ್ಲನಹೊಳೆ ಬೆಸ್ಕಾಂ ಸುದ್ದಿ





Leave a comment