Home ಕ್ರೈಂ ನ್ಯೂಸ್ ನ್ಯಾಮತಿ, ಚನ್ನಗಿರಿ, ಹರಿಹರ ಹಾಗೂ ದಾವಣಗೆರೆಯಲ್ಲಿ ಇಸ್ಫೀಟ್-ಮಟ್ಕಾ ಅಡ್ಡೆಗಳ ಮೇಲೆ ದಿಢೀರ್ ದಾಳಿ: 5 ಪ್ರತ್ಯೇಕ ಪ್ರಕರಣಗಳಲ್ಲಿ 17 ಜನರ ಬಂಧನ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ನ್ಯಾಮತಿ, ಚನ್ನಗಿರಿ, ಹರಿಹರ ಹಾಗೂ ದಾವಣಗೆರೆಯಲ್ಲಿ ಇಸ್ಫೀಟ್-ಮಟ್ಕಾ ಅಡ್ಡೆಗಳ ಮೇಲೆ ದಿಢೀರ್ ದಾಳಿ: 5 ಪ್ರತ್ಯೇಕ ಪ್ರಕರಣಗಳಲ್ಲಿ 17 ಜನರ ಬಂಧನ!

Share
ದಾವಣಗೆರೆ
Share

ದಾವಣಗೆರೆ: ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಾನೂನುಬಾಹಿರವಾಗಿ ಮಟ್ಕಾ ಹಾಗೂ ಇಸ್ಫೀಟ್ ಜೂಜಾಟದಲ್ಲಿ ತೊಡಗಿದ್ದವರ ವಿರುದ್ಧ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆ ನಡೆಸಿದ್ದಾರೆ. ಒಟ್ಟು 5 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು, 17 ಜನ ಆರೋಪಿತರನ್ನು ವಶಕ್ಕೆ ಪಡೆದು ಜೂಜಾಟಕ್ಕೆ ಬಳಸಲಾಗಿದ್ದ ಒಟ್ಟು 17,990 ರೂ. ನಗದು ಹಣ ಹಾಗೂ ಜೂಜಾಟದ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

ನ್ಯಾಮತಿ, ಗಾಂಧಿನಗರ, ಚನ್ನಗಿರಿ, ಹರಿಹರ ಗ್ರಾಮಾಂತರ ಮತ್ತು ಹದಡಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಈ ದಿಢೀರ್ ದಾಳಿಗಳು ನಡೆದಿದ್ದು, ಜಿಲ್ಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಮುಂದುವರೆಸಿದೆ.

ನ್ಯಾಮತಿ ಮಟ್ಕಾ ದಾಳಿ: ನ್ಯಾಮತಿ ತಾಲ್ಲೂಕಿನ ಚಿನ್ನಿಕಟ್ಟೆ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಮಟ್ಕಾ ಜೂಜಾಟ ನಡೆಸುತ್ತಿದ್ದ ಓರ್ವ ಆರೋಪಿಯನ್ನು ವಶಕ್ಕೆ ಪಡೆದು, 530 ರೂ. ನಗದು ಹಾಗೂ ಮಟ್ಕಾ ಚೀಟಿ ವಶ; ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲು.

ಗಾಂಧಿನಗರ ಮಟ್ಕಾ ಪ್ರಕರಣ: ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಆಡಿಸುತ್ತಿದ್ದ ಓರ್ವ ವ್ಯಕ್ತಿಯನ್ನು ಸಿಪಿಐ ಗಾಂಧಿನಗರ ವೃತ್ತದ ತಂಡ ವಶಕ್ಕೆ ಪಡೆದು 5,500 ರೂ. ನಗದು ಹಾಗೂ ಚೀಟಿ ವಶಪಡಿಸಿಕೊಂಡಿದೆ.

ಚನ್ನಗಿರಿ ಇಸ್ಫೀಟ್ ಜೂಜು: ಕೊರಟಿಕೆರೆ ಗ್ರಾಮದ ಕೆರೆ ಪಕ್ಕ ಜೂಜಾಡುತ್ತಿದ್ದ 4 ಜನರನ್ನು ಚನ್ನಗಿರಿ ಪೊಲೀಸರು ವಶಕ್ಕೆ ಪಡೆದು 3,700 ರೂ. ನಗದು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಹರಿಹರ ಗ್ರಾಮಾಂತರ ದಾಳಿ: ಬೆಳ್ಳೂಡಿ ಗ್ರಾಮದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 9 ಜನ ಆರೋಪಿತರನ್ನು ಹರಿಹರ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು 5,160 ರೂ. ನಗದು ಹಣ ವಶಪಡಿಸಿಕೊಂಡಿದ್ದಾರೆ.

ಹದಡಿ ಠಾಣಾ ವ್ಯಾಪ್ತಿ ಕಾರ್ಯಾಚರಣೆ: ದಾವಣಗೆರೆ ತಾಲ್ಲೂಕಿನ ಜರೇಕಟ್ಟೆ ಗ್ರಾಮದಲ್ಲಿ ಜೂಜಾಡುತ್ತಿದ್ದ 2 ಜನರನ್ನು ಜಿಲ್ಲಾ ಎ.ಎನ್.ಟಿ.ಎಫ್ ತಂಡವು ಸೆರೆಹಿಡಿದು 3,100 ರೂ. ನಗದು ವಶಪಡಿಸಿಕೊಂಡಿದ್ದು, ಹದಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಜೂಜು ಹಾಗೂ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವವರ ಮೇಲೆ ನಿಗಾ ಇರಿಸಲಾಗಿದ್ದು, ಮುಂಬರುವ ದಿನಗಳಲ್ಲಿಯೂ ಇಂತಹ ಕಾರ್ಯಾಚರಣೆಗಳು ಮುಂದುವರೆಯಲಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Share

Leave a comment

Leave a Reply

Your email address will not be published. Required fields are marked *

Related Articles