Home ದಾವಣಗೆರೆ ವರುಣನ ಆಗಮನಕ್ಕಾಗಿ ದಾವಣಗೆರೆ ನಗರದೇವತೆ ದುರ್ಗಾಂಬಿಕಾ ದೇವಿಯ ಎಡೆ ಜಾತ್ರೆ ಜೂನ್ 23ರ ನಾಳೆ
ದಾವಣಗೆರೆಬೆಂಗಳೂರು

ವರುಣನ ಆಗಮನಕ್ಕಾಗಿ ದಾವಣಗೆರೆ ನಗರದೇವತೆ ದುರ್ಗಾಂಬಿಕಾ ದೇವಿಯ ಎಡೆ ಜಾತ್ರೆ ಜೂನ್ 23ರ ನಾಳೆ

Share
ದಾವಣಗೆರೆ
Share

ದಾವಣಗೆರೆ: ನಗರದೇವತೆ ಶ್ರೀ ದುರ್ಗಾಂಬಿಕಾದೇವಿ ದೇವಸ್ಥಾನ ಟ್ರಸ್ಟ್ ವತಿಯಿಂದ ಜೂನ್ 23 ರಂದು ಶ್ರೀದೇವಿಯ ಎಡೆ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.

ಹಿಂದಿನಿಂದಲೂ ಪೂರ್ವಜರು ನಡೆಸಿಕೊಂಡು ಬಂದ ಸಂಪ್ರದಾಯದಂತೆ ಮಳೆ ಇಲ್ಲದೆ, ಬೆಳೆಯಿಲ್ಲದೆ ಬರಗಾಲದ ಪರಿಸ್ಥಿತಿ ಆವರಿಸಿದ ಸಂದರ್ಭದಲ್ಲಿ ರೈತರು, ದನಕರುಗಳು, ಪಶುಪಕ್ಷಿಗಳು, ವ್ಯಾಪಾರಸ್ಥರು, ಭಕ್ತಾಧಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾದಾಗ ದುರ್ಗಾಂಬಿಕಾ ದೇವಿಯ ಮೊರೆ ಹೋಗಿ ಎಡೆ ಜಾತ್ರೆ ಮಾಡುವುದು ವಾಡಿಕೆಯಾಗಿದೆ.

ಈ ಹಿನ್ನೆಲೆಯಲ್ಲಿ ದೇವಸ್ಥಾನದ ಟ್ರಸ್ಟ್ ಧರ್ಮದರ್ಶಿಗಳು ಒಟ್ಟಾಗಿ ಸೇರಿ ತೀರ್ಮಾನ ಕೈಗೊಂಡು ಮಂಗಳವಾರದಂದು ಎಡೆಜಾತ್ರೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಲಾಗಿದೆ.

ಜಾತ್ರೆಯ ದಿನದಂದು ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿದ್ದು, ಈ ಎಲ್ಲಾ ಧಾರ್ಮಿಕ ಕಾರ್ಯಗಳಿಗೆ ಸಾರ್ವಜನಿಕರು ಹಾಗೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕರಿಸಬೇಕಾಗಿ ದೇವಸ್ಥಾನ ಟ್ರಸ್ಟ್ ಕಾರ್ಯಾಧ್ಯಕ್ಷರು ವಿನಂತಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles