Home ದಾವಣಗೆರೆ ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆ: ಹೋಟೆಲ್, ಟ್ಯಾಕ್ಸಿ, ಹಸು ಸಾಕಾಣಿಕೆಗೆ ಸಿಗಲಿದೆ ಆರ್ಥಿಕ ನೆರವು
ದಾವಣಗೆರೆಬೆಂಗಳೂರುವಾಣಿಜ್ಯ

ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆ: ಹೋಟೆಲ್, ಟ್ಯಾಕ್ಸಿ, ಹಸು ಸಾಕಾಣಿಕೆಗೆ ಸಿಗಲಿದೆ ಆರ್ಥಿಕ ನೆರವು

Share
ಉದ್ಯಮ
Share

ದಾವಣಗೆರೆ: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ (KSBDB) ವತಿಯಿಂದ ಸ್ವಯಂ ಉದ್ಯೋಗ ಕೈಗೊಳ್ಳಲು ಬಯಸುವ ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗಳಿಗೆ ‘ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆ’ಯಡಿ ಆರ್ಥಿಕ ನೆರವು ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಬ್ರಾಹ್ಮಣ ಸಮುದಾಯದ ಜನರು ಆರ್ಥಿಕವಾಗಿ ಸಬಲರಾಗಲು ಮತ್ತು ಸ್ವಾವಲಂಬಿ ಜೀವನ ನಡೆಸಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಯಾವ ಯಾವ ಉದ್ಯಮಗಳಿಗೆ ಸಾಲ ಲಭ್ಯ?

  • ಸಣ್ಣ ಹಾಗೂ ಗುಡಿ ಕೈಗಾರಿಕೆಗಳು

  • ಹೋಟೆಲ್ ಉದ್ಯಮ ಮತ್ತು ವ್ಯಾಪಾರ ಅಂಗಡಿಗಳು

  • ಟೈಲರಿಂಗ್ (ಹೊಲಿಗೆ)

  • ಟ್ಯಾಕ್ಸಿ / ವಾಹನ ಖರೀದಿ

  • ಹಸು ಸಾಕಾಣಿಕೆ (ಹಾಲಿನ ಉದ್ಯಮ) ಹಾಗೂ ಇತರ ಸ್ವಯಂ ಉದ್ಯೋಗಗಳು.

ಅರ್ಜಿ ಸಲ್ಲಿಕೆ ವಿವರ: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅಧಿಕೃತ ವೆಬ್‌ಸೈಟ್ ksbdb.karnataka.gov.in ನಲ್ಲಿ ಆಗಸ್ಟ್ 31 ರೊಳಗಾಗಿ ಅರ್ಜಿ ಸಲ್ಲಿಸಬೇಕಾಗಿರುತ್ತದೆ.

ಹೆಚ್ಚಿನ ಮಾಹಿತಿ ಹಾಗೂ ನೆರವಿಗಾಗಿ ಮಂಡಳಿಯ ಸಹಾಯವಾಣಿ ಸಂಖ್ಯೆ: 8762249230 ಅನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *