ಭಾರತ ತಂಡದ ಮಾಜಿ ಸ್ಟಾರ್ ಆಟಗಾರ ವಿನೋದ್ ಕಾಂಬ್ಳಿ ಆರೋಗ್ಯ ಹದೆಗೆಟ್ಟಿದ್ದು ಥಾಣೆಯ ಅಕ್ರಿತಿ ಆಸ್ಪತ್ರೆಗೆ ದಾಖಲಿಸಲಾಗಿದೆ, ವೈದ್ಯರ ಮೇಲ್ವಿಚಾರಣೆಯಲ್ಲಿರುವ ಕಾಂಬ್ಳಿ ಆರೋಗ್ಯ ಗಂಭೀರವಾಗಿದೆ ಎಂದು ವರದಿಯಾಗಿದೆ.
ಕಳೆದ ಕೆಲದಿನಗಳಿಂದ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದ ಕಾಂಬ್ಳಿ, ಇತ್ತಿಚಿಗೆ ನಡೆದ ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ಜರುಗಿದ ರಮಾಕಾಂತ್ ಅಚ್ರೆಕರ್ ರವರ ಸ್ಮಾರಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಈ ಕಾರ್ಯಕ್ರಮಕ್ಕೆ ಭಾರತದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಈ ಸಮಯದಲ್ಲಿ ಅವರ ಅನಾರೋಗ್ಯದಿಂದ ಬಳಲುತ್ತಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಆಕ್ರಿತಿ ಆಸ್ಪತ್ರೆಯು ಕಾಂಬ್ಳಿ ಅವರ ಆರೋಗ್ಯ ಗಂಭಿರವಾಗಿದ್ದು ಅವರನ್ನು ತೀವ್ರ ನಿಘ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಪ್ರಕಟಣೆ ಹೊರಡಿಸಿದೆ.ಮೂತ್ರದ ಸೊಂಕು ಹಾಗೂ ಅನೇಕ ಸಮಸ್ಯೆಗಳಿಗೆ ತುತ್ತಾಗಿರುವ ಅವರು ದಿನಕಳೆದಂತೆ ಅವರ ಆರೋಗ್ಯ ಕೂಡ ಹದೆಗೆಡುತ್ತಿದೆ, ಈ ವಿಷಯ ತಿಳಿದ ಕಪಿಲ್ ದೇವ್ ಹಾಗೂ ಅನೇಕ ಕ್ರಿಕೆಟಿಗರು ಸಹಾಯ ಮಾಡುವುದಾಗಿ ಹೇಳಿಕೊಂಡಿದ್ದಾರೆ.
1991ರಲ್ಲಿ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಕಾಂಬ್ಳಿ ಟೀಂ ಇಂಡಿಯಾ ಪರ ಒಟ್ಟು 104 ಏಕದಿನ ಪಂದ್ಯಗಳು ಮತ್ತು 17ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ, ಟೆಸ್ಟ್ ಅಲ್ಲಿ 1084 ಮತ್ತು ಏಕದಿನದಲ್ಲಿ 2477 ರನ್ ಗಳನ್ನು ಗಳಿಸಿದ್ದಾರೆ