ಬೆಂಗಳೂರು: ಶುಕ್ರವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಕರ್ನಾಟಕಾದ್ಯಂತ ದಾಳಿ ನಡೆಸಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಿ ಎಲ್ ಆನಂದ ಅವರ ಬೆಂಗಳೂರು ಮನೆ ಮೇಲೂ ದಾಳಿ ನಡೆದಿದೆ.
ಮೂಲತಃ ಮಂಡ್ಯದವರಾಗಿರುವ ಆನಂದ್ ಇಂಡಿಯಾ ಆರ್ಮಿಯಲ್ಲಿ ಸುಮಾರು 15 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು . ಈ ನಡುವೆ ರಾಜ್ಯ ಸರ್ಕಾರ ಸಿ ಎಲ್ ಆನಂದ ಅವರನ್ನು ವರ್ಗಾವಣೆಗೊಳಿಸಿ ಬಳಿಕ ಆದೇಶ ತಡೆಹಿಡಿದಿತ್ತು.
ಬೆಂಗಳೂರು ನಗರದ ಆರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇಬ್ಬರು, ಶಿವಮೊಗ್ಗ ಜಿಲ್ಲೆಯ ಇಬ್ಬರು, ಯಾದಗಿರಿ, ತುಮಕೂರಿನಲ್ಲಿ ತಲಾ ಓರ್ವ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.