(Aadhaar Pan Card) ಪಾನ್ ಕಾರ್ಡ್ ನೊಂದಿಗೆ ಆಧಾರ್ ಜೋಡಣೆಯನ್ನು ಮಾಡಲು ದಂಡ ಕಟ್ಟಿದ ಬಡವರಿಗೆ ಸಂಕಷ್ಟ ಎದುರಾಗಿದೆ.
ಹೌದು, ಈ ಹಿಂದೆ ಪಾನ್ ಕಾರ್ಡ್ ಜೊತೆ ಆಧಾರ್ ಲಿಂಕ್ ಮಾಡಿಸಲು ಅವಕಾಶ ನೀಡಲಾಗಿತ್ತು. ಆದರೆ ಹಲವು ಜನ ಮಾಡಿಸದೇ ಇರುವ ಕಾರಣ 1,000 ಫೈನ್ ಮೂಲಕ ಪಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಿಸಿದ್ದಾರೆ. ಆದರೆ ಫೈನ್ ಮೂಲಕ ಲಿಂಕ್ ಮಾಡಿದ ಬಡವರಿಗೆ ಸಂಕಷ್ಟ ಎದುರಾಗಿದೆ.
ಲಿಂಕ್ ಮಾಡಲು ದಂಡ ಕಟ್ಟಿದವರಿಗೆ ತಲೆ ಬಿಸಿ:
ಪಾನ್ ಕಾರ್ಡ್ ಜೊತೆ ಆಧಾರ್ ಲಿಂಕ್ ಅನ್ನು ಅಂತಿಮ ಗಡುವು ಮುಗಿದ ಬಳಿಕ ಮಾಡಿಸಿದವರು 1,000 ದಂಡವನ್ನು ಆದಾಯ ತೆರಿಗೆ ಇಲಾಖೆಗೆ ಆನ್ ಲೈನ್ ನಲ್ಲಿ ಪಾವತಿ ಮಾಡಿದ್ದರು. ಆದಾಯ ತೆರಿಗೆ ಇಲಾಖೆಯ ಖಾತೆಗೆ ಸಂದಾಯವಾದ ಹಣ ದಂಡದ ಶುಲ್ಕವಾದರೂ, ಅದನ್ನು ಇಲಾಖೆಯ ಸಾಫ್ಟ್ ವೇರ್ ಆದಾಯ ತೆರಿಗೆಯೆಂದು ಪರಿಗಣಿಸಿದೆ. ಆದಾಯ ತೆರಿಗೆ ಪಾವತಿದಾರರು ಎಂದು ಇವರೆಲ್ಲರಿಗೆ ರಾಜ್ಯ ಸರ್ಕಾರ ನೀಡುವ ಗೃಹಲಕ್ಷ್ಮಿ ಹಣ ನಿಲ್ಲಿಸುವ ಬಗ್ಗೆ ಯೋಚಿಸಲಾಗುತ್ತಿದೆ. ಮತ್ತೊಂದೆಡೆ ಅವರ ಬಿಪಿಎಲ್ ಕಾರ್ಡ್ ಮರುಪರಿಶೀಲನೆಗೆ ಒಳಪಡಿಸಲು ಸೂಚಿಸಲಾಗಿದೆ.
ಹೀಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯಲ್ಲಿ ಒಂದಾದ 2000 ಗೃಹಲಕ್ಷ್ಮಿ ಹಣ ಹಾಗೂ ಬಿಪಿಎಲ್ ರೇಷನ್ ಕಾರ್ಡ್ ಕಳೆದುಕೊಳ್ಳವಂತೆ ಆಗಿದೆ ಎನ್ನಲಾಗಿದೆ.