ದಾವಣಗೆರೆ: ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸಂಘಟನಾ ಸೃಜನ್ ಅಭಿಯಾನ್ ವೀಕ್ಷಕರಾದ ರಾಹುಲ್ ಬಾಲ್ ಅವರನ್ನು ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಅವರ ನೇತೃತ್ವದಲ್ಲಿ ಭೇಟಿ ಮಾಡಲಾಯಿತು.
ನಗರದ ಸರ್ಕ್ಯೂಟ್ ಹೌಸ್ ನಲ್ಲಿ ರಾಹುಲ್ ಬಾಲ್ ಅವರ ಜೊತೆ ಸೈಯದ್ ಖಾಲಿದ್ ಅಹ್ಮದ್ ಅವರು ಸೌಜನ್ಯಯುತವಾಗಿ ಭೇಟಿ ಮಾಡಿ ಚರ್ಚೆ ನಡೆಸಿದರು. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆ, ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಏನೆಲ್ಲಾ ಕಾರ್ಯತಂತ್ರ ರೂಪಿಸಬೇಕು. ಯುವಕರನ್ನು ಪಕ್ಷಕ್ಕೆ ಹೇಗೆ ಸೆಳೆಯಬೇಕೆಂಬ ಕುರಿತಂತೆ ಸಮಾಲೋಚನೆ ನಡೆಸಲಾಯಿತು.
ಬಳಿಕ ಮಾತನಾಡಿದ ಸೈಯದ್ ಖಾಲಿದ್ ಅಹ್ಮದ್ ಅವರು, ರಾಹುಲ್ ಬಾಲ್ ಅವರು ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷರ ಬಗ್ಗೆ ಸಮಾಲೋಚನೆ ಹಾಗೂ ಸಭೆ ನಡೆಸುತ್ತಿದ್ದಾರೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆಯೂ ಮಾಹಿತಿ ಪಡೆದರು. ಪಕ್ಷವು ಸದೃಢವಾಗಿದ್ದು, ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದ್ದೇವೆ. ಅವರೊಂದಿಗಿನ ಭೇಟಿ ಸೌಹಾರ್ದಯುತವಾಗಿತ್ತು, ಉಳಿದಂತೆ ಯುವಕರಿಗೆ ಆದ್ಯತೆ ನೀಡುವಂತೆಯೂ ಮನವಿ ಮಾಡಲಾಯಿತು ಎಂದು ತಿಳಿಸಿದರು.
ಈ ವೇಳೆ ಕಾಂಗ್ರೆಸ್ ಯುವ ಮುಖಂಡರಾದ ಮೆಹಬೂಬ್ ಬಾಷಾ ಸೇರಿದಂತೆ ಇತರರು ಹಾಜರಿದ್ದರು.
- Davanagere Congress
- Davanagere Local Body Elections
- DAVANAGERE NEWS
- Karnataka Politics News
- Rahul Bal AICC
- Sangathan Srijan Abhiyan Davanagere
- Syed Khalid Ahmad
- Voter List Revision Davanagere
- Youth Congress Davanagere
- ದಾವಣಗೆರೆ ಕಾಂಗ್ರೆಸ್
- ದಾವಣಗೆರೆ ಯುವ ಕಾಂಗ್ರೆಸ್
- ದಾವಣಗೆರೆ ರಾಜಕೀಯ
- ದಾವಣಗೆರೆ ಸುದ್ದಿ
- ಮತದಾರರ ಪಟ್ಟಿ ಪರಿಷ್ಕರಣೆ
- ಮೆಹಬೂಬ್ ಬಾಷಾ
- ರಾಹುಲ್ ಬಾಲ್
- ಸೃಜನ್ ಅಭಿಯಾನ್
- ಸೈಯದ್ ಖಾಲಿದ್ ಅಹ್ಮದ್
- ಸ್ಥಳೀಯ ಸಂಸ್ಥೆ ಚುನಾವಣೆ





Leave a comment