SUDDIKSHANA KANNADA NEWS/ DAVANAGERE/ DATE:28-09-2023
ದಾವಣಗೆರೆ (Davanagere): ಚಿತ್ರದುರ್ಗ, ದಾವಣಗೆರೆ (Davanagere) ಜಿಲ್ಲೆಯ ಭವಿಷ್ಯದ ಯುವ ರಾಜಕಾರಣಿ ಸಂಸದ ಸಿದ್ದೇಶ್ವರ ಅವರ ಪುತ್ರ ಅನಿತ್ ಕುಮಾರ್ ಎಂದು ಮಾಯಾಕೊಂಡ ಬಿಜೆಪಿ ಯುವ ನಾಯಕ ಜಿಎಸ್ ಶ್ಯಾಮ್ ಅಭಿಪ್ರಾಯಪಟ್ಟರು.
Read Also This Story:
Davanagere: ದೇವರ ಬೆಳಕೆರೆ ಡ್ಯಾಂನಲ್ಲಿ ಹೃದಯವಿದ್ರಾವಕ ದುರಂತ.. ಓರ್ವ ಪುತ್ರ ರಕ್ಷಿಸಿದ ತಂದೆ ಮತ್ತೊಬ್ಬನ ರಕ್ಷಿಸಲು ಹೋಗಿ ಸಾವು.. ಹೇಗಾಯ್ತು…?
ಅನಿತ್ ಕುಮಾರ್ ಅವರ ಹುಟ್ಟುಹಬ್ಬದ ಹಿನ್ನೆಲೆ ಜಿಎಂಐಟಿ ಅತಿಥಿ ಗೃಹದಲ್ಲಿ ಭೇಟಿ ಮಾಡಿ ಹುಟ್ಟುಹಬ್ಬದ ಶುಭಾಶಯ ಕೋರಿ ಸನ್ಮಾನಿಸಿದ ಬಳಿಕ ಮಾತನಾಡಿದ ಅವರು, ಕೇವಲ ರಾಜಕೀಯ ಮಾತ್ರವಲ್ಲ ಸಾಮಾಜಿಕ ಸೇವೆ ಮಾಡುತ್ತಾ ಬಂದಿರುವ ಜಿ. ಎಂ. ಕುಟುಂಬ ಮೂರು ದಶಕಗಳಿಂದ ಅವಳಿ ಜಿಲ್ಲೆಗಳಲ್ಲಿ ಚಿರಪರಿಚಿತ ಹೆಸರು. ದಾವಣಗೆರೆ- ಚಿತ್ರದುರ್ಗದಲ್ಲಿ ತಾತಾ ಹಾಗೂ ತಂದೆಯ ಸೇವೆ ಮತ್ತು ಪ್ರತಿಷ್ಟಿತೆಯ ಹೆಸರನ್ನು ಉಳಿಸಿಕೊಂಡು ಹೋಗುತ್ತಿದ್ದಾರೆ. ಎಲ್ಲಾ ವರ್ಗದ ಸಮೂದಾಯದವರನ್ನು ಸಮಾನವಾಗಿ ಕಾಣುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ ಜಿಎಂ ಕುಟುಂಬ ಎಂದರು.
ಪ್ರತಿಷ್ಠಿತ ಕುಟುಂಬ ಕುಡಿಯಾಗಿರುವ ಜಿಎಸ್. ಅನಿತ್ ಕುಮಾರ್ ರವರ ಉಜ್ವಲ ರಾಜಕೀಯ ಭವಿಷ್ಯವಿದ್ದು ಇವರ ಸೇವೆ ಜನರಿಗೆ ಅವಶ್ಯಕತೆ ಇದೆ. ರಾಜಕೀಯದಲ್ಲಿ ಉತ್ತುಂಗದ ಮಟ್ಟಕ್ಕೆ ಏರಲಿ ಎಂದು ಜಿಎಸ್.ಶ್ಯಾಮ್ ಶುಭ ಕೋರಿದರು.
ಈ ವೇಳೆಯಲ್ಲಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರೂ ಆದ ಉತ್ತರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಲೋಕಿಕೆರೆ ನಾಗರಾಜ್, ಬಿಜೆಪಿ ಹಿರಿಯಾ ಮುಖಂಡ ಬಿ. ಟಿ. ಸಿದ್ದಪ್ಪ, ಶೋಷಿತ ವರ್ಗಗಳ ಮುಖಂಡ ಬಾಡದ ಆನಂದರಾಜ್, ಬಿಜೆಪಿ ಯುವ ಮುಖಂಡ ಪಿ. ಆರ್. ಹಳ್ಳಿ ಶಿವಕುಮಾರ್, ರವಿಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.