SUDDIKSHANA KANNADA NEWS/ DAVANAGERE/ DATE:21-10-2023
ದಾವಣಗೆರೆ (Davanagere): ಎಂಸಿಸಿ ಬಿ ಬ್ಲಾಕ್ ನ ಎರಡನೇ ಮುಖ್ಯ ರಸ್ತೆಯ ಮೂರನೇ ತಿರುವಿನಲ್ಲಿ ನವರಾತ್ರಿ ಹಾಗೂ ದಸರಾ ಹಬ್ಬದ ಪ್ರಯುಕ್ತ ಬನ್ನಿ ಪೂಜೆ ನೆರವೇರಿಸಲಾಯಿತು. ಜೊತೆಗೆ ಪೌರಕಾರ್ಮಿಕರಿಗೆ ಉಡುಗೊರೆ ವಿತರಣೆ ಮಾಡಲಾಯಿತು.
Read Also This Story:
ಎಲ್ಲೆಡೆ ವಿಶ್ವಕಪ್ ಕ್ರಿಕೆಟ್ (Cricket World Cup) ಫೀವರ್: ವರ್ಲ್ಡ್ ಕಪ್ ನಮ್ಮದು ಎಂಬ ಸಿದ್ಧಗಂಗಾ ಮಕ್ಕಳೇ ರೂಪಿಸಿರುವ ವಿಡಿಯೋದಲ್ಲಿ ಏನೆಲ್ಲಾ ವಿಶೇಷತೆ ಇದೆ ಗೊತ್ತಾ…?
ಈ ವೇಳೆ ಮಾತನಾಡಿದ ಮಹಾನಗರ ಪಾಲಿಕೆಯ ಆಡಳಿತ ಪಕ್ಷದ ನಾಯಕರೂ ಆದ ಸದಸ್ಯ ಗಡಿಗುಡಾಳ್ ಮಂಜುನಾಥ್ ಅವರು, ನವರಾತ್ರಿ ಹಬ್ಬವನ್ನು ಎಲ್ಲರೂ ಸೌಹಾರ್ದತಯುತವಾಗಿ ಆಚರಿಸೋಣ. ನವದುರ್ಗೆಯರ ಅನುಗ್ರಹ ಪ್ರತಿಯೊಬ್ಬರಿಗೂ ಸಿಗುವಂತಾಗಲಿ. ಶಾಂತಿ, ಸೌಹಾರ್ದತೆಯಿಂದ ವಿಜೃಂಭಣೆಯಿಂದ ಆಚರಿಸೋಣ ಎಂದು ಕರೆ ನೀಡಿದರು.
ಪೌರಕಾರ್ಮಿಕರು ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಾರೆ. ಅವರಿಲ್ಲ ಎಂದರೆ ಊಹಿಸಿಕೊಳ್ಳುವುದು ಅಸಾಧ್ಯ. ನಗರವು ಸ್ವಚ್ಛವಾಗಿರಬೇಕಾದರೆ ಪೌರಕಾರ್ಮಿಕರ ಸೇವೆ ಅಗತ್ಯ. ಅವರ ಅನನ್ಯ ಸೇವೆ ಬಣ್ಣಿಸಲು ಆಗದು. ಇಂಥ ಕಾಯಕ ಮಾಡುವವರಿಗೆ ನಮ್ಮ ಕೈಯಲ್ಲಾದಷ್ಟು ನೆರವು ನೀಡುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಪೌರಕಾರ್ಮಿಕರಿಗೆ ಉಡುಗೊರೆ ನೀಡುತ್ತಿದ್ದೇವೆ. ಪೌರಕಾರ್ಮಿಕರಿಗೂ ಹಬ್ಬದ ಶುಭಾಶಯದ ಜೊತೆಗೆ ಅವರೊಟ್ಟಿಗೆ ದಸರಾ ಆಚರಿಸುವುದು ಖುಷಿಯ ವಿಚಾರ. ಪ್ರತಿದಿನ ಬೆಳಿಗ್ಗೆಯೇ ಎದ್ದು ಸ್ವಚ್ಛತೆ ಕಾಯಕದಲ್ಲಿ ನಿರತರಾಗುವ ಪೌರಕಾರ್ಮಿಕರನ್ನು ಎಷ್ಟು ಹೊಗಳಿದರೂ ಸಾಲದು. ಸ್ವಚ್ಛತೆಯಿಂದ ಹಿಡಿದು ಪ್ರತಿಯೊಂದು ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಅವರ ಕುಟುಂಬವೂ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಿ ಎಂದು ಹೇಳಿದರು.
ದಸರಾ ಹಬ್ಬವು ವಿಜೃಂಭಣೆಯಿಂದ ನೆರವೇರುತ್ತದೆ. ಯಾವುದೇ ರೀತಿಯ ತೊಂದರೆಯಾಗದಂತೆ, ವಾತಾವರಣ ಕಲುಷಿತಗೊಳ್ಳುವಂತ ವದಂತಿಗಳಿಗೆ ಕಿವಿಗೊಡಬೇಡಿ. ಸೌಹಾರ್ದಯುತವಾಗಿ, ಸಂಭ್ರಮದಿಂದ ಹಬ್ಬವನ್ನು ನಾವೆಲ್ಲರೂ ಆಚರಣೆ ಮಾಡೋಣ. ಬೇರೆ ಜಿಲ್ಲೆಗಳಿಗಿಂತ ಚೆನ್ನಾಗಿ, ಶಾಂತಿ, ಸೌಹಾರ್ದತೆಯಿಂದ ಆಚರಿಸುವ ಮೂಲಕ ಮಾದರಿಯಾಗೋಣ ಎಂದು ಕರೆ ನೀಡಿದರು.
ಉಡುಗೊರೆ ಸ್ವೀಕರಿಸಿ ಮಾತನಾಡಿದ ಪೌರ ಕಾರ್ಮಿಕರು, ಪ್ರತಿವರ್ಷವೂ ನಮ್ಮನ್ನು ಇಲ್ಲಿಗೆ ಆಹ್ವಾನಿಸಿ ಕೊಡುಗೆ ನೀಡುವ ಕಾರ್ಯಕ್ರಮ ನಮಗೆಲ್ಲರಿಗೂ ಖುಷಿ ಕೊಡುತ್ತದೆ. ನಮ್ಮ ಕೆಲಸವನ್ನು ಗುರುತಿಸಿ ಪ್ರಶಂಸೆಯ ಮಾತುಗಳನ್ನು ಕೇಳುವುದು
ಸಂತಸ ಕೊಡುತ್ತದೆ. ನಾವು ಚಿರಋಣಿಯಾಗಿರುತ್ತೇವೆ ಎಂದರು.
ಇದೇ ವೇಳೆ ಎಂಸಿಸಿ ಬಿ ಬ್ಲಾಕ್ ನ ಸ್ಥಳೀಯರಾದ ಗಾಯತ್ರಿ ಅವರು ಪ್ರಸಾದದ ವ್ಯವಸ್ಥೆ ಮಾಡಿದ್ದರು. ಪೌರಕಾರ್ಮಿಕರು ಪ್ರಸಾದ ಸೇವಿಸಿ ಖುಷಿ ಪಟ್ಟರು.
—————————————————————
ಜಾಹೀರಾತು:
ವಧು ವರ ಮಾಹಿತಿ ಕೇಂದ್ರ
ನಮ್ಮಲ್ಲಿ ಎಲ್ಲಾ ಜಾತಿಯವರು ಹಾಗೂ ಎಲ್ಲಾ ವರ್ಗವದರು ಇದ್ದಾರೆ. ಮೊದಲ ಹಾಗೂ ಎರಡನೇ ಮದುವೆಗೆ ಹಾಗೂ ನಮ್ಮಲ್ಲಿ 2 ಲಕ್ಷ ಪ್ರೊಫೈಲ್ ಇದೆ. ನಿಮ್ಮಲ್ಲಿ ಎಂಥ ಸಮಸ್ಯೆ ಇದ್ದರೂ ಕೇವಲ ಮೂರು ತಿಂಗಳಲ್ಲಿ ಮದುವೆ ಹೊಂದಿಸಿ ಕೊಡುತ್ತೇವೆ ಹಾಗೂ ಅಂತರಜಾತಿ ಮದುವೆ ಹೆಚ್ಚಾಗಿ ಮಾಡಿಸುತ್ತೇವೆ. ಒಮ್ಮೆ ಭೇಟಿ ಕೊಡಿ ಅಥವಾ ಕರೆ ಮಾಡಿ ಮೊಬೈಲ್ ನಂಬರ್: 99455 00051, ವಾಟ್ಸಪ್ ನಂಬರ್ 98443 50220.