SUDDIKSHANA KANNADA NEWS/ DAVANAGERE/ DATE:16-09-2023
ದಾವಣಗೆರೆ (Davanagere): ಗಣೇಶ ಹಬ್ಬದ ಅಂಗವಾಗಿ ಗಣೇಶ ಮೂರ್ತಿ ವಿಸರ್ಜನೆಗೆ ದಾವಣಗೆರೆ ಮಹಾನಗರ ಪಾಲಿಕೆ ವತಿಯಿಂದ, ಸೆ. 18, 20 ಮತ್ತು 22 ರಂದು ನಗರದ 30 ಸ್ಥಳಗಳಲ್ಲಿ ಟ್ರ್ಯಾಕ್ಟರ್ ಟ್ರೇಲರ್ ನಿಲ್ಲಿಸುವ ಮೂಲಕ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದೆ, ಸಾರ್ವಜನಿಕರು ಗಣೇಶ ಮೂರ್ತಿಗಳನ್ನು ನಿಗದಿತ ಸ್ಥಳದಲ್ಲಿಯೇ ವಿಸರ್ಜನೆ ಮಾಡಬೇಕು ಎಂದು ಮಹಾನಗರಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:
ದಾವಣಗೆರೆ (Davanagere) ಜಿಲ್ಲೆಯಲ್ಲಿ ಪಿಒಪಿ ಗಣೇಶ ಮೂರ್ತಿ ಬ್ಯಾನ್: ಮಣ್ಣು, ಬೆಲ್ಲದ ಗಣೇಶನ ಮೂರ್ತಿ ಪ್ರತಿಷ್ಠಾಪನೆಗಷ್ಟೇ ಪರ್ಮೀಷನ್
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಟ್ರ್ಯಾಕ್ಟರ್ ಟ್ರೇಲರ್ ನಿಲ್ಲಿಸಲಾಗುವ ಸ್ಥಳಗಳ ವಿವರ ಇಂತಿದೆ. ಹಗೆದಿಬ್ಬ ವೃತ್ತ, ರಾಜಕುಮಾರ ಶಾಲೆ ಹತ್ತಿರ ಕುರುಬರ ಕೇರಿ, ಕೊಂಡಜ್ಜಿ ರಸ್ತೆ (ಶಿಬಾರ) ಮೈಲಾರಲಿಂಗೇಶ್ವರ ದೇವಸ್ಥಾನ, ದೇವರಾಜ ಅರಸ್ ಬಡಾವಣೆ ಕೋರ್ಟ್ ಹಿಂಭಾಗ, ದುಗಾಂಬಿಕ ದೇವಸ್ಥಾನ (ಶಿವಾಜಿ ವೃತ್ತ), ಹೊಂಡದ ವೃತ್ತ, ಬೇತೂರು ರಸ್ತೆ ವೆಂಕಟೇಶ್ವರ ವೃತ್ತ.
ಮಹಾರಾಜಪೇಟೆ ವಿಠಲಮಂದಿರ, ಚೌಕಿಪೇಟೆಯ ಹಾಸಬಾವಿ ವೃತ್ತ, ವಿನೋಬನಗರ 3ನೇ ಮುಖ್ಯ ರಸ್ತೆ, ರಾಮ್ ಅಂಡ್ ಕೋ ಸರ್ಕಲ್, ಕಾಯಿಪೇಟೆಯ ಬಸವೇಶ್ವರ ವೃತ್ತ, ಬಂಬೂ ಬಜಾರ್ (ಗಣೇಶ ಹೋಟೆಲ್ ಬಳಿ), ಎಸ್ಎಸ್ ಲೇಔಟ್ ಬನ್ನಿಮರದ ಹತ್ತಿರ ರಿಂಗ್ ರಸ್ತೆ, ಎಂಸಿಸಿ ಎ ಬ್ಲಾಕ್ ಬಕ್ಕೇಶ್ವರ ಸ್ಕೂಲ್ ಮುಂಭಾಗ, ಜಯದೇವ ವೃತ್ತ, ಡಿಸಿಎಂ ಲೇಔಟ್ ಸರ್ಕಲ್ ಹತ್ತಿರ, ಆವರಗೆರೆಯ ಸರ್ಕಾರಿ ಶಾಲೆಯ ಹತ್ತಿರ, ಸರಸ್ವತಿ ಬಡಾವಣೆ ಪಂಚಮುಖಿ ಆಂಜನೇಯ ದೇವಸ್ಥಾನ.
ಶಿವಕುಮಾರ ಸ್ವಾಮಿ ಬಡಾವಣೆ 1ನೇ ಹಂತದ ಸಂಜೀವಿನಿ ಆಂಜನೇಯ ದೇವಸ್ಥಾನ, ನಿಟ್ಟುವಳ್ಳಿ ದುಗಾಂಬಿಕ ದೇವಸ್ಥಾನ, ಹೆಚ್ಕೆಆರ್ ಸರ್ಕಲ್, ಡಾಂಗೆ ಪಾರ್ಕ್, ಕುವೆಂಪು ನಗರದ ಬಾಪೂಜಿ ಶಾಲೆ ಹತ್ತಿರ, ಗುಂಡಿ ಮಹದೇವಪ್ಪ ಸರ್ಕಲ್, ವಿದ್ಯಾನಗರದ ಈಶ್ವರ ಪಾರ್ವತಿ ದೇವಸ್ಥಾನ, ಆಂಜನೇಯ ಬಡಾವಣೆ ಆಂಜನೇಯ ದೇವಸ್ಥಾನ, ಶಾಮನೂರಿನ ಶ್ರೀರಾಮ ಮಂದಿರ, ಹಳೇ ಕುಂದುವಾಡ ಆಂಜನೇಯ ದೇವಸ್ಥಾನ.
ಸಾರ್ವಜನಿಕರು ಮಹಾನಗರಪಾಲಿಕೆ ವತಿಯಿಂದ ನಿಗದಿಪಡಿಸಲಾದ ಸ್ಥಳಗಳಲ್ಲಿಯೇ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವ ಮೂಲಕ ಜಲ ಮತ್ತು ಪರಿಸರ ಮಾಲಿನ್ಯ ತಡೆಗಟ್ಟಲು ಸಹಕರಿಸಬೇಕು ಎಂದು ಆಯುಕ್ತರು ತಿಳಿಸಿದ್ದಾರೆ.