Home ದಾವಣಗೆರೆ ದಾವಣಗೆರೆ ಪ್ರಥಮ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ: ಯಶಾ ದಿನೇಶ್ ಹೆಗಲಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಹೊಣೆ!
ದಾವಣಗೆರೆಬೆಂಗಳೂರು

ದಾವಣಗೆರೆ ಪ್ರಥಮ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ: ಯಶಾ ದಿನೇಶ್ ಹೆಗಲಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಹೊಣೆ!

Share
ದಾವಣಗೆರೆ
Share

ದಾವಣಗೆರೆ: ಆಗಸ್ಟ್ 8 ಮತ್ತು 9 ರಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಪ್ರಪ್ರಥಮ ಬಾರಿಗೆ ಆಯೋಜಿಸಲು ಉದ್ದೇಶಿಸಿರುವ ಪ್ರಥಮ ಜಿಲ್ಲಾ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮಗಳ ಹೊಣೆಯನ್ನು ಜಿಲ್ಲೆಯ ಸಾಂಸ್ಕೃತಿಕ ಸಂಘಟಕಿ ಹಾಗೂ ಸುಶ್ರಾವ್ಯ ಸಂಗೀತ ವಿದ್ಯಾಲಯದ ಸಂಸ್ಥಾಪಕಿ ಯಶಾ ದಿನೇಶ್ ಅವರಿಗೆ ವಹಿಸಲಾಗಿದೆ ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ತೊಗಲೇರಿ ಹೇಳಿದರು‌.

ಅವರು ನಗರದ ಕುವೆಂಪು ಕನ್ನಡ ಭವನದಲ್ಲಿ ನಡೆದ ಸಮ್ಮೇಳನದ ಮೂರನೇ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.

ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಮಾತನಾಡಿ ಸಮ್ಮೇಳನ ಯಶಸ್ವಿಯಾಗಿ ನಡೆಯಲು ಹಣಕಾಸು ಸಂಗ್ರಹಣೆ ಅತೀ ಮುಖ್ಯವಾಗಿದೆ‌. ಹಾಗಾಗಿ ಎಲ್ಲರೂ ಹಣಕಾಸು ಸಂಪನ್ಮೂಲ ಸಂಗ್ರಹಣೆಯತ್ತ ಗಮನ ಕ್ರೋಡೀಕರಿಸಬೇಕು ಎಂದು ಕರೆ ನೀಡಿದರು‌.

ಸಭೆಯಲ್ಲಿ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು ಅಗತ್ಯವಿರುವ ವಿಷಯಗಳ ಬಗ್ಗೆ ವಿಸ್ತ್ರತವಾದ ಚರ್ಚೆ ನಡೆಸಲಾಯಿತು ಎಂದು ಪೂರ್ವಸಿದ್ಧತೆಗಳ ಬಗ್ಗೆ ಸಮ್ಮೇಳನದ ಸಂಚಾಲಕಿ ವೀಣಾ ಕೃಷ್ಣಮೂರ್ತಿ ಮಾಹಿತಿ ನೀಡಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯ ಮರಿಯಾಚಾರ್ ಮಾತನಾಡಿ ಸಮ್ಮೇಳನಕ್ಕೆ ಅಗತ್ಯ ಸಹಕಾರ ನೀಡುವುದಾಗಿ ವಾಗ್ದಾನವಿತ್ತರು.

ಸಭೆಯಲ್ಲಿ ಹಿರಿಯರಾದ ಜಯಮ್ಮ ನೀಲಗುಂದ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಜಯಲಕ್ಷ್ಮಿ ಮಹೇಶ್, ದಾವಣಗೆರೆ ತಾಲೂಕು ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ, ವಿನೂತನ ಮಹಿಳಾ ಸಮಾಜದ ಅಧ್ಯಕ್ಷೆ ಹೇಮಾ ಗಣೇಶ್ ಶೇಟ್, ಕದಳಿ ವೇದಿಕೆಯ ಅಧ್ಯಕ್ಷೆ ನಿರ್ಮಲಾ ಶಿವಕುಮಾರ್, ಸಾಂಸ್ಕೃತಿಕ ಸಂಘಟಕಿ ಹೇಮಾ ಶಾಂತಪ್ಪ ಪೂಜಾರಿ, ಯಶಾ ದಿನೇಶ್, ಕೋಮಲ ವಸಂತಕುಮಾರ್, ಕನ್ನಡಪರ ಹೋರಾಟಗಾರ್ತಿ ಸುವರ್ಣಮ್ಮ ಶಿವಮೂರ್ತಿ, ಶಕುಂತಲಮ್ಮ, ಮಲ್ಲಮ್ಮ ನಾಗರಾಜ್, ಸಾಹಿತಿ ಓಂಕಾರಮ್ಮ ರುದ್ರಮುನಿಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾದ ಕುಸುಮ ಲೋಕೇಶ್, ಪತ್ರಕರ್ತೆ ರುದ್ರಮ್ಮ, ಪತ್ರಕರ್ತೆ ದೇವಿಕಾ ಸುನೀಲ್, ಪತ್ರಕರ್ತೆ ಸುನಿತಾ ಪ್ರಕಾಶ್, ಸಾಹಿತಿ ಡಾ.ರೂಪಶ್ರೀ ಶಶಿಕಾಂತ್, ಸಾಹಿತಿ ಜಿ.ಎಸ್.ಗಾಯತೆ, ಸುನಂದಾ ವರ್ಣೇಕರ್, ಮಮತಾ ನಾಗರಾಜ್, ವಕೀಲೆ ಸುಧಾ, ಪುಷ್ಪಾ ಬಸವರಾಜ್, ಇಂದಿರಾ ರಂಗನಾಥ ರೆಡ್ಡಿ, ಮಹಾದೇವಿ ಹೆಚ್, ಶ್ಯಾಮಲಾ ದೇವಿ, ಶೋಭಾ ಜೆ, ಟಿ.ಎಂ.ಸರ್ವಮಂಗಳ, ಶೋಭಾ ರುದ್ರೇಶ್, ಜಿಲ್ಲಾ ಕಸಾಪ ಪದಾಧಿಕಾರಿಗಳಾದ ರೇವಣಸಿದ್ದಪ್ಪ ಅಂಗಡಿ, ಸಿ.ಜಿ.ಜಗದೀಶ್ ಕೂಲಂಬಿ, ಮರಿಯಾಚಾರ್ ಮತ್ತಿತರರು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *