Home ದಾವಣಗೆರೆ ಹಕ್ಕರಕಿ ಸೊಪ್ಪಿನಿಂದ ಶ್ವಾಸಕೋಶ ಕ್ಯಾನ್ಸರ್‌ಗೆ ಡಾ. ಡಿ. ಕೊಟ್ರೇಶ್ ಔಷಧ ಸಂಶೋಧನೆ: ದಾವಣಗೆರೆ ವಿವಿಗೆ ₹20 ಲಕ್ಷ ವಿಜಿಎಸ್‌ಟಿ ಅನುದಾನ:
ದಾವಣಗೆರೆನವದೆಹಲಿಬೆಂಗಳೂರು

ಹಕ್ಕರಕಿ ಸೊಪ್ಪಿನಿಂದ ಶ್ವಾಸಕೋಶ ಕ್ಯಾನ್ಸರ್‌ಗೆ ಡಾ. ಡಿ. ಕೊಟ್ರೇಶ್ ಔಷಧ ಸಂಶೋಧನೆ: ದಾವಣಗೆರೆ ವಿವಿಗೆ ₹20 ಲಕ್ಷ ವಿಜಿಎಸ್‌ಟಿ ಅನುದಾನ:

Share
ದಾವಣಗೆರೆ
Share

ದಾವಣಗೆರೆ: ಸ್ಥಳೀಯ ಸಸ್ಯಗಳಿಂದ ಕ್ಯಾನ್ಸರ್‌ನಂತಹ ಮಾರಕ ರೋಗಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಡಿ. ಕೊಟ್ರೇಶ್ ಅವರಿಗೆ ಜಾಗತಿಕ ಗಮನ ಸೆಳೆಯುವ ಮಹತ್ವದ ಸಂಶೋಧನಾ ಯೋಜನೆಯೊಂದು ಲಭಿಸಿದೆ.

ಹಕ್ಕರಕಿ ಸೊಪ್ಪಿನಲ್ಲಿರುವ ಔಷಧೀಯ ಗುಣಗಳ ಮೂಲಕ ಶ್ವಾಸಕೋಶದ ಕ್ಯಾನ್ಸರ್ ತಡೆಗಟ್ಟುವ ಸಾಧ್ಯತೆಗಳ ಕುರಿತು ಅನ್ವೇಷಿಸಲು ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಪ್ರೋತ್ಸಾಹಕ ಸಂಸ್ಥೆ (VGST) 20 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಿದೆ.

ಜಿನಿಸ್ಟಿನ್ ರಾಸಾಯನಿಕದ ಕೌತುಕ:

ಹಕ್ಕರಕಿ ಸೊಪ್ಪಿನಲ್ಲಿ ಕಂಡುಬರುವ ‘ಜಿನಿಸ್ಟಿನ್’  ಎಂಬ ನೈಸರ್ಗಿಕ ರಾಸಾಯನಿಕವನ್ನು ಪ್ರತ್ಯೇಕಿಸಿ, ಅದರ ರೋಗ ನಿರೋಧಕ ಸಾಮರ್ಥ್ಯದ ಮೂಲಕ ಶ್ವಾಸಕೋಶದ ಕ್ಯಾನ್ಸರ್ ಕೋಶಗಳನ್ನು ನಿವಾರಿಸುವ ಕುರಿತು ಡಾ. ಕೊಟ್ರೇಶ್ ಸಂಶೋಧನೆ ನಡೆಸಲಿದ್ದಾರೆ. ಈ ಯೋಜನೆ ಯಶಸ್ವಿಯಾದಲ್ಲಿ, ಅತ್ಯಂತ ಕಡಿಮೆ ವೆಚ್ಚದ ಮತ್ತು ಅತ್ಯಂತ ನೈಸರ್ಗಿಕ ಚಿಕಿತ್ಸಾ ಪದ್ಧತಿ ವೈದ್ಯಕೀಯ ಕ್ಷೇತ್ರಕ್ಕೆ ಲಭ್ಯವಾಗಲಿದೆ.

“ಈ ಯೋಜನೆಯು ಯಶಸ್ವಿಯಾದರೆ ಜಾಗತಿಕ ಮಟ್ಟದಲ್ಲಿ ದೊಡ್ಡ ಮನ್ನಣೆ ಸಿಗಲಿದೆ. ಲಕ್ಷಾಂತರ ಜನರ ಶ್ವಾಸಕೋಶದ ಆರೋಗ್ಯ ಸಮಸ್ಯೆ ಹಾಗೂ ಶ್ವಾಸಕೋಶ ಕ್ಯಾನ್ಸರ್‌ಗೆ ನೈಸರ್ಗಿಕ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ.”

— ಡಾ. ಡಿ. ಕೊಟ್ರೇಶ್, ಪ್ರಾಧ್ಯಾಪಕರು, ದಾವಣಗೆರೆ ವಿಶ್ವವಿದ್ಯಾನಿಲಯ.

Share

Leave a comment

Leave a Reply

Your email address will not be published. Required fields are marked *

Related Articles