SUDDIKSHANA KANNADA NEWS/ DAVANAGERE/ DATE:24-09-2023
ದಾವಣಗೆರೆ (Davanagere): ಭದ್ರಾ ಜಲಾಶಯದಿಂದ ನೀರು ಹರಿಸದೇ ಕಾಂಗ್ರೆಸ್ ಸರ್ಕಾರ ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ. ದಾವಣಗೆರೆ ಬಂದ್ ಗೆ ಕರೆ ಕೊಟ್ಟಿರುವ ರೈತರ ಹೋರಾಟ ನ್ಯಾಯಯುತವಾಗಿದ್ದು, ಬಿಜೆಪಿಯು
ಈ ಬಂದ್ ಬೆಂಬಲಿಸಲು ನಿರ್ಧರಿಸಿದೆ. ಸೆ. 25ರ ಬಂದ್ ಬೆಂಬಲಿಸಿ ಬೆಳಿಗ್ಗೆ 9. 30ಕ್ಕೆ ಗುಂಡಿ ಮಹಾದೇವಪ್ಪ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಯಲಿದೆ.
ಈ ಸುದ್ದಿಯನ್ನೂ ಓದಿ:
8 ವರ್ಷಗಳಲ್ಲಿ ಪತ್ತೆಯಾಗಿರುವ ಲಕ್ಷಾಂತರ ಮಕ್ಕಳು ಎಷ್ಟು ಗೊತ್ತಾ…? ಬಹುತೇಕರು ಕುಟುಂಬ(Family)ದೊಂದಿಗೆ ಒಂದಾಗಿದ್ದು ಹೇಗೆ…? ಪೋಷಕರ ಮಡಿಲು ಸೇರಿದ ಇಂಟ್ರೆಸ್ಟಿಂಗ್ ಮಾಹಿತಿ
ಈ ಸಂಬಂಧ ಹೇಳಿಕೆ ನೀಡಿರುವ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಆಗಸ್ಟ್ 10 ರಿಂದ ನಿರಂತರವಾಗಿ 100 ದಿನ ನೀರು ಹರಿಸುವುದಾಗಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದರಿಂದ ದಾವಣಗೆರೆ ಜಿಲ್ಲೆಯ ರೈತರು ಭತ್ತದ ನಾಟಿ ಮಾಡಿದ್ದಾರೆ. ಈಗಾಗಲೇ 40 ದಿನ ನೀರು ಹರಿಸಲಾಗಿದೆ. ಭತ್ತದ ನಾಟಿ ಮಾಡಿದ ರೈತರು ಸಾಲ ಸೋಲ ಮಾಡಿ ಸಾಕಷ್ಟು ಬಂಡವಾಳ ಸುರಿದು ಎರಡು ಬಾರಿ ಗೊಬ್ಬರ ಹಾಕಿದ್ದು, ಕಳೆನಾಶಕ ಕೀಟನಾಶಕ ಸಿಂಪರಣೆ ಮಾಡಿದ್ದಾರೆ. ಒಂದು ಎಕರೆಗೆ 35 ರಿಂದ 40 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ಈಗ ನೀರು ಹರಿಸುವುದನ್ನು ದಿಢೀರ್ ನಿಲ್ಲಿಸಲಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರ್ಕಾರ ರೈತರ ವಿಚಾರದಲ್ಲಿ ಮಕ್ಕಳಾಟ ಆಡುತ್ತಿದೆ. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನರವರು ನೀರು ಹರಿಸುವುದನ್ನು ಯಾವ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ರೈತರಿಗೆ ಸುಳ್ಳು ಆಶ್ವಾಸನೆ ನೀಡಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಅವರಿಗೆ ದಾವಣಗೆರೆ ಜಿಲ್ಲೆಯ ರೈತರ ಹಿತಾಸಕ್ತಿ ಮಾಡುವ ಬದ್ದತೆ ಇಲ್ಲ ಎಂದು ಕಿಡಿಕಾರಿದ್ದಾರೆ.
ಆದ್ದರಿಂದ ರೈತರು ಸೋಮವಾರದಂದು ದಾವಣಗೆರೆ ಬಂದ್ ಕರೆ ಕೊಟ್ಟಿದ್ದಾರೆ. ರೈತರ ಹೋರಾಟ ನ್ಯಾಯಯುತವಾಗಿದೆ. ಆದ್ದರಿಂದ ರೈತರು ಸೋಮವಾರ ಕರೆದ ದಾವಣಗೆರೆ (Davanagere) ಬಂದ್ ಗೆ ದಾವಣಗೆರೆ ಜಿಲ್ಲಾ ಬಿಜೆಪಿ ಬೆಂಬಲ ನೀಡಿದೆ. ದಾವಣಗೆರೆ ನಗರದ ಜನತೆ ಭತ್ತ ಬೆಳೆದು ಅನ್ನ ನೀಡುವ ಅನ್ನದಾತ ರೈತರ ದಾವಣಗೆರೆ ಬಂದ್ ಕರೆಗೆ ಬೆಂಬಲ ಮತ್ತು ಸಹಕಾರ ನೀಡಿ ದಾವಣಗೆರೆ (Davanagere) ಬಂದ್ ಯಶಸ್ವಿ ಮಾಡಬೇಕು ಈ ಬಂದ್ ಕಾರ್ಯಕ್ರಮದಲ್ಲಿ ದಾವಣಗೆರೆ ಲೋಕಸಭಾ ಸದಸ್ಯ ಡಾ. ಜಿ. ಎಂ. ಸಿದ್ದೇಶ್ವರ, ಹರಿಹರ ಶಾಸಕ ಬಿ. ಪಿ. ಹರೀಶ್, ಬಿಜೆಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್. ಎಂ. ವೀರೇಶ್ ಹನಗವಾಡಿ ಮನವಿ ಮಾಡಿದ್ದಾರೆ.