Home ದಾವಣಗೆರೆ ಸಂಜೀತ್ ಡ್ರಗ್ಸ್ ಹಾಗೂ ಮದ್ಯದ ದಾಸಿಯನ್ನಾಗಿ ಮಾಡಿದ್ದ: ಹೋಂಸ್ಟೇನಲ್ಲಿ ನಿಗೂಢವಾಗಿ ಮೃತಪಟ್ಟ ಬೆಂಗಳೂರಿನ ಯುವತಿ ಪೋಷಕರ ಗಂಭೀರ ಆರೋಪ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಸಂಜೀತ್ ಡ್ರಗ್ಸ್ ಹಾಗೂ ಮದ್ಯದ ದಾಸಿಯನ್ನಾಗಿ ಮಾಡಿದ್ದ: ಹೋಂಸ್ಟೇನಲ್ಲಿ ನಿಗೂಢವಾಗಿ ಮೃತಪಟ್ಟ ಬೆಂಗಳೂರಿನ ಯುವತಿ ಪೋಷಕರ ಗಂಭೀರ ಆರೋಪ!

Share
ಹೋಂಸ್ಟೇ
Share

ಚಿಕ್ಕಬಳ್ಳಾಪುರ: ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣದ ಸಮೀಪದ ಹೋಂಸ್ಟೇಯೊಂದರಲ್ಲಿ ಬೆಂಗಳೂರು ಮೂಲದ 26 ವರ್ಷದ ಫಿಜಿಯೋಥೆರಪಿಸ್ಟ್ ಯುವತಿ ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅದೇ ಕೋಣೆಯಲ್ಲಿ ಆಕೆಯ ಪ್ರಿಯಕರ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಮಾತ್ರವಲ್ಲ, ಯುವತಿ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಇದರಿಂದಾಗಿ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಯುವತಿಗೆ ಸಂಜೀತ್ ಡ್ರಗ್ಸ್ ಹಾಗೂ ಮದ್ಯದ ದಾಸಿಯನ್ನಾಗಿ ಮಾಡಿದ್ದ ಎನ್ನಲಾಗಿದೆ. ಅಲ್ಲದೆ ಆಕೆಗೆ ದೈಹಿಕ ಹಿಂಸೆ ನೀಡುತ್ತಿದ್ದ ಎಂದು ಪೋಷಕರು ಆರೋಪಿಸಿದ್ದಾರೆ. ಇತ್ತೀಚೆಗಷ್ಟೇ ಸುರಭಿ ಮೈಸೂರಿನ ರಿಹ್ಯಾಬ್ ಸೆಂಟರ್‌ನಲ್ಲಿ 6 ತಿಂಗಳ ಕಾಲ ಚಿಕಿತ್ಸೆ ಪಡೆದು ಬೆಂಗಳೂರಿನ ತಾಯಿ ಮನೆಗೆ ಮರಳಿದ್ದರು.

ಕೋಣೆಯನ್ನು ಪರಿಶೀಲಿಸಿದಾಗ ಪೊಲೀಸರಿಗೆ ಹಗ್ಗ, ಮಾತ್ರೆಗಳು, ವಾಂತಿ ಮಾಡಿದ ಗುರುತು ಹಾಗೂ ದಿಂಬು ಪತ್ತೆಯಾಗಿದೆ. ಆದರೆ ಯುವತಿಯ ದೇಹದ ಮೇಲೆ ಯಾವುದೇ ಬಾಹ್ಯ ಗಾಯದ ಗುರುತುಗಳಿಲ್ಲ. ಹೀಗಾಗಿ ಇದು ಕೊಲೆಯೋ, ವಿಷಪ್ರಾಶನವೋ ಅಥವಾ ಆತ್ಮಹತ್ಯೆಯೋ ಎಂಬುದು ಪೋಸ್ಟ್‌ಮಾರ್ಟಂ ವರದಿ ಬಂದ ನಂತರವಷ್ಟೇ ತಿಳಿಯಬೇಕಿದೆ ಎಂದು ಚಿಕ್ಕಬಳ್ಳಾಪುರ ಎಸ್‌ಪಿ ಕುಶಾಲ್ ಚೌಕ್ಸಿ ತಿಳಿಸಿದ್ದಾರೆ. ಸದ್ಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಬೆಂಗಳೂರಿನ ಸುರಭಿ (26) ಮೃತಪಟ್ಟ ಯುವತಿ. ಕೋಣೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಆಕೆಯ ಪ್ರಿಯಕರ, ಕೇರಳ ಮೂಲದ ಸಂಜೀತ್ ಅಲಿ ಎಂಬಾತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಪ್ರಕರಣದ ಹಿನ್ನೆಲೆ ಮತ್ತು ಕುಟುಂಬದ ಆರೋಪ:

ಮೃತ ಸುರಭಿ ಹಾಗೂ ಸಂಜೀತ್ ಅಲಿ ಕಳೆದ ಕೆಲವು ಸಮಯದಿಂದ ಪ್ರೀತಿಸುತ್ತಿದ್ದರು. ಆದರೆ ಇವರ ಸಂಬಂಧಕ್ಕೆ ಯುವತಿಯ ಮನೆಯವರಿಂದ ತೀವ್ರ ವಿರೋಧವಿತ್ತು. ಈ ಹಿಂದೆ ಇಬ್ಬರೂ ಮನೆಯವರನ್ನು ಎದುರಿಸಿ ಓಡಿಹೋಗಿದ್ದರು. ಈ ವೇಳೆ ಪೋಷಕರು ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ಆದರೆ ತಾನು ಮೇಜರ್ ಆಗಿದ್ದು, ಸ್ವಇಚ್ಛೆಯಿಂದ ಇರುವುದಾಗಿ ಸುರಭಿ ತಿಳಿಸಿದ್ದರು. ಆ ಬಳಿಕ ಇಬ್ಬರ ನಡುವೆ ಗಲಾಟೆ ನಡೆದಿತ್ತು.

ಹೋಂಸ್ಟೇನಲ್ಲಿ ನಡೆದಿದ್ದೇನು?

ಕ್ರೀಡಾ ಪ್ರಾಧಿಕಾರ (SAI) ಕ್ಯಾಂಪಸ್‌ನಲ್ಲಿ ಸ್ವಯಂಸೇವಕಿಯಾಗಿ ಕೆಲಸ ಮಾಡಲು ಸುರಭಿ 4 ದಿನಗಳ ಹಿಂದೆ ಚಿಕ್ಕಬಳ್ಳಾಪುರಕ್ಕೆ ಬಂದಿದ್ದರು. ಈ ವಿಷಯ ತಿಳಿದ ಸಂಜೀತ್ ಕೇರಳದಿಂದ ಇಲ್ಲಿಗೆ ಬಂದು ಇಬ್ಬರೂ ಕಳೆದ ಮೂರು ದಿನಗಳಿಂದ ಹೋಂಸ್ಟೇನಲ್ಲಿ ತಂಗಿದ್ದರು ಎನ್ನಲಾಗಿದೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles