Home ದಾವಣಗೆರೆ ಜಿ.ಎಂ. ವಿಶ್ವವಿದ್ಯಾಲಯದ ನೂತನ ಕುಲಪತಿ ಡಾ. ಹೆಚ್.ಆರ್. ಮಹಾದೇವಸ್ವಾಮಿರಿಗೆ ಸ್ವಾಗತ, ನಿರ್ಗಮಿತ ಕುಲಪತಿ ಡಾ. ಎಸ್.ಆರ್. ಶಂಕಪಾಲ್ ರಿಗೆ ಗೌರವ ಬೀಳ್ಕೊಡುಗೆ
ದಾವಣಗೆರೆನವದೆಹಲಿಬೆಂಗಳೂರು

ಜಿ.ಎಂ. ವಿಶ್ವವಿದ್ಯಾಲಯದ ನೂತನ ಕುಲಪತಿ ಡಾ. ಹೆಚ್.ಆರ್. ಮಹಾದೇವಸ್ವಾಮಿರಿಗೆ ಸ್ವಾಗತ, ನಿರ್ಗಮಿತ ಕುಲಪತಿ ಡಾ. ಎಸ್.ಆರ್. ಶಂಕಪಾಲ್ ರಿಗೆ ಗೌರವ ಬೀಳ್ಕೊಡುಗೆ

Share
ವಿಶ್ವವಿದ್ಯಾಲಯ
Share

ದಾವಣಗೆರೆ: ಜಿ.ಎಂ. ವಿಶ್ವವಿದ್ಯಾಲಯದಲ್ಲಿ ನೂತನ ಕುಲಪತಿಗಳಾಗಿ ನೇಮಕಗೊಂಡ ಡಾ. ಹೆಚ್.ಆರ್. ಮಹಾದೇವಸ್ವಾಮಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಅಲ್ಲದೇ, ನಿರ್ಗಮಿತ ಕುಲಪತಿಗಳಾದ ಡಾ. ಎಸ್.ಆರ್. ಶಂಕಪಾಲ್ ಅವರನ್ನು ಗೌರವ ಪೂರ್ವಕವಾಗಿ ಬೀಳ್ಕೊಡಲಾಯಿತು.

ಜಿ.ಎಂ. ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಜಿ.ಎಂ. ಲಿಂಗರಾಜು ಅವರು ನೂತನ ಕುಲಪತಿಗಳಾದ ಡಾ. ಹೆಚ್.ಆರ್. ಮಹಾದೇವಸ್ವಾಮಿ ಅವರನ್ನು ಹೂಗುಚ್ಚ ನೀಡಿ ಸ್ವಾಗತಿಸಿ ಅಭಿನಂದಿಸಿದರು. ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ ನಿರ್ಗಮಿತ ಕುಲಪತಿಗಳಾದ ಡಾ. ಎಸ್.ಆರ್. ಶಂಕಪಾಲ್ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ವಿಶ್ವವಿದ್ಯಾಲಯದ ಜಿ. ಹಾಲಮ್ಮ ಸಭಾಂಗಣದಲ್ಲಿ ಮಧ್ಯಾಹ್ನ ಆಯೋಜಿಸಲಾಗಿದ್ದ ನಾಯಕತ್ವ ಪರಿವರ್ತನೆ ಮತ್ತು ಅಧಿಕಾರ ಹಸ್ತಾಂತರ ಸಮಾರಂಭದಲ್ಲಿ (‘ಲೀಡರ್‌ಶಿಪ್ ಟ್ರಾನ್ಸಿಶನ್ ಸೆರೆಮನಿ’) ನಿರ್ಗಮಿತ ಕುಲಪತಿಗಳಾದ ಡಾ. ಎಸ್.ಆರ್. ಶಂಕಪಾಲ್ ಅವರು ತಮ್ಮ ಅಧಿಕಾರವನ್ನು ನೂತನ ಕುಲಪತಿಗಳಾಗಿ ನೇಮಕಗೊಂಡಿರುವ ಡಾ. ಹೆಚ್.ಆರ್. ಮಹಾದೇವಸ್ವಾಮಿ ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಿದರು.

ಇದೇ ವೇಳೆ ಆಡಳಿತ ಮಂಡಳಿ ಪ್ರತಿನಿಧಿಗಳಾದ ವೈ.ಯು. ಸುಭಾಷ್‌ ಚಂದ್ರ, ಮ್ಯಾನೇಜ್‌ಮೆಂಟ್ ಪ್ರತಿನಿಧಿಗಳಾದ ಡಾ. ಕೆ. ದಿವ್ಯಾನಂದ, ಜಿಎಂ ಗ್ರೂಪ್ ನ ಎಕ್ಸಕ್ಯೂಟಿವ್ ಡೈರೆಕ್ಟರ್ ರಫೀಕ್ ರಾಜ್, ಸಹ ಉಪಕುಲಪತಿಗಳಾದ ಡಾ. ಎಂ. ವೇಣುಗೋಪಾಲರಾವ್‌, ಕುಲಸಚಿವರಾದ ಡಾ. ಸುನೀಲ್‌ ಕುಮಾರ್‌ ಬಿ.ಎಸ್‌ ಇವರುಗಳು ನಿರ್ಗಮಿತ ಕುಲಪತಿಗಳಾದ ಡಾ. ಎಸ್.ಆರ್. ಶಂಕಪಾಲ್ ಅವರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಬೀಳ್ಕೊಡಲಾಯಿತು. ಜೊತೆಗೆ ಅವರ ದೂರದೃಷ್ಟಿ, ನಾಯಕತ್ವ ಮತ್ತು ಅಮೂಲ್ಯ ಕೊಡುಗೆಗಳನ್ನು ಸ್ಮರಿಸಿದರು.

ನೂತನ ಕುಲಪತಿಗಳಾಗಿ ಅಧಿಕಾರ ಸ್ವೀಕರಿಸಿದ ಡಾ. ಹೆಚ್.ಆರ್. ಮಹಾದೇವಸ್ವಾಮಿ ಅವರನ್ನು ಸಭೆಗೆ ಪರಿಚಯಿಸಿ, ಭವಿಷ್ಯದಲ್ಲಿ ವಿಶ್ವವಿದ್ಯಾಲಯವನ್ನು ಉನ್ನತ ಮಟ್ಟಕ್ಕೇರಿಸಲು ಅವರ ನೇತೃತ್ವದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ ಎಂದು ಆಶಿಸಲಾಯಿತು.

ಜಿ.ಎಂ. ವಿಶ್ವವಿದ್ಯಾಲಯ ಸೇರಿದಂತೆ ಜಿಎಂ ಸಮೂಹ ಸಂಸ್ಥೆಯ ಪ್ರಾಂಶುಪಾಲರು, ಡೀನ್‌ ಗಳು, ನಿರ್ದೇಶಕರು, ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂಧಿ ಸೇರಿದಂತೆ ಸಮಸ್ತ ಜಿಎಂ ಶೈಕ್ಷಣಿಕ ಸಮೂಹದ ಕುಟುಂಬ ಉಪಸ್ಥಿತರಿದ್ದರು.
ಡಾ. ಹೆಚ್.ಆರ್. ಮಹಾದೇವಸ್ವಾಮಿ ಕಿರು ಪರಿಚಯ : ಕನಕಪುರ ತಾಲೂಕಿನ ಹಾಳಸೂರು ಗ್ರಾಮದ ಶಿಕ್ಷಕರ ಕುಟುಂಬದಲ್ಲಿ ಜನಿಸಿದ ಡಾ. ಹೆಚ್.ಆರ್. ಮಹಾದೇವಸ್ವಾಮಿ (Dr. HRM) ಅವರು ಗ್ರಾಮೀಣ ಹಿನ್ನೆಲೆಯಿಂದ ಬಂದು ಶಿಕ್ಷಣ, ತಂತ್ರಜ್ಞಾನ ಹಾಗೂ ಆಡಳಿತ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ ಅಪರೂಪದ ವ್ಯಕ್ತಿತ್ವ.

ಹಾಳಸೂರಿನಲ್ಲಿ ಪ್ರಾಥಮಿಕ, ಸಾತನೂರಿನಲ್ಲಿ ಪ್ರೌಢ ಹಾಗೂ ಕನಕಪುರದಲ್ಲಿ ಪಿಯುಸಿ ಶಿಕ್ಷಣ ಪೂರೈಸಿದ ಇವರು, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ವಿಷಯದಲ್ಲಿ ಬಿ.ಇ. (1987) ಮತ್ತು ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್‌ನಲ್ಲಿ ಎಂ.ಟೆಕ್ (1992) ಪದವಿ ಪಡೆದರು. ಬಳಿಕ 2001ರಲ್ಲಿ ‘ಫ್ರ್ಯಾಕ್ಟಲ್ & ವೇವ್‌ಲೆಟ್ ಇಮೇಜ್ ಕಂಪ್ರೆಷನ್’ ಕ್ಷೇತ್ರದಲ್ಲಿ ಪಿಎಚ್.ಡಿ (PhD) ಸಾಧಿಸಿದರು.
ತುಮಕೂರಿನ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ (SIT) ಸಹಾಯಕ ಪ್ರಾಧ್ಯಾಪಕರಾಗಿ ಶೈಕ್ಷಣಿಕ ವೃತ್ತಿ ಆರಂಭಿಸಿದ ಇವರು, ನಂತರ ಸತ್ಯಂ ಕಂಪ್ಯೂಟರ್ಸ್ ಹಾಗೂ ರಾಬರ್ಟ್ ಬಾಷ್ ಸಂಸ್ಥೆಗಳಲ್ಲಿ ಹಿರಿಯ ತಂತ್ರಜ್ಞರಾಗಿ ಸೇವೆ ಸಲ್ಲಿಸಿ 200ಕ್ಕೂ ಹೆಚ್ಚು ಎಂಜಿನಿಯರ್‌ಗಳ ತಂಡವನ್ನು ಮುನ್ನಡೆಸಿದರು. ‘ಅಪ್ಲೈಡ್ ಇನ್ವೆನ್ಷನ್ಸ್ ಇಂಡಿಯಾ’ ಸಂಸ್ಥೆಯ ಸಹ-ಸಂಸ್ಥಾಪಕ ಮತ್ತು ಸಿಇಒ ಆಗಿ 100ಕ್ಕೂ ಹೆಚ್ಚು ಪೇಟೆಂಟ್‌ಗಳ ಸೃಷ್ಟಿ ಹಾಗೂ ವಾಣಿಜ್ಯೀಕರಣಕ್ಕೆ ಶ್ರಮಿಸಿದ ಇವರು, ‘ಕ್ಯೂರಿಯೋ ಸಿಸ್ಟಮ್ಸ್’ ನ ಸಹ-ಸಂಸ್ಥಾಪಕರಾಗಿಯೂ ಸಕ್ರಿಯರಾಗಿದ್ದರು.

ಶಿವಮೊಗ್ಗದ JNNCE ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ‘Transformation for Excellence’ ಯೋಜನೆ ಜಾರಿಗೆ ತಂದು, ಕೇಂದ್ರ ಸರ್ಕಾರದ DSTಯಿಂದ ₹2.87 ಕೋಟಿ ಅನುದಾನದಲ್ಲಿ ‘NewGen IEDC’ ಕೇಂದ್ರ ಸ್ಥಾಪಿಸಿದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ತಾಂತ್ರಿಕ ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕರಾಗಿ 22 ಸಂಸ್ಥೆಗಳು ಹಾಗೂ 12,500ಕ್ಕೂ ಹೆಚ್ಚು ವಿದ್ಯಾರ್ಥಿಗಳ ಶೈಕ್ಷಣಿಕ ಆಡಳಿತ ನಿರ್ವಹಿಸಿದ ಇವರು, ನೋಯ್ಡಾದ ಜೆಎಸ್‌ಎಸ್ ವಿಶ್ವವಿದ್ಯಾಲಯದ ಕುಲಪತಿಯಾಗಿಯೂ (2024–2026) ಕಾರ್ಯನಿರ್ವಹಿಸಿದ್ದಾರೆ.

ಸ್ಟ್ಯಾನ್‌ಫೋರ್ಡ್, ಕ್ಯಾಲ್ಟೆಕ್ ಹಾಗೂ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ ಜಾಗತಿಕ ಶೈಕ್ಷಣಿಕ ಅನುಭವ ಹೊಂದಿರುವ ಡಾ. ಹೆಚ್‌ಆರ್‌ಎಂ, ‘Dr.HRM-Connect’ ಶೀರ್ಷಿಕೆಯಡಿಯಲ್ಲಿ ಪ್ರೇರಣಾದಾಯಿ ಸಂದೇಶ, ಶಿಕ್ಷಣ ಮತ್ತು ಲೈಫ್ ಸ್ಕಿಲ್ಸ್ ಕುರಿತು 1,400ಕ್ಕೂ ಹೆಚ್ಚು ಸರಣಿ ಲೇಖನಗಳನ್ನು ಬರೆಯುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles