ದಾವಣಗೆರೆ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಶ್ರೀಕ್ಷೇತ್ರ ಶ್ರೀ ಮಂಜುನಾಥ ಸ್ವಾಮಿಗೆ ನಗರದ ದಿ. ಬಸಮ್ಮ ಮಾಗಿ ಮತ್ತು ವೀರಬಸಪ್ಪ ಮಾಗಿ ಕುಟುಂಬದ ವತಿಯಿಂದ ಅಕ್ಕಿ ಸಮರ್ಪಿಸಲು ಮಾಗಿ ಕುಟುಂಬಸ್ಥರು ಜುಲೈ 30ರ ನಾಳೆ ತೆರಳಲಿದ್ದಾರೆ.
461 ಪ್ಯಾಕೆಟ್ ಅಕ್ಕಿಯನ್ನು ಮಾಗಿ ಕುಟುಂಬದಿಂದ ಧರ್ಮಸ್ಥಳಕ್ಕೆ ತೆರಳಿ ಸಮರ್ಪಿಸಲಾಗುತ್ತದೆ. ಮಕ್ಕಳಾದ ಕೈಲಾಶ್ ಬಾಬು ಮಾಗಿ, ರೂಪಾ, ಚೌಕಿಪೇಟೆ ಅಕ್ಕಿ ವರ್ತಕರ ಸಂಘದ ಅಧ್ಯಕ್ಷ ಎಂ. ವಿ. ಜಯಪ್ರಕಾಶ್ ಮಾಗಿ, ದಾನೇಶ್ವರಿ ಅವರು ಹಾಗೂ ಅವರ ಸ್ನೇಹಿತರು, ಬಂಧು ಮಿತ್ರರಿಂದ ಒಟ್ಟು 580 ಪ್ಯಾಕೆಟ್ ಗಳನ್ನು ಮಂಜುನಾಥ ಸ್ವಾಮಿಯ ಅನ್ನಸಂತರ್ಪಣೆಗಾಗಿ ನೀಡಲಾಗುವುದು.
ಜುಲೈ 30ರ ಬೆಳಿಗ್ಗೆ 7 ಗಂಟೆಗೆ ಹಳೇಪೇಟೆಯ ಶ್ರೀವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಭಕ್ತಿ ಸಮರ್ಪಿಸುವ ಸಲುವಾಗಿ ಹೋಗಲಾಗುತ್ತದೆ. ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಮಾಗಿ ಕುಟುಂಬಸ್ಥರ ಜೊತೆಗೆ ಸ್ನೇಹಿತರು, ಬಂಧು ಮಿತ್ರರಿಗಾಗಿ ಎರಡು ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಬಸ್ ಗಳಲ್ಲಿ ತೆರಳಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಮಾಡಿ ಪೂಜೆ ಸಲ್ಲಿಸಿ, ಅಕ್ಕಿ ಸಮರ್ಪಣೆ ಮಾಡಿ ವಾಪಸ್ ಬರಲಾಗುತ್ತದೆ ಎಂದು ಎಂ. ವಿ. ಜಯಪ್ರಕಾಶ್ ಮಾಗಿ ಅವರು ತಿಳಿಸಿದ್ದಾರೆ.
ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಗೆ 6ನೇ ವರ್ಷದ ಅಕ್ಕಿ ಸಮರ್ಪಣೆ ಮಾಡುತ್ತಿರುವ ಜಯಪ್ರಕಾಶ್ ಮಾಗಿ ಅವರ ಈ ಧಾರ್ಮಿಕ ಹಾಗೂ ಸಾಮಾಜಿಕ ಕೈಂಕರ್ಯ ಹೀಗೆಯೇ ನಿರಂತರವಾಗಿ ಸಾಗಲಿ, ಶ್ರೀ ಸ್ವಾಮಿಯ ಆಶೀರ್ವಾದ ಅವರ ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ ಎಂದು ಸ್ನೇಹಿತರು ಆಶಿಸಿದ್ದಾರೆ.
- Anna Santharpane
- Chowkipete Rice Merchants Association
- DAVANAGERE NEWS
- Dharmasthala Dasoha
- Dharmasthala Manjunatha Swamy
- Karnataka News
- Magi family Davanagere
- MV Jayaprakash Magi
- Rice donation Dharmasthala
- ಅಕ್ಕಿ ಸಮರ್ಪಣೆ
- ಅನ್ನಸಂತರ್ಪಣೆ
- ಎಂ ವಿ ಜಯಪ್ರಕಾಶ್ ಮಾಗಿ
- ಕರ್ನಾಟಕ ಸುದ್ದಿ
- ಚೌಕಿಪೇಟೆ ಅಕ್ಕಿ ವರ್ತಕರು
- ದಾವಣಗೆರೆ ಸುದ್ದಿ
- ಧರ್ಮಸ್ಥಳ ದಾಸೋಹ
- ಧರ್ಮಸ್ಥಳ ಮಂಜುನಾಥ ಸ್ವಾಮಿ
- ಮಾಗಿ ಕುಟುಂಬ
- ಹಳೇಪೇಟೆ ವೀರಭದ್ರೇಶ್ವರ ದೇವಸ್ಥಾನ





Leave a comment