SUDDIKSHANA KANNADA NEWS/ DAVANAGERE/ DATE:14-10-2023
ಅಹಮದಾಬಾದ್: ವಿಶ್ವಕಪ್ ಕ್ರಿಕೆಟ್ (Cricket World Cup)ಪಂದ್ಯಾವಳಿಯಲ್ಲಿ ಇದುವರೆಗೆ ಭಾರತ ತಂಡದ ವಿರುದ್ಧ ಪಾಕಿಸ್ತಾನ ಗೆದ್ದಿಲ್ಲ. ವಿಶ್ವಕಪ್ ಪಂದ್ಯಾವಳಿ ಆರಂಭವಾದಾಗಿನಿಂದಲೂ ಇತಿಹಾಸ ಮರುಕಳಿಸುತ್ತಲೇ ಇದೆ. ಹಾಗಾಗಿ, ಇಂದಿನ ಪಂದ್ಯವು ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ವಿಶ್ವಕಪ್ ನಲ್ಲಿ ಭಾರತದ ವಿರುದ್ಧದ ಪಾಕಿಸ್ತಾನ ಗೆಲ್ಲಲು ಸಾಧ್ಯವಾಗಿಲ್ಲ. ಇಂದಿನ ಪಂದ್ಯದಲ್ಲಿ ಗೆಲುವಿಗೆ ಭಾರೀ ಪೈಪೋಟಿ ನೀಡುವುದು ಸಹಜ. ಆದ್ರೆ, ಭಾರತದ ಬೌಲಿಂಗ್, ಫೀಲ್ಡಿಂಗ್, ಬ್ಯಾಟಿಂಗ್ ಬಲಿಷ್ಠವಾಗಿರುವುದರಿಂದ ಪಾಕಿಸ್ತಾನ ತಂಡಕ್ಕೆ ಗೆಲುವು ಸುಲಭ ಸಾಧ್ಯವಿಲ್ಲ. ಇದು ಆ ತಂಡಕ್ಕೂ ಗೊತ್ತಿದೆ.
Read Also This Story:
STOCK MARKET: ಷೇರುಪೇಟೆಯಲ್ಲಿ ಅನಿಶ್ಚಿತತೆ ಮುಂದುವರಿಕೆ : ನಿಫ್ಟಿ 42 ಅಂಕ, ಸೆನ್ಸೆಕ್ಸ್ 125 ಅಂಕ ಇಳಿಕೆ
ಏಕದಿನ ವಿಶ್ವಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನವು ಏಳು ಬಾರಿ ಸೆಣಸಾಟ ನಡೆಸಿವೆ. ಈ ಪ್ರತಿಯೊಂದು ಮುಖಾಮುಖಿಯಲ್ಲಿ ಭಾರತವು ವಿಜಯದುಂದುಬಿ ಮೊಳಗಿಸಿದೆ. ಹೆಡ್-ಟು-ಹೆಡ್ ರೆಕಾರ್ಡ್ ನಲ್ಲಿ ಭಾರತದ್ದೇ ಪಾರುಪತ್ಯ. ಆದ್ರೆ, ಪಾಕಿಸ್ತಾನಕ್ಕೆ ಗೆಲ್ಲಲಾಗಿಲ್ಲ ಎಂಬ ಕೊರಗೂ ಇದು. ಇಂದಿನ ಪಂದ್ಯದಲ್ಲಿ ಭಾರತ ಗೆದ್ದರೆ ಪಾಕಿಸ್ತಾನ ಭಾರೀ ಮುಖಭಂಗ ಅನುಭವಿಸಲಿದೆ. ಟೀಂ ಇಂಡಿಯಾ ಸೋತರೆ ದಾಖಲೆಗೆ ಬ್ರೇಕ್ ಬೀಳುತ್ತದೆ. ಹಾಗಾಗಿ, ಈ ಪಂದ್ಯ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ವಿಶ್ವಕಪ್ ನ ರೆಕಾರ್ಡ್ ಮುರಿಯಲೇಬೇಕೆಂದು ಪಣ ತೊಟ್ಟಿರುವ ಪಾಕಿಸ್ತಾನ ಆಟಗಾರರು, ಪಾಕ್ ಗೆ ಮತ್ತೆ ಸೋಲಿನ ರುಚಿ ಉಣಿಸಲೇಬೇಕೆಂದು ಪಣ ತೊಟ್ಟಿರುವ ಭಾರತ ತಂಡ. ಈ ಎರಡೂ ತಂಡಗಳ ಕಾದಾಟ ವೀಕ್ಷಿಸಲು ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ.
ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್,
ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್, ಸೂರ್ಯಕುಮಾರ್.
ಪಾಕಿಸ್ತಾನ ತಂಡ:
ಬಾಬರ್ ಆಜಮ್ (ನಾಯಕ), ಶಾದಾಬ್ ಖಾನ್, ಫಖರ್ ಜಮಾನ್, ಇಮಾಮ್-ಉಲ್-ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಜ್ವಾನ್, ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಸಲ್ಮಾನ್ ಅಲಿ ಅಘಾ, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಹ್ಯಾರಿಸ್ ರೌಫ್, ಹಸನ್ ಅಲಿ, ಶಾಹೀನ್ ಅಫ್ರಿದಿ , ಮೊಹಮ್ಮದ್ ವಾಸಿಂ.
ಪಿಚ್ ವರದಿ:
ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯಾವಳಿಯ ಆರಂಭಿಕ ಪಂದ್ಯದಂತೆಯೇ ನರೇಂದ್ರ ಮೋದಿ ಕ್ರೀಡಾಂಗಣ ಮೈದಾನವು ಬ್ಯಾಟ್ಸ್ಮನ್ಗಳಿಗೆ ಹೇಳಿ ಮಾಡಿಸಿದ ತಾಣ. ಒಣ ಹುಲ್ಲಿನ ಹೊದಿಕೆಯಿದ್ದು, ಬ್ಯಾಟ್ ಮಾಡಲು ಸಹಕಾರಿಯಾಗಿದೆ. ಬ್ಯಾಟ್ಸ್ಮನ್ಗಳ ಬ್ಯಾಟ್ಗೆ ಚೆಂಡು ಸರಾಗವಾಗಿ ಬರುವುದನ್ನು ಎದುರು ನೋಡಬಹುದು. ಅದೇನೇ ಇದ್ದರೂ, ಸೀಮರ್ಗಳಿಗೆ ಹೆಚ್ಚುವರಿ ಬೌನ್ಸ್ ಸ್ಪರ್ಶವಿರಬಹುದು, ಈ ಆಟಕ್ಕೆ ತಾಜಾ ಪಿಚ್ ಅನ್ನು ಸಿದ್ಧಪಡಿಸಲಾಗುವುದು. ಸ್ಪಿನ್ನರ್ ಗಳು ವಿಕೆಟ್ ಪಡೆಯಲು ಪರದಾಟ ನಡೆಸಬಹುದು. ಇಲ್ಲವೇ ವಿಕೆಟ್ ಹೆಚ್ಚು ಪಡೆಯಲೂಬಹುದು.